ಬೀಡಿ ಕಾರ್ಮಿಕರ ಹಕ್ಕೊತ್ತಾಯ ಚಳುವಳಿ
ಉಡುಪಿ : ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಗೊಳಿಸಲು ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅ. 7 ರಿಂದ 17ರ ವರೆಗೆ ಅವಿಭಜಿತ ದ.ಕ ಜಿಲ್ಲೆಯ ಎಲ್ಲಾ ಕಂಪನಿಯ ಮುಂದೆ ಹಕ್ಕೊತ್ತಾಯ ಚಳುವಳಿ ಗೆ ಕರೆ ನೀಡಿತು.
ಇದರ ಅಂಗವಾಗಿ ಉಡುಪಿಯಲ್ಲಿರುವ ಭಾರತ್ ಬೀಡಿ ಕಂಪನಿ ಮುಂದೆ ಬೀಡಿ ಕಾರ್ಮಿಕರು ಹೋರಾಟ ಮುಂದುವರಿದಿದ್ದಾರೆ. 2018 ರಿಂದ2024 ವರೆಗೆ ಬಾಕಿ ಇರುವ ಕನಿಷ್ಟ ಕೂಲಿ 40 ರೂಪಾಯಿ, ತುಟ್ಟಿಭತ್ಯೆ ಈ ಕೂಡಲೇ ಕಾರ್ಮಿಕರಿಗೆ ನೀಡಬೇಕೆಂದು ಒತ್ತಾಯಿಸಿ ಹಕ್ಕೊತ್ತಾಯ ಚಳುವಳಿ ಮಾಡಿದರು.
ಎಐಟಿಯುಸಿ ಬೀಡಿ ಸಂಘದ ಕೋಶಾಧಿಕಾರಿ ವಿ.ಶೇಖರ್ ,ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಡಿಯು) ಅಧ್ಯಕ್ಷ ಮಹಾಬಲಹೋಡೆಯರ ಹೋಬಳಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ,ಪ್ರಧಾನವಾಗಿ ಪ್ರತಿಭಟನಾ ಸಭೆಯಲ್ಲಿ ಮಾತಾನಾಡಿದರು.




































