ಬೈಲೂರು ಪರಶುರಾಮ ಥೀಂ ಪಾರ್ಕ್ ಪರಶುರಾಮ ಕಂಚಿನ ಮೂರ್ತಿಯ ವಿವಾದದ ಬಗ್ಗೆ ಸ್ಪಷ್ಟೀಕರಣ ಕೋರಿದ ಬಿಜೆಪಿ

Picture of RB NEWS

RB NEWS

Bureau Report

ಬೈಲೂರು ಪರಶುರಾಮ ಥೀಂ ಪಾರ್ಕ್ ಪರಶುರಾಮ ಕಂಚಿನ ಮೂರ್ತಿಯ ವಿವಾದದ ಬಗ್ಗೆ ಸ್ಪಷ್ಟೀಕರಣ ಕೋರಿದ ಬಿಜೆಪಿ

2024 ಸಪ್ಪೆಂಬರ್ 26ತಂದು ಪರಶುರಾಮ ಥೀಮ್ ಪಾರ್ಕನಲ್ಲಿ ನಿರ್ಮಿಸುತ್ತಿರುವ ಪರಶುರಾಮನ ಮೂರ್ತಿಯ ಕೆಲವೊಂದು ಭಾಗಗಳನ್ನು ಮರುವಿನ್ಯಾಸಗೊಳಿಸಲು ಕ್ರಿಷ್ ಆರ್ಟ್ ವರ್ಲ್ಡ್‌ನ ಶಿಲ್ಪಿ ಕೃಷ್ಣ ನಾಯ್ಕರವರು ಮೂರ್ತಿಯನ್ನು ತನ್ನ ಸುಪರ್ದಿಗೆ ನೀಡುವಂತೆ ನಿರ್ಮಿತಿ ಕೇಂದ್ರ ಉಡುಪಿ ಇವರಲ್ಲಿ ಕೋರಿತು.

2023 ಅಕ್ಟೋಬರ್ 04ರಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಥೀಮ್ ಪಾರ್ಕಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ ಪ್ರವಾಸಿಗರ ಆಗಮನವನ್ನು ನಿಯಂತ್ರಿಸಿ, ಪೊಲೀಸ್ ರಕ್ಷಣೆಯನ್ನು ಪಡೆದು, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮೂರ್ತಿಯನ್ನು ಮಾರ್ಪಾಡು ಮಾಡುವಂತೆ ಜಿಲ್ಲಾಡಳಿದಿಂದ ಅನುಮತಿ ನೀಡಲಾಗಿತ್ತು.
ಅದು ಅಲ್ಲದೇ ತಮ್ಮ ನಿರ್ದೇಶನದಂತೆ ಪರಶುರಾಮನ ಮೂರ್ತಿಯ ಕೆಲವೊಂದು ಮರುವಿನ್ಯಾಸ ಕೆಲಸಗಳು ಬಾಕಿ ಇದ್ದು ಕಾಮಗಾರಿಯ ಬಾಬು ಪೂರ್ಣಗೊಳಿಸುವ ನಿಮಿತ್ತ ಪರಶುರಾಮನ ಮೂರ್ತಿಯನ್ನು 2023 ಅಕ್ಟೋಬರ್ ೦7ರಂದು ಶಿಲ್ಪಿ ಕೃಷ್ಣ ನಾಯ್ಕರವರಗೆ ನಿರ್ಮಿತಿ ಕೇಂದ್ರ ಉಡುಪಿಯವರು ಸುಪರ್ದಿಗೆ ನೀಡಲಾಗಿತ್ತು.

2023 ಅಕ್ಟೋಬರ್ ೦7ರಂದು ಕಾರ್ಕಳ ತಹಶೀಲ್ದಾರ್ ಅವರು ತಾತ್ಕಾಲಿಕ ಅದೇಶ ಹೊರಡಿಸಿದ್ದು, ಪರಶುರಾಮ ಥೀಂ ಪಾರ್ಕ್‌ನ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ದಿನಾಂಕ 09.10.2023 ರಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ಈ ಪ್ರದೇಶದಲ್ಲಿ ಪ್ರವೇಶಕ್ಕೆ ತಾತ್ಕಾಲಿಕ ತಡೆ ನೀಡಿದ್ದರು‌

ಆದರೆ ಇತ್ತೀಚೆಗೆ ಕ್ರಿಷ್ ಆರ್ಟ್ ವರ್ಲ್ಡ್ ಗ್ಯಾಲೆರಿ ಕೆಂಗೇರಿಯಲ್ಲಿ ಪರಶುರಾಮ ಮೂರ್ತಿಯ ಬಿಡಿಭಾಗಗಳನ್ನು ಕಾರ್ಕಳದ ಪೊಲೀಸರು ಮಹಜರು ಮಾಡುವ ಸಂದರ್ಭ ಕಾರ್ಕಳದ ಕಾಂಗ್ರೆಸ್‌ನ ಮುಖಂಡ ಉದಯ್ ಕುಮಾರ್ ಶೆಟ್ಟಿಯವರು ಪೊಲೀಸರಿಗೆ ನಿರ್ದೇಶನ ನೀಡುತ್ತಿರುವುದು ನಮಗೆ ಪೊಲೀಸ್‌ ಇಲಾಖೆ ಕಾರ್ಯವೈಖರಿ ಬಗ್ಗೆ ಸಂಶಯ ಮೂಡಿಸುತ್ತದೆ.

ಇಷ್ಟೆಲ್ಲ ಕಾನೂನಾತ್ಮಕವಾದ ಪ್ರಕ್ರಿಯೆಗಳ ಮೂಲಕ ಪೊಲೀಸ್ ಭದ್ರತೆಯೊಂದಿಗೆ ಪರಶುರಾಮನ ಮೂರ್ತಿಯನ್ನು ಮರುವಿನ್ಯಾಸಗೊಳಿಸಿ ಕಾಮಗಾರಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಮೂರ್ತಿಯ ಬಿಡಿ ಭಾಗವನ್ನು ತೆಗೆದಿದ್ದಾದರೂ ಏಕೆ..? ಮೂರ್ತಿ ಮೇಲಿನ ಭಾಗ ಕಳುವಾಗಿದೆ ಎಂದು ಬಿಂಬಿತವಾಗಿರುವುದು ಏಕೆ..? ನಿಜವಾಗಿಯೂ ಕಳುವಾಗಿದೆಯೇ..? ಅಥವಾ ತಮ್ಮ ಅನುಮೋದನೆಯಂತೆ ತೆಗೆದಿರುವುದೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಕಾರ್ಕಳ ಬಿಜೆಪಿ ಕೋರಿದೆ.

ಪೊಲೀಸರು ಮಹಜರು ಮಾಡಿರುವ ಮೂರ್ತಿಯ ಬಿಡಿಭಾಗಗಳನ್ನು ಯಾರ ಸುಪರ್ದಿಯಲ್ಲಿರುತ್ತದೆ? ಇದರ ರಕ್ಷಣೆ ಯಾರು ಮಾಡುತ್ತಾರೆ? ಎಂಬ ಅನುಮಾನಗಳನ್ನು ವ್ಯಕ್ತಪಡಿಸಿರುವ ಕಾರ್ಕಳ ಬಿಜೆಪಿ ಘಟಕ ಸ್ವಷ್ಟನೆ ಕೋರುವಂತೆ ಮನವಿ ಮಾಡಿಕೊಂಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top