ಬೆಂಗಳೂರಿನಲ್ಲಿ ಯುವತಿಯ ಮರ್ಡರ್ : ಮಧ್ಯಪ್ರದೇಶದಲ್ಲಿ ಆರೋಪಿಯ ಬಂಧನ
ಬೆಂಗಳೂರು: ಕೋರಮಂಗಲದ ವಿಆರ್ ಲೇಔಟ್ನಲ್ಲಿರುವ ಲೇಡಿಸ್ ಪಿಜಿಯಲ್ಲಿ ಬಿಹಾರ ಮೂಲದ ಯುವತಿ ಕೃತಿ ಕುಮಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಅಭಿಷೇಕ್ನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.

ಜುಲೈ 23ರ ನಡುರಾತ್ರಿ ಯುವತಿಯ ಕತ್ತು ಸೀಳಿ ಕೊಲೆ ಮಾಡಿ ಮಧ್ಯಪ್ರದೇಶದಲ್ಲಿ ತಲೆಮಾರಿಸಿಕೊಂಡಿದ್ದ. ಆರೋಪಿಯನ್ನು ಬಂಧಿಸಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮಧ್ಯಪ್ರದೇಶದಲ್ಲಿ ಆತನನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಜುಲೈ 23ರ ರಾತ್ರಿ 11:30ಕ್ಕೆ ಕೋರಮಂಗಲದ ವಿಆರ್ ಲೇಔಟ್ ನಲ್ಲಿರುವ ಪಿಜಿಗೆ ನುಗಿದ್ದ ಆರೋಪಿ ಅಭಿಷೇಕ್ ರೂಮಿನ ಬಾಗಿಲು ತೆಗೆದ ಯುವತಿ ಕೃತಿ ಕುಮಾರಿಯನ್ನು ತನ್ನ ಪ್ರೇಯಸಿ ಎಂದು ಭಾವಿಸಿ ಕತ್ತನ್ನು ಸೀಳಿ ಮನಸೋಇಚ್ಛೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣವು ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಧ್ಯಪ್ರದೇಶದಲ್ಲಿ ತಲೆಮಾರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.






































