ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ. ಜಿ. ಅವರು 2024 ನೇ ಸಾಲಿನ ಮುಖ್ಯಮಂತ್ರಿ ಪದಕ
ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ. ಜಿ. ಅವರು 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದಿರುತ್ತಾರೆ. ಮೊನ್ನೆ ನಡೆದ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪದಕ ವಿತರಣೆಗೈದರು.
ಸಂದೇಶ್ ಪಿ. ಜಿ. ಅವರು ಮೂಡುಬಿದಿರೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಹಳ ಖಡಕ್ ಅಧಿಕಾರಿಯಾಗಿರುವ ಅವರಲ್ಲಿ ಜನಸ್ನೇಹ ಮತ್ತು ಕರ್ತವ್ಯದ ನಿಷ್ಠೂರತೆಗಳೆರಡೂ ಸರಿ ಸಮಾನವಾಗಿದ್ದು , ಕರ್ತವ್ಯ ನಿರ್ವಹಿಸುವ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಹಳ ಯಶಸ್ವೀಯಾಗಿ ನಿಭಾಯಿಸುುವ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲೂ ಸೇವೆ ಸಲ್ಲಿಸಿದ್ದು , ದ. ಕ. ಜಿಲ್ಲೆ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ.
ಮೇಲೆ ಹೇಳಿದಂತೆ ಸ್ನೇಹಮಯಿಯಾಗಿದ್ದರೂ ಕೂಡ ಶಾಂತಿಭಂಗ ಮತ್ತಿನ್ನಿತರ ರೌಡಿಸಂ ಗಳನ್ನು ತೋರಿಸುವವರಿಗೆ ಬಹಳ ನಿಷ್ಠೂರದ ಅಧಿಕಾರಯೇ ಆಗಿರುವುದರಿಂದ ಅವರು ಕರ್ತವ್ಯ ನಿರ್ವಹಿಸುವ ಠಾಣಾ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ಇರುವುದಿಲ್ಲ, “ಬೇಡಪ್ಪ…ಸಂದೇಶ ಬಿಡುವುದಿಲ್ಲ,ಜನ್ಮಾಂತರಕ್ಕೆ ನೆನಪಾಗುತ್ತಿರುವಂತಾಗುತ್ತದೆ” ಎಂದೇ ಕಿಡಿಗೇಡಿಗಳು ಎರಡು ಹೆಜ್ಜೆ ಹಿಂದಿಡುತ್ತಾರೆ !
ಪ್ರಕರಣವನ್ನು ಭೇದಿಸಿ ,ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿಯೂ ಕೂಡ ಬಹಳ ಬುದ್ಧಿವಂತನಾಗಿದ್ದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆಲವೊಂದು ಪ್ರಮುಖ ಪ್ರಕರಣಗಳನ್ನು ಬೇಧಿಸಿಕೊಟ್ಟ ಪ್ರಶಂಸೆಯೂ ಸಂದೇಶ್ ಪಾಲಿಗೆ ಲಭಿಸಿದೆ.
ಪ್ರಭಾವಿ ನಾಯಕರು ಮತ್ತು ಪ್ರಭಾವಿ ರಾಜಕೀಯ ಪಕ್ಷಗಳು, ಪ್ರಭಾವಿ ಸಂಘಟನೆಗಳ ಒತ್ತಡ ಜಾಸ್ತಿ ಇರುವ ಮೂಡುಬಿದಿರೆಯಲ್ಲಿ ಸಧ್ಯಕ್ಕೆ ಎಲ್ಲರ ಅಭಿಪ್ರಾಯಗಳನ್ನೂ ,ತಾಳ ಮೇಳಗಳನ್ನೂ ಕಣ್ಣೆದುರಿಗೆ ಇಟ್ಟುಕೊಂಡು ಕಾನೂನು ಶಿಸ್ತನ್ನು ನಿರ್ವಣೆ ಮಾಡುತ್ತಿರುವುದು ಕೂಡಾ ಅವರ ದೊಡ್ಡ ಸಾಧನೆ.
ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರಲ್ಲಿ ಮನುಷ್ಯ ಪ್ರೀತಿಯೊಡನೆ ಪೊಲೀಸ್ ಶಿಸ್ತು ಒಟ್ಟೊಟ್ಟಾಗಿ ಪಾಲನೆಯಾಗುತ್ತಿರವುದು ಸೇವಾ ನಿವೃತ್ತಿವರೆಗೂ ಮೈಗೂಡಿಕೊಂಡಿರಲಿ.
-ವಿ. ಕೆ. ವಾಲ್ಪಾಡಿ






































