ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ಹಗರಣ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿದ ಕಾರ್ಕಳ ಪೊಲೀಸರು ಬೆಂಗಳೂರಿನ ಕೆಂಗೇರಿಯ ಗೋಡೌನ್ ನಿಂದ ಪರಶುರಾಮ ಮೂರ್ತಿಯ ಬಿಡಿಭಾಗಗಳನ್ನು ಸ್ಥಳ ಮಹಜರು ನಡೆಸಿ ಕಾರ್ಕಳ ತಂದಿದ್ದಾರೆ.ಪರಶುರಾಮ ಪೂರ್ಣ ಮೂರ್ತಿಯನ್ನು ಲಾರಿಯಲ್ಲಿ ತಂದು ಕ್ರೈನ್ ಮೂಲಕ ಇಳಿಸಿರುವ ಪೊಲೀಸರು ಗೋದಾಮಿನಲ್ಲಿ ಸುರಕ್ಷಿತವಾಗಿ ಇಟ್ಟಿದ್ದಾರೆ.



ಕಾರ್ಕಳ : ಬೈಲೂರು ಉಮಿಕಲ್ಲು ಬೆಟ್ಟದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ-ಪಾರ್ಕ್ನಲ್ಲಿ ಮೂರ್ತಿ ತೆರವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಪರಶುರಾಮ ಪ್ರತಿಮೆ ನಿರ್ಮಾಣದ ಹಗರಣ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಕಾರ್ಕಳ ನಗರ ಪೊಲೀಸರು ಬೆಂಗಳೂರಿಗೆ ತೆರಳಿ ಕಂಚಿನ ವಿಗ್ರಹದ ಬಿಡಭಾಗಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಭಾನುವಾರ ಮಧ್ಯಾಹ್ನದ ವೇಳೆ ಕಂಚಿನ ಬಿಡಿಭಾಗಗಳನ್ನು ನಗರ ಠಾಣೆಗೆ ತರಲಾಗಿದೆ. ಅದರಲ್ಲಿ ಪರಶುರಾವiನ ಕಾಲು ಸೇರಿದಂತೆ ಹೆಚ್ಚಿನ ಭಾಗಗಳು ಕಂಡು ಬಂದಿದೆ.
೨೦೨೩ರ ಜನವರಿ ತಿಂಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಬಳಿಕ ಅಕ್ಟೋಬರ್ ತಿಂಗಳಲ್ಲಿ ಮೂರ್ತಿಯ ಅರ್ಧ ಭಾಗವನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿತ್ತು. ಇದೇ ವಿಚಾರದಲ್ಲಿ ನಗರ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.
ಉಮಿಕಲ್ಲು ಬೆಟ್ಟದಲ್ಲಿ ಅರ್ಧ ಮೂರ್ತಿಯನ್ನು ಹಾಗೆಯೇ ಉಳಿಸಲಾಗಿತ್ತು. ಈಗ ತಂದ ಮೂರ್ತಿಯ ಬಿಡಿಭಾಗದಲ್ಲಿ ಕಾಲಿನ ಭಾಗ ಕಂಡು ಬಂದಿದೆ. ಒಟ್ಟಾರೆಯಾಗಿ ಪರಶುರಾಮ ಮೂರ್ತಿ ವಿಚಾರದಲ್ಲಿ ಹೊಸ ತಿರುವುಗಳು ಪಡೆಯುತ್ತಿದೆ. ಥೀಂ-ಪಾಕ್ ೯ ನಲ್ಲಿದ್ದ ಅರ್ಧ ಮೂರ್ತಿ ಕೂಡ ನಕಲಿಯೇ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಕಾಡತೊಡಗಿದೆ.
ಒಟ್ಟಾರೆಯಾಗಿ ಇಡೀ ಪ್ರಕರಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ.














