ಬೆಳುವಾಯಿ ಭಜನಾ ಪರಿಷತ್ತಿನ-” ಭಕ್ತಿ ಹೆಜ್ಜೆ”

Picture of RB NEWS

RB NEWS

Bureau Report

ಸಚಿತ್ರ ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಇಲ್ಲಿಗೆ ಸಮೀಪದ ಬೆಳುವಾಯಿ ಭಜನಾ ಪರಿಷತ್ತು ಆಯೋಜಿಸಿದ ವಲಯ ಮಟ್ಟದ ಕುಣಿತ ಭಜನಾ ಸ್ಪರ್ಧೆ-ಭಕ್ತಿ ಹೆಜ್ಜೆ ಸಪ್ಟಂಬರ್ ಒಂದರಂದು ನಡೆಯಿತು.

ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.‌

ಭಜನಾ ಸ್ಪರ್ಧೆ ಕಾರ್ಯಕ್ರಮದಲ್ಲಿ 10 ತಂಡಗಳು ಭಾಗವಹಿಸಿದ್ದವು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಭರತ್ ಶೆಟ್ಟಿ, ಗ್ರಾಮ ಅಭಿವೃದ್ಧಿ ಯ ಪ್ರವೀಣ್ ಜೈನ್, ಸದಾನಂದ ಮೂಲ್ಯ, ಕಾರ್ಕಳ ಭಜನಾ ಪರಿಷತ್ತಿನ ಶೈಲೇಶ್ ಸಾಣೂರು, ನವೀನ್ ಚಂದ್ರ ಅಂಬೂರಿ,ಸೂರ್ಯ ಆಳ್ವ, ಸುಚಿತ್ ಜೈನ್ ಹಾಜರಿದ್ದರು.

ಭಜನಾ ತಂಡದ ಎಲ್ಲಾ ಸದಸ್ಯರನ್ನು ಭಾರತೀಯ ಪದ್ಧತಿಯಲ್ಲಿ ಮಾತೆಯರು ಕುಣಿತಕ್ಕೆ ಸ್ವಾಗತಿಸುತ್ತಿದ್ದರು.

ತೀರ್ಪುಗಾರರು ತಮ್ಮ ಅಭಿಪ್ರಾಯದಲ್ಲಿ ಭಜನೆಯು ಸಂಪ್ರದಾಯ ಬದ್ಧ ಆಗಿರಬೇಕು. ದಾಸರ ಭಾವನೆಯಂತೆ ನಿವೇದನೆ, ಕೊಂಡಾಡುವ ರೀತಿಯಲ್ಲಿ ಹಾಡು ಇರಬೇಕು. ಯಾವತ್ತೂ ರಿಮಿಕ್ಸ್, ಗಿಮಿಕ್ಸ್, ಭಜನೆಯಲ್ಲಿ ಬರಬಾರದು ಎಂದು ತಿಳಿ ಹೇಳಿದರು.

ತೀರ್ಪುಗಾರರಾಗಿ ಕಲ್ಲಾಡಿ ರಮೇಶ್ ಕುಮಾರ್, ಸಸಿಹಿತ್ಲು ನರೇಶ್ ಕುಮಾರ ಸಹಕರಿಸಿದ್ದರು.

ಕಾರ್ಯಕ್ರಮವನ್ನು ಭಜನಾ ಪರಿಷತ್ ಅಧ್ಯಕ್ಷ ಸದಾನಂದ ಕುಲಾಲ್ ಹಾಗೂ ದಿನಕರ್ ಸಂಘಟಿಸಿದ್ದರು.

ಭಜನಾ ಸ್ಪರ್ಧೆಯ ಫಲಿತಾಂಶ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top