ಬೈಂದೂರು ಕೋಟಿ- ಚೆನ್ನಯ್ಯ ಜೋಡುಕರೆ ಕಂಬಳ: ಆಮಂತ್ರಣ ಪತ್ರಿಕೆ ಲೋಕಾರ್ಪಣೆಗೈದ ಡಾ. ಎಂ.ಎನ್.ರಾಜೇಂದ್ರ ಕುಮಾರ್
ಮಂಗಳೂರು : ಬೈಂದೂರು ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಕೋಟಿ- ಚೆನ್ನಯ್ಯ ಜೋಡುಕರೆ ಬೈಂದೂರು ಕಂಬಳವು ಏ 17ರಿಂದ 20ರ ತನಕ ಜರಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ನೆರವೇರವೇರಿಸಿದರು.
ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿ ಇರುವ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ಕೇಂದ್ರೀಯಾ ಕಚೇರಿಯಲ್ಲಿ ಆಯೋಜಿಸಿ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಆಮಂತ್ರಣ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ದೀಪಕ್ ಶೆಟ್ಟಿ, ನೆಲ್ಯಾಡಿ, ಶಿವರಾಜ್ ಶೆಟ್ಟಿ ಹುಂಚನಿ, ರವಿ ಶೆಟ್ಟಿ ಕುದ್ರಕೋಡ್, ಆಕರ್ಷ ಪೂಜಾರಿ ಯಳಜಿತ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್ ಇರ್ವತ್ತೂರು, ಪತ್ರಕರ್ತ ಆರ್.ಬಿ.ಜಗದೀಶ್, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್, ಬೆಳಪು ದೇವಿಪ್ರಸಾದ್ ಶೆಟ್ಟಿ, ವಾದಿರಾಜ್ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೋಟ್ಟು ಹಾಗೂ ಉದ್ಯಮಿ ಜಯಪ್ರಕಾಶ್ ತುಂಬೆ ಉಪಸ್ಥಿತರಿದ್ದರು.
ಬೈಂದೂರು ಮುಳ್ಳಿಕಟ್ಟೆ ರಾ.ಹೆ.66 ನಗುಸಿಟಿಯಲ್ಲಿ
ಬೈಂದೂರು ತಾಲೂಕು ರೈತ ಸಂಘ ಪ್ರಸ್ತುತಿ ಪಡಿಸಿದ್ದು, ದೀಪಕ್ ಶೆಟ್ಟಿ ಬೈಂದೂರು ಇವರ ಸಾರಥ್ಯದಲ್ಲಿ ಪ್ರಪ್ರಥಮ ಬಾರಿಯ ಕೋಟಿ ಚೆನ್ನಯ್ಯ ಜೋಡುಕರೆ ಬೈಂದೂರು ಕಂಬಳ ಇದಾಗಿದೆ.
ಏ.17ರಂದು ಸಂಜೆ 5ರಿಂದ ವಿವಿಧ ಕಾರ್ಯಕ್ರಮ ಜರುಗಲಿದೆ.
ಹೆಮ್ಮಾಡಿ ಜನತಾ ಪಿಯು ಕಾಲೇಜು ವತಿಯಿಂದ ಸಾಂಸ್ಕೃತಿಕ ವೈವಿಧ್ಯ. ಸಾಧಕ ಶ್ರೇಷ್ಠರಿಗೆ ಗೌರವಾಭಿನಂದನೆ.
ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯ ಗಾಥೆ ಹಾಗೂ ಇತರ ನೃತ್ಯ ಧಾರೆ ಜರಗಲಿದೆ.
ಏ.18 ಸಂಜೆ 5ರಿಂದ ಸಾಂಸ್ಕೃತಿಕ ವೈವಿಧ್ಯ.
ಏ.19 ಮತ್ತು 20ರಂದು ಬೈಂದೂರು ಕಂಬಳ ನಡೆಯಲಿದೆ.
ಬಹುಮಾನ :

ಹಗ್ಗ ಹಿರಿಯ ವಿಭಾಗ
ಪ್ರಥಮ : 1.5 ಪವಮ್
ದ್ವಿತೀಯ : 3/4 ಪವನ್
ತೃತೀಯ : 1/4 ಪವನ್
ಚತುರ್ಥ : 1/4 ಪವನ್
ನೇಗಿಲು ಹಿರಿಯ ವಿಭಾಗ
ಪ್ರಥಮ : 1.5 ಪವನ್
ದ್ವಿತೀಯ : 3/4 ಪವನ್
ತೃತೀಯ : 1/4 ಪವನ್
ಚತುರ್ಥ : ಚಿನ್ನದ ಪದಕ
ಹಗ್ಗ ಕಿರಿಯ ವಿಭಾಗ
ಪ್ರಥಮ : 1 ಪವನ್
ದ್ವಿತೀಯ : 1/2 ಪವನ್
ತೃತೀಯ : ಚಿನ್ನದ ಪದಕ
ಚತುರ್ಥ : ಚಿನ್ನದ ಪದಕ
ನೇಗಿಲು ಕಿರಿಯ ವಿಭಾಗ
ಪ್ರಥಮ : 1 ಪವನ್
ದ್ವಿತೀಯ : 1/2 ಪವನ್
ತೃತೀಯ : ಚಿನ್ನದ ಪದಕ
ಚತುರ್ಥ : ಚಿನ್ನದ ಪದಕ
ಕನೆ ಹಲಗೆ ವಿಭಾಗ
ಪ್ರಥಮ : 1.5 ಪವನ್
ದ್ವಿತೀಯ: 3/4 ಪವನ್
ಅಡ್ಡ ಹಲಗೆ ವಿಭಾಗ
ಪ್ರಥಮ : 1 ಪವನ್
ದ್ವಿತೀಯ: 1/2 ಪವನ್
ಸಬ್ ಜೂನಿಯರ್ ವಿಭಾಗ
ಪ್ರಥಮ : 1/4 ಪವನ್
ದ್ವಿತೀಯ : ಚಿನ್ನದ ಪದಕ
ತೃತೀಯ : ಚಿನ್ನದ ಪದಕ



































