ಬೃಹತ್ ಏಕಶಿಲಾ ವಿಗ್ರಹದ ಬ್ರಹ್ಮಕಲಶ ಪ್ರತಿಷ್ಠಾ ಮಹೋತ್ಸವ : ಏಪ್ರಿಲ್ 25ರಂದು ಆಮಂತ್ರಣ ಪತ್ರಿಕೆ ಮತ್ತು ಕಲಶ ರಶೀದಿಯ ಬಿಡುಗಡೆ

ಮಂಗಳೂರು : ಶ್ರೀ ಕ್ಷೇತ್ರ ಗುರುಪುರ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ವಿಗ್ರಹದ ಬ್ರಹ್ಮಕಲಶ ಪ್ರತಿಷ್ಠಾ ಮಹೋತ್ಸವವು ಮೇ ತಿಂಗಳ 15,16 ಮತ್ತು 17ರಂದು ವಿಜೃಂಭಣೆಯಿoದ ಜರಗಲಿದೆ.
ಆ ಪ್ರಯುಕ್ತವಾಗಿ ಸಂಭ್ರಮದ ಆಮಂತ್ರಣ ಪತ್ರಿಕೆ ಮತ್ತು ಕಲಶ ರಶೀದಿಯ ಬಿಡುಗಡೆಯ ಸಮಾರಂಭವು ಏಪ್ರಿಲ್ 25ರ ಸಂಜೆ 4.15ರ ವೇಳೆಗೆ ಗುರುಪುರ ಗೋಳಿದಡಿ ಗುತ್ತಿನ ಆವರಣದಲ್ಲಿ ಜರುಗಲಿದೆ.
ಭಕ್ತಾಭಿಮಾನಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಕ್ರಿಯಾವಾಗಿ ಪಾಲ್ಗೊಂಡು ಶ್ರೀ ಗುರು ಮಹಾಕಾಲೀಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿಯೂ ಶ್ರೀ ಕ್ಷೇತ್ರ ಗುರುಪುರ ಶ್ರೀ ಗುರುಮಹಾಕಾಲೇಶ್ವರ ಬ್ರಹ್ಮಕಲಶ ಸಂಭ್ರಮ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಗೋಳಿದಡಿ ಗುತ್ತಿನ ಗಡಿಕಾರ ದುರ್ಗಾಪ್ರಸಾದ ವರ್ಧಮಾನ ಶೆಟ್ಟಿ































