[t4b-ticker]

ಬೇಡನ್ ಪೋವೆಲ್ ಜನ್ಮದಿನ

Picture of RB NEWS

RB NEWS

Bureau Report

ಕಾರ್ಕಳ : ಭಾರತ್ ಸ್ಕೌಟ್ ಅಂಡ್ ಸ್ಥಳೀಯ ಸಂಸ್ಥೆ ಕಾರ್ಕಳ, ಇಲ್ಲಿಯ
ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ ಮತ್ತು ಗೈಡ್ ಮಕ್ಕಳು ಚಿಂತನಾ ದಿನಾಚರಣೆಯನ್ನು (ಸಂಸ್ಥಾಪಕರು ಬೇಡನ್ ಪೋವೆಲ್ ಅವರ ಜನ್ಮದಿನ) ಕಾರ್ಕಳ ಪರಿಸರದಲ್ಲಿ ಆಚರಿಸಿದರು.

ಸಂಸ್ಥಾಪಕರ ಘೋಷಣೆಗಳನ್ನು ಹೇಳಿ ಜಾಥಾ ಕೈಗೊಂಡರು .ತದನಂತರ ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿ ಶಾಲೆಯ ಹತ್ತಿರ ಇರುವಂತಹ ಅಂಗಡಿಗಳಿಗೆ ಶಾಲೆಯ ಪರವಾಗಿ ಕಸದ ಟ್ಯಾಂಕ್ ನ್ನು ಹಸ್ತಾಂತರಿಸಿದರು. ಈ ದಿನದ ಮಹತ್ವವನ್ನು ಶಾಲಾ ಮುಖ್ಯ ಶಿಕ್ಷಕಿ ಹಾಗೂ ಸಹಾಯಕ ಜಿಲ್ಲಾ ಗೈಡ್ ಕಮಿಷನರ್ ವಿದ್ಯಾ ವಿ.ಕಿಣಿ ಅವರು ಸಾರಿದರು.

ಇದೇ ಸಂದರ್ಭದಲ್ಲಿ ಶಾಲಾ ಗೈಡರ್ ಹಾಗೂ ಕಾರ್ಕಳ ಸ್ಥಳಿಯ ಸಂಸ್ಥೆಯ ಸಹಕಾರ್ಯದರ್ಶಿ ಸೀಮಾ ಕಾಮತ್ ಅವರು ಮಾರ್ಗದರ್ಶನ ನೀಡಿದರು.

ಸ್ಕೌಟರ್ ಸುಜಾತ ಹೆಗ್ದೆ ಸಹಕಾರವಿತ್ತರು.

ಶಾಲಾ ಮಕ್ಕಳು ಬೇಡನ್ ಪೋವೆಲ್ ಅವರ ಚಿತ್ರ ,ಸ್ಕೌಟಿಂಗ್ ನಿಯಮಗಳು, ಚಿಹ್ನೆ ಹಾಗೂ ವಿವಿಧ ಫಲಕಗಳ ಮುಖೇನ ಚಿಂತನ ದಿನದ ಫಲಕಗಳನ್ನು ಪ್ರದರ್ಶಿಸಿದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top