ಬೆಳುವಾಯಿ : ರೈತಸಿರಿ ಉದ್ಘಾಟನೆ
ಬೆಳುವಾಯಿ : ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ನೂತನ ಕಟ್ಟಡ ರೈತಸಿರಿ ನೂತನ ಕಟ್ಟಡ ಉದ್ಘಾಟನೆಯಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಆ.೧೮ರಂದು ರವಿವಾರ ಬೆಳಿಗ್ಗೆ ೧೦.೩೦ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ.
ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಹವಾನಿಯಂತ್ರಣ ಬ್ಯಾಂಕಿಂಗ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಜ್ರಸಿರಿ ಸಭಾಭವನವನ್ನು ಉದ್ಘಾಟಿಸಲಿದ್ದಾರೆ.
ಮಾಜಿ ಸಚಿವ ಅಭಯಚಂದ್ರ ಜೈನ್ ಗೋದಾಮು ಮಾರಾಟ ಮಳಿಗೆ ಉದ್ಘಾಟಿಸಲಿದ್ದಾರೆ.
ಬೆಳುವಾಯಿ ಸಹಕಾರಿ ವ್ಯವಸಾಯಿಕ ನಿರ್ದೇಶಕ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಭಾಸ್ಕರ್ ಎಸ್.ಕೋಟ್ಯಾನ್ ಅಧ್ಯಕ್ಷತೆವಹಿಸಲಿದ್ದಾರೆ.
ಮುಖ್ಯತಿಥಿಗಳಾಗಿ ಸಹಕಾರ ಸಂಘಗಳ ದ.ಕ. ಉಪನಿಬಂಧಕ ಎಚ್.ಎನ್.ರಮೇಶ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್, ಡಿಡಿ ಎಂ ನಬಾರ್ಡ್ ಸಂಗೀತ ಕರ್ತ, ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಪೂಜಾರಿ, ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಸೈಮನ್ ಮಸ್ಕರೇನಸ್, ಉದ್ಯಮಿ ಅಬ್ದುಲ್ ಸಲೀಂ ಭಾಗವಹಿಸಲಿದ್ದಾರೆ ಎಂದು ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್ ಹಾಗೂ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ತಿಳಿಸಿದ್ದಾರೆ.

ಆಡಳಿತ ಮಂಡಳಿ ನಿರ್ದೇಶಕರು
ಉಷಾ ಡಿ.ಪೈ, ದಾಮೋದರ ಎಸ್.ಬಂಗೇರಾ, ಅಂಬಿಕಾ ಡಿ.ಶೆಟ್ಟಿ, ಶಂಕರ್ ಶೆಟ್ಟಿ, ಜೋನ್ ಎಫ್ ನಜ್ರತ್, ಸುಧಾಕರ ಶೆಟ್ಟಿ, ಶ್ರೀನಾಥ ಸುವರ್ಣ,ಅಭಿನಂದನ್.ಎನ್.ಬಲ್ಲಾಳ್, ಪ್ರಭಾಕರ ಜೆ
ದ.ಕ.ಜಿ.ಕೇ.ಸ ಪ್ರತಿನಿಧಿ -ಸಂಜಯ್ ಅತಿಕಾರಿ


































