ಬೀಡಿ ಕಾರ್ಮಿಕರ ನೈಜ್ಯ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು

Picture of RB NEWS

RB NEWS

Bureau Report

ಕಾರ್ಕಳ : ಅವಿಭಜಿತ ದ.ಕ ಜಿಲ್ಲೆಯಲ್ಲಿ ಸುಮಾರು 6 ಲಕ್ಷಕ್ಕೂ ಮಿಕ್ಕಿ ಬೀಡಿ ಕಾರ್ಮಿಕರಿಗೆ ಸರಕಾರದ ಕಾನೂನು ರೀತ್ಯಾದಲ್ಲಿ ಸವಲತ್ತು ಸಿಗುತ್ತಿಲ್ಲ. ವಿವಿಧ ಸ್ತರಗಳಲ್ಲಿ ಹೋರಾಟ ನಡೆಸುತ್ತಾ ಬಂದಿದ್ದರೂ ಜನಪ್ರತಿನಿಧಿಗಳು ಕಾರ್ಮಿಕರ ಪರವಾಗಿ ಯಾವುದೇ ತರದಲ್ಲಿ ಧ್ವನಿಗೂಡಿಸುದಿಲ್ಲವೆಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಕವಿರಾಜ್.ಎಸ್ ಆರೋಪಿಸಿದ್ದಾರೆ.

ಕಾರ್ಕಳ ತಾಲುಇಕು ಕಚೇರಿಯ ಮುಂಭಾಗದಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ಮಿಕರು ಬೀಡಿ ಕಟ್ಟಿ ತಮ್ಮ ಜೀವನ ನಡೆಸುತ್ತಿದ್ದಾರೆ.ಇವತ್ತಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಧಾರದಲ್ಲಿ ಸರಕಾರವು ಪ್ರತಿವರ್ಷ ಬೀಡಿ ಕಾರ್ಮಿಕರ ತುಟ್ಟಿಭತ್ಯೆ ಹೆಚ್ಚಳ ಮಾಡಿ ಕಾರ್ಮಿಕರು ಬದುಕಲು ಸಹಾಯವಾಗಲು ಏರಿಳಿತ ತುಟ್ಟಿಭತ್ಯೆ ಎಂಬುವುದು ಕಾನೂನು ಬದ್ಧ ಸವಲತ್ತುವಾಗಿದೆ. ಆ ಪ್ರಕಾರ 2024 ಎಪ್ರಿಲ್ ತಿಂಗಳಿಂದ ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ 568 ಪಾಯಿಂಟ್ ಆಗಿರುತ್ತದೆ ಅದರಂತೆ 1000ಬೀಡಿಗೆ ರೂ 22.72ರಂತೆ ಬೀಡಿ ಕಾರ್ಮಿಕರಿಗೆ ನೀಡಬೇಕು. ಅದರೆ ಬೀಡಿ ಕಂಪನಿಯ ಮಾಲಕರು ಆ ಮೊತ್ತ ನೀಡದೆ ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿ (ALC)ಯವರು ಎರಡು ಬಾರಿ ಕಂಪನಿಯ ಮಾಲೀಕರನ್ನು ಸಭೆಗೆ ಆಹ್ವಾನಿಸಿದರೂ ಅವರೆಲ್ಲರೂ ಗೈರು ಹಾಜರಿಯಾಗುತ್ತಿದ್ದಾರೆ.

ಕಾರ್ಮಿಕರ ಬೆವರು ಸುರಿಸಿ ಹಣ ಸಂಪಾದಿಸಿ ಕೋಟ್ಯಾಧೀಶರಾಗಿರುವ ಬೀಡಿ ಕಂಪೆನಿಗಳ ಮಾಲಕರ ಪರವಾಗಿ ಶಾಸಕರು, ಸಂಸದರು ನಿಂತಿರುವ ಎಂಬಂತೆ ಕಾಣುತ್ತದೆ.

ಅವಿಭಜಿತ ದ.ಕ ಜಿಲ್ಲೆಯಲ್ಲಿ 13ಜನ ಶಾಸಕರು ಇಬ್ಬರು ಸಂಸದರು ಇದ್ದರೂ, 6ಲಕ್ಷಕ್ಕೂ ಮಿಕ್ಕಿ ಇರುವ ಬಡ ಬೀಡಿ ಕಾರ್ಮಿಕರ ಸಮಸ್ಸೆಯ ಕುರಿತು ವಿಧಾನಸಭೆಯಲ್ಲಿ ಅಥವಾ ಲೋಕಸಭೆಯಲ್ಲಿ ಪ್ರಸ್ತಾಪಿಸಿದೇ ಚುನಾವಣೆಗಳು ಎದುರುಗೊಳ್ಳುವಾಗ ಕಾರ್ಮಿಕರಲ್ಲಿ ಮತಯಾಚನೆಗೆ ಮುಂದಾಗುತ್ತಿರುವುದು ದುರದೃಷ್ಟಕರವಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಹಲವು ಬಾರಿ ಮಂಗಳೂರು ಕಂಪನಿಯ ಪ್ರಧಾನ ಕಛೇರಿ ಮುಂದೆ ,ಹಾಗೂ ಮಂಗಳೂರು ಸಹಾಯಕ ಅಧಿಕಾರಿ ಕಛೇರಿ ಮಂದೆ ಪ್ರತಿಭಟನೆ ನಡೆಸಿದ ನಂತರ 11.40ಪೈಸೆ ಮಾಲಕರು ಕಾರ್ಮಿಕರಿಗೆ ನಿಡಿರುತ್ತಾರೆ ಅದರೆ ಒಪ್ಪಲು ಸಾಧ್ಯವಿಲ್ಲ ಕಾರ್ಮಿಕರಿ ಕಾನೂನು ಬಧ್ದ ವಾಗಿ ಸಿಗುವ 22.72ಪೈಸೆ ಕೊಡಬೇಕು. ಹಿಂದಿನ 3ವರ್ಷದ ಬಾಕಿ ಇರುವ ತುಟ್ಟಿಭತ್ಯೆ 12.75ಪೈಸೆ,ಕನಿಷ್ಟ ವೇತನ ಕೂಡಲೇ ಕಾರ್ಮಿಕರಿಗೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸದೆ ಇದ್ದಾರೆ ಶಾಸಕರು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆಯನ್ನು ನೀಡಿದರು.

ಪ್ರತಿಭಟನೆ ಸಭೆಯಲ್ಲಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷ ರಾದ ಸುನೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್,ಕೋಶಾಧಿಕಾರಿ ಸುಮತಿ,ಕುಂದಾಪುರ ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಕೀಸ್,ಉಡುಪಿ ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯುನಿಯನ್ ನ ನಳಿನಿ.ಎಸ್ ,ಸಿಐಟಿಯು ಕಾರ್ಕಳ ತಾಲೂಕು ಮುಖಂಡರಾದ ನಾಗೇಶ್, ಸಿಐಟಿಯು ಉಡುಪಿ ಮುಖಂಡರಾದ ಮೋಹನ್, ರೀತೇಶ್ ,ಕಾರ್ಕಳ ಬೀಡಿ ಕಂಟ್ರಾಕ್ಟರ್ ಮುಸ್ತಾಫ ಹಾಗೂ ಬೀಡಿ ಮುಖಂಡರಾದ ವಿಲಾಸಿನಿ,ಶಕುಂತಲಾ, ಸುಮಿತ್ರಾ,ಜಯಂತಿ, ಲಕ್ಷೀ,ಜಾನವಿ,ವಸಂತಿ ಶೆಟ್ಟಿ, ಲತಾ,ಮಾಲತಿ,ಜಯಂತಿ, ವನಿತ,ಕವಿತ,ಪ್ರಮೀಳಾ, ಉಷಾ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top