



ಬೆಳಕಿನ ಹಬ್ಬ ದೀಪಾವಳಿ
ದೀಪಾವಳಿ ಹಬ್ಬವು ಈ ವರ್ಷ ಅಕ್ಟೋಬರ್ 31ರಂದು ಆರಂಭವಾಗುತ್ತದೆ. ಹೀಗಾಗಿ ದೀಪಾವಳಿಯ ಹಿಂದಿನ ದಿನ, ಅಂದರೆ ಅಕ್ಟೋಬರ್ 30 ರಂದು ದೀಪ ಹಚ್ಚುವ ಶ್ರದ್ಧೆ ಅರಂಭವಾಗುತ್ತದೆ.ಅಂದರೆ, ಮನೆಯಲ್ಲಿ ಹಣತೆಗಳನ್ನು ಹಚ್ಚಿಡುವ ಶುಭಕಾಲವಿದು. ದೀಪಗಳನ್ನು ಬೆಳಗಿಸುವ ಮತ್ತು ಮನೆಗಳನ್ನು ಅಲಂಕರಿಸುವುದೇ ದೀಪಾವಳಿಯ ವಿಶೇಷ ಹಾಗೂ ಪ್ರಮುಖ ಅಲಂಕಾರ.
ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನುಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ
ನರಕ ಚತುರ್ದಶಿ )ಹಿಂದೂ ಪಂಚಾಂಗದಲ್ಲಿ ಶಾಲಿವಾಹನ ಶಕೆಯ ಅಶ್ವಿಜ ತಿಂಗಳಿನ ಕೃಷ್ಣ ಪಕ್ಷದಲ್ಲಿಚತುರ್ದಶಿ ಅಂದರೆ ೧೪ನೇ ದಿನ ಬರುವ ಹಬ್ಬವಾಗಿದೆ. ಇದು ಐದು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಎರಡನೇ ದಿನವಾಗಿದೆ. ಈ ದಿನ ಅಸುರ (ರಾಕ್ಷಸ) ನರಕಾಸುರನನ್ನು ಕೃಷ್ಣ, ಸತ್ಯಭಾಮ ಮತ್ತು ಕಾಳಿ ಕೊಂದರು ಎಂದು ಹಿಂದೂ ಸಾಹಿತ್ಯವು ಹೇಳುತ್ತದೆ. ಈ ದಿನವನ್ನು ಮುಂಜಾನೆ ಧಾರ್ಮಿಕ ವಿಧಿ ವಿಧಾನಗಳಿಂದ ಆಚರಿಸಲಾಗುತ್ತದೆ
ಪಾಡ್ಯದ ದಿನ ಗೋಪೂಜೆಯೇ ಪ್ರಧಾನವಾದದ್ದು. ಕೊಟ್ಟಿಗೆಯಲ್ಲಿರುವ ಗಂಗೆ, ಗೌರಿ, ಸೀತೆ, ಪುಣ್ಯಕೋಟಿ.. ಹಂಡಿ, ಮುಂತಾದ ದನ ಕರುಗಳಿಗೆಲ್ಲ ಅಂದು ಸ್ನಾನ ಭಾಗ್ಯ.. ! ಕರುಗಳಿಗೆ ಬಿಸಿನೀರು, ದನಗಳಿಗೆ ತಣ್ಣೀರು ಎರಚಿ ತೊಳೆಯಲಾಗುವುದು. ರಾತ್ರಿಯಲ್ಲಿ ದನಕರುಗಳಿಗೂ ಹಬ್ಬದ ದೀಪವನ್ನು ತೋರಿಸಿ ಅವುಗಳ ಹಣೆಗೆ ಕುಂಕುಮ ಹಚ್ಚಿ ,ಕೊರಳಿಗೆ ಚೆಂಡಳಿಗೆ ಹೂವಿನ ಮಾಲೆ ಕಟ್ಟುವುದು ಮತ್ತು ತಿನ್ನುವುದಕ್ಕೆ ದೋಸೆ,ಕಡುಬು ತೊಡುವುದು.
ದೀಪಗಳ ಬಲಿಯೇ ದೀಪಾವಳಿಯಾಗಿದೆ. ಬಲೀಂದ್ರನು ಭೂಮಿಗೆ ಬರುವ ಈ ಸಂದರ್ಭದಲ್ಲಿ ಊರೆಲ್ಲ ಹಸಿರು ಪೈರು,ಬೆಳೆ ಧಾನ್ಯ,ಹೂವು ಹಣ್ಣುಗಳ ಸಿಂಗಾರದಿಂದ ಮೆರೆಯುತ್ತಿರುವಂತೆಯೆ ದೀಪಗಳಿಂದ ಬೆಳಗಿಸುವುದೂ ಮುಖ್ಯವಾಗುತ್ತದೆ. ವರ್ಷದಲ್ಲೊಮ್ಮೆ ಊರಿಗೆ ಬಂದು ಜನರ ಯೋಗ ಸಮಾಚಾರವನ್ನು ಈ ಮೂಲಕವೇ ತಿಳಿಯುವ ಬಲೀಂದ್ರನಿಗೆ ನಾಡಿನ ಜನತೆ ಬಗೆಬಗೆಯ ರೀತಿಯಲ್ಲಿ ಕೂಗಿ ಆರಾಧಿಸುತ್ತಾರೆ.
ಮಕ್ಕಳಿಗಂತೂ ದೀಪಾವಳಿಯ ಸಂಭ್ರಮ ಬೇರೆೆಯದೇ ಆಗಿರುತ್ತದೆ.ಇತ್ತೀಚಿನ ದಿನಗಳಲ್ಲಿ ಪಟಾಕಿಗಳಿಗ ನಿಯಂತ್ರಣ ಹೇರಿರುವುದು ಮಕ್ಕಳ ಮನಸ್ಸಿಗೆ ನೋವು ತಂದಿದೆಯಾದರೂ ಲಕ್ಷಾಂತರ ಮಕ್ಕಳಿಗಾಗಿರುವ ಅಪಾಯವನ್ನು ಗಮನಿಸಿಯೇ ನಿಯಂತ್ರಣ ಹೇರುವ ಅನಿವಾರ್ಯತೆ ಒದಗಿಬಂದಿದೆ.
ದೀಪವನ್ನು ಹಚ್ಚಿ ನಾಡಿಗೆಲ್ಲ ಬೆಳಕನ್ನು ಹಂಚುವ ಖುಶಿ ಪ್ರತಿಯೊಬ್ಬನಲ್ಲೂ ಇರುವಂಥದ್ದೆ ಈ ದೀಪಾವಳಿಯ ವಿಶ್ವವ್ಯಾಪಕತೆಗೆ ಕಾರಣವಾಗಿದೆ.
ನಾಡಿನ ಸಮಸ್ತ ಕುಲಕೋಟಿಗ ದೀಪಾವಳಿ ಹಬ್ಬದ ಶುಭಾಶಯಗಳು.
-ತೇಜೋಮಯ



































