ಬೇಕಾಬಿಟ್ಟಿ ರೇಶನ್ ಕಾರ್ಡ್ ರದ್ದು ಸಲ್ಲದು

Picture of RB NEWS

RB NEWS

Bureau Report


ಉಡುಪಿ : ಜಿಲ್ಲೆಯಲ್ಲಿ ರೇಶನ್ ಕಾರ್ಡುಗಳನ್ನು ರದ್ದು ಮಾಡಲು ರೇಶನ್ ಅಂಗಡಿಗಳ ಮುಂದೆ ನೋಟೀಸು ಹಾಕಿರುವುದಾಗಿ ಜನರಿಂದ ದೂರು ಬಂದಿದ್ದು, ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಕೂಡಲೇ ನಿಜ ಸಂಗತಿಯನ್ನು ಜನರಿಗೆ ವಿವರಿಸಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

ಬಡ ಮತ್ತು ಕೆಳ ಮಧ್ಯಮ ವರ್ಗದ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿದ್ದೇ ಆದಲ್ಲಿ ಸಿಪಿಐ(ಎಂ), ಇತರೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಹೋರಾಟ ನಡೆಸುವುದು ಅನಿವಾರ್ಯ ಆಗುತ್ತದೆ

1.20ಲಕ್ಷ ಆದಾಯದ ಅರ್ಹತೆ ತೀರಾ ಹಿಂದೆ ನಿಗದಿಯಾಗಿದ್ದು ಈಗ ಅದನ್ನು ಹೆಚ್ಚಿಸುವ ಅಗತ್ಯ ಇದೆ. ಕೆಲವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆಯುವ ಉದ್ದೇಶದಿಂದ ತಾತ್ಕಾಲಿಕವಾಗಿ ಆದಾಯ ಹೆಚ್ಚು ತೋರಿಸುತ್ತಾರೆ ಅದನ್ನು ಬಿಪಿಎಲ್ ಕಾರ್ಡ್ ವಿತರಣೆಗೆ ಪರಿಗಣಿಸಬಾರದು ಎಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ಯಾವುದೇ ಕಾರಣಕ್ಕೂ ಅರ್ಹ ಜನರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಬಾರದೆಂದುಸಿಪಿಐ(ಎಂ) ಒತ್ತಾಯಿಸುತ್ತದೆ‌ ಎಂದು ಉಡುಪಿ ಜಿಲ್ಲಾ ಸಮಿತಿ ಸಿಪಿಐ(ಎಂ) ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top