ಬೈಕ್ ಗಳೇ ಇವರ ಟಾರ್ಗೆಟ್ : ನಾಲ್ವರು ಆರೋಪಿಗಳ ಬಂಧನ


ಕಂಕನಾಡಿ ನಗರ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್
ಮಂಗಳೂರು: ಬಸ್ ಮತ್ತು ರೈಲು ನಿಲ್ದಾಣಗಳು, ಜಾತ್ರೆ, ಕಂಬಳ ನಡೆಯುವ ಸ್ಥಳಗಳಲ್ಲಿ ಪಾರ್ಕ್ ಮಾಡಲಾಗು ತ್ತಿದ್ದ ಬೈಕ್ಗಳನ್ನು ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳವು ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಣಿಕಂಠ ಗೌಡ ಕೆ., ಕಾರ್ಕಳದ ಸತೀಶ್ ಬಂಗೇರ, ಮೂಡುಬಿದಿರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬವರನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಮಣಿಕಂಠ ಗೌಡನು ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ಮತ್ತು ದ.ಕ., ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಬೈಕ್ ಕಳವು ಮಾಡುತ್ತಿದ್ದ. ಮೆಕ್ಯಾನಿಕ್ ಆಗಿದ್ದ ಈತ ಇಗ್ನಿಷನ್ ಸಾಕೆಟ್ನ ಪ್ಲಗನ್ನು ಚಾಕಚಕ್ಯತೆಯಿಂದ ತಪ್ಪಿಸಿ, ಕ್ಷಣಾರ್ಧದಲ್ಲಿ ಕಳ್ಳತನ ಮಾಡಿಕೊಂಡು ಹೋಗುತಿದ್ದ. ರೀಸೇಲ್ ವ್ಯಾಲ್ಯೂ ಇರುವ ಬೈಕ್ಗಳನ್ನು ಕದಿಯುತ್ತಿದ್ದ ಈತ ಹೆಚ್ಚಾಗಿ ಹೀರೋ ಹೋಂಡಾ ಸ್ಲಂಡರ್ ಬೈಕ್ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ಹೀಗೆ ಕದ್ದ ಕೆಲವು ಬೈಕ್ ಗಳನ್ನು ಮೂಡುಬಿದಿರೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಕಂಠ ಸೊರಬ ತಾಲೂಕಿನವನಾಗಿದ್ದರೂ ಕುಟುಂಬದೊಂದಿಗೆ ಮೂಡುಬಿದಿರೆಯಲ್ಲಿ ವಾಸವಾಗಿದ್ದ. ಕದ್ದ ಬೈಕ್ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಮಣಿಕಂಠನಿಂದ ಕದ್ದ ಬೈಕ್ಗಳನ್ನು ಕಾರ್ಕಳದ ಸತೀಶ್ ಬಂಗೇರ, ಮೂಡುಬಿದಿರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬವರು ಖರೀದಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ವಾಹನಗಳನ್ನು ಪಡೆದು ಮಾರಾಟ ಮಾಡುತ್ತಿದ್ದ ಕಾರಣ ಸತೀಶ್ ಬಂಗೇರಾ, ದೀಕ್ಷಿತ್, ಸಂಗಣ್ಣ ಹೊನ್ನಳ್ಳಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಮಣಿಕಂಠ ಗೌಡನು ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ಮತ್ತು ದ.ಕ.,ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಬೈಕ್ ಕಳವು ಮಾಡುತ್ತಿದ್ದ ಮೆಕ್ಯಾನಿಕ್ ಆಗಿದ್ದ ಈತ ಇಗ್ನಿಷನ್ ಸಾಕೆಟ್ನ ಪ್ಲಗನ್ನು ಚಾಕಚಕ್ಯತೆಯಿಂದ ತಪ್ಪಿಸಿ, ಕ್ಷಣಾರ್ಧದಲ್ಲಿ ಕಳ್ಳತನ ಮಾಡಿಕೊಂಡು ಹೋಗುತಿದ್ದ. ರೀಸೇಲ್ ವ್ಯಾಲ್ಯೂ ಇರುವ ಬೈಕ್ಗಳನ್ನು ಕದಿಯುತ್ತಿದ್ದ ಈತ ಹೆಚ್ಚಾಗಿ ಹೀರೋ ಹೋಂಡಾ ಪ್ಲೆಂಡರ್ ಬೈಕ್ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ಹೀಗೆ ಕದ್ದ ಕೆಲವು ಬೈಕ್ ಗಳನ್ನು ಮೂಡುಬಿದಿರೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಕಂಠ ಸೊರಬ ತಾಲೂಕಿನವನಾಗಿದ್ದರೂ ಕುಟುಂಬದೊಂದಿಗೆ ಮೂಡುಬಿದಿರೆಯಲ್ಲಿ ವಾಸವಾಗಿದ್ದ. ಕದ್ದ ಬೈಕ್ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಮಣಿಕಂಠನಿಂದ ಕದ್ದ ಬೈಕ್ಗಳನ್ನು ಕಾರ್ಕಳದ ಸತೀಶ್ ಬಂಗೇರ, ಮೂಡುಬಿದಿರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬವರು ಖರೀದಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ವಾಹನಗಳನ್ನು ಪಡೆದು ಮಾರಾಟ ಮಾಡುತ್ತಿದ್ದ ಕಾರಣ ಸತೀಶ್ ಬಂಗೇರಾ, ದೀಕ್ಷಿತ್, ಸಂಗಣ್ಣ ಹೊನ್ನಳ್ಳಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರಿನ ಬಂದರು, ಪಾಂಡೇಶ್ವರ, ಬಜ್ಜೆ ಮುಲ್ಕಿ, ಉಳ್ಳಾಲ, ಕಂಕನಾಡಿ ನಗರ ಠಾಣೆ ವ್ಯಾಪ್ತಿಯ 15 ಪ್ರಕರಣ ಮತ್ತು ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ 5 ಪ್ರಕರಣ ಸಹಿತ 20 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಆರೋಪಿಗಳ ವಿವರ
- ಮಣಿಕಂಠ ಗೌಡ ಕೆ. (24) ತಂದೆ: ಕೆರೆಸ್ವಾಮಿ, ವಾಸ: ಹೆ ಪಿ ಪೆಟ್ರೋಲ್ ಪಂಪ್ ಹತ್ತಿರ, ಧರ್ಮಸ್ಥಳ ರಸ್ತೆ, ಮೂಡಬಿದ್ರೆ, ದಕ್ಷಿಣ ಕನ್ನಡ ಜಿಲ್ಲೆ, ಮೂಲ ವಿಳಾಸ: ಕಡಸೂರು ಗ್ರಾಮ, ಹೆಚ್ಚೆ ಅಂಚೆ, ಚಂದ್ರಗುತ್ತಿ ಹೋಬಳಿ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ.
• ಸತೀಶ್ ಬಂಗೇರ (32 ), ತಂದೆ: ಜಿನ್ನಪ್ಪ, ವಾಸ: ಡೋರ್ ನಂ 1-123 (ಎ), ಬೆಂಗಡಿ ದರ್ಕಸ್ ಗುಡ್ಡೆ ಹೌಸ್, ಈದು ಗ್ರಾಮ, ಹೊಸ್ಮಾರು ಅಂಚೆ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.
• ದೀಕ್ಷಿತ್, ( 23) ಬಾಲಕೃಷ್ಣ, ವಾಸ: ಗುಡ್ಡಲಪಲ್ಕೆ ಹೌಸ್, ಪಣಪಿಲ ಗ್ರಾಮ, ವಲ್ಪಾಡಿ ಅಂಚೆ, ಮೂಡಬಿದ್ರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ .
• ಸಂಗಣ್ಣ ಹೊನ್ನಾಳ್ಳಿ (30 ), ತಂದೆ: ದಿ|| ರುದ್ರಾಪ್ಪ ಹೊನ್ನಾಳ್ಳಿ, ವಾಸ: ಲಕ್ಕುಂಡಿ ಗ್ರಾಮ, ನವದಗಿ ಅಂಚೆ, ತಾಳಿಕೋಟೆ ತಾಲೂಕು, ವಿಜಯಪುರ ಜಿಲ್ಲೆ. ಹಾಲಿ ವಾಸ: ಕೊಡ್ಯಡ್ಕ, ಮೂಡಬಿದ್ರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ವ್ಯಕ್ತಿಗಳಿಗೆ ನೀಡಿದ್ದು, ಇವರುಗಳನ್ನು ದಸ್ತಗಿರಿ ಮಾಡಿದ್ದು, ನಾಲ್ಕೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಮಂಗಳೂರು ನಗರದ ಬಂದರು, ಪಾಂಡೇಶ್ವರ, ಕಾವೂರು, ಬಜ್ಪೆ, ಮೂಲ್ಕಿ, ಉಳ್ಳಾಲ, ಕಂಕನಾಡಿ ನಗರ ಪೊಲೀಸ್ ಠಾಣೆಗಳ 15 ಪ್ರಕರಣಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ ಮತ್ತು ಉಪ್ಪಿನಂಗಡಿಯ 05 ಪ್ರಕರಣಗಳು ಸೇರಿ ಒಟ್ಟು 20 ಪ್ರಕರಣಗಳನ್ನು ಪತ್ತೆ ಹಚ್ಚಿದ ಕಂಕನಾಡಿ ನಗರ ಪೊಲೀಸರನ್ನು ಮಾನ್ಯ ನಗರ ಪೊಲೀಸ್ ಆಯುಕ್ತರು ಅಭಿನಂದಿಸಿರುತ್ತಾರೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ. ಅನುಪಮ್ ಅಗರ್ವಾಲ್ ಐಪಿಎಸ್ ನಿರ್ದೇಶನದಲ್ಲಿ, ಉಪ ಪೊಲೀಸ್ ಆಯುಕ್ತರು (ಕಾ.ಸು.) ಸಿದ್ದಾರ್ಥ ಗೋಯಲ್, ಐಪಿಎಸ್ ಹಾಗೂ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರಾದ ಶ್ರೀ ರವಿಶಂಕರ್, ಕೆ.ಎಸ್.ಪಿ.ಎಸ್ ಮತ್ತು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್ ರವರ ನೇತೃತ್ವದಲ್ಲಿ ಪಿಎಸ್ಐರವರಾದ ಶಿವಕುಮಾರ್ ಕಾಂಬಳೆ, ವಿನಾಯಕ ಭಾವಿಕಟ್ಟಿ, ಯೋಗಿಶ್ವರನ್, ಎಎಸ್ಐ ಅಶೋಕ್. ಕೆ. ಮತ್ತು ಕ್ರೈಂ ಸಿಬ್ಬಂದಿಗಳಾದ ಜಯಾನಂದ, ಸಂದೀಪ್, ಆಶಿತ್ ವಿಶಾಲ್ ಡಿ’ ಸೋಜಾ, ರಾಘವೇಂದ್ರ, ರಾಜೇಸಾಬ್ ಮುಲ್ಲಾ, ಗಂಗಾಧರ, ಚೇತನ್ ಹಾಗೂ ಕಂಪ್ಯೂಟರ್ ವಿಭಾಗದ ಮನೋಜ್ ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.






































