ಬಿಜೆಪಿ ಕರಾವಳಿ ಭಾಗದಲ್ಲಿ ಮಾತ್ರವೇಕೆ ಹೊಸ ಪ್ರಯೋಗ ನಡೆಸುತ್ತಿದೆ ಎಂಬ ಪ್ರಶ್ನೆ ಮುಂದಿಟ್ಟ ಮಾಜಿಶಾಸಕ ರಘುಪತಿ ಭಟ್

Picture of RB NEWS

RB NEWS

Bureau Report

ಬಿಜೆಪಿ ಕರಾವಳಿ ಭಾಗದಲ್ಲಿ ಮಾತ್ರವೇಕೆ ಹೊಸ ಪ್ರಯೋಗ ನಡೆಸುತ್ತಿದೆ ಎಂಬ ಪ್ರಶ್ನೆ ಮುಂದಿಟ್ಟ ಮಾಜಿಶಾಸಕ ರಘುಪತಿ ಭಟ್

ಉಡುಪಿ: ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದು ಮಾಧ್ಯಮದ ಮೂಲಕ ತಿಳಿದು ಕೊಂಡಿದ್ದೇನೆ ಹೊರತು ಇದು ವರೆಗೆ ಬಿ ಜೆ ಪಿ ಶಿಸ್ತು ಸಮಿತಿ ನೋಟಿಸ್ ಕೂಡಾ ನೀಡಿಲ್ಲ ಎಂದು ಬಿಜೆಪಿ ಮಾಜಿಶಾಸಕ ರಘುಪತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿಯಿಂದ ಉಚ್ಚಾಟಿಸಿರುವ ಕುರಿತು ಮಾಧ್ಯಮಗಾರರೊಂದಿಗೆ‌ ಮಾತನಾಡಿದ ರಘಪತಿ ಭಟ್ ಅವರು ಶಿಸ್ತು ಸಮಿತಿಯ ವರ್ತನೆಯಿಂದ ಬೇಸರವಾಯಿತು. ಅವರ ಕ್ರಮಕ್ಕೆ ತಲೆ ಬಿಸಿಕೊಳ್ಳುವ ಅಗತ್ಯವೂ ಇಲ್ಲ. ಪಕ್ಷದ ಯಾವುದೇ ಮುಖಂಡರ ವಿರುದ್ಧ ವೈಯಕ್ತಿಕ ಟೀಕೆ, ನಿಂದನೆ ಮಾಡಿಲ್ಲ. ಪಕ್ಷದ ಪ್ರಮುಖವಾಗಿ ಆಗಬೇಕಾದ ಬದಲಾವಣೆಯ ಕುರಿತು ಉಲ್ಲೇಖಿಸಿದ್ದೇನೆ.

ಪಕ್ಷದ ಮುಖಂಡರು ಮಾತುಕತೆಗೆ ಕರೆದಿದ್ದೇ ಆದ್ದಲ್ಲಿ ಅದಕ್ಕೂ ರೆಡಿಯಾಗಿ ನನ್ನ ನಿರ್ಧಾರವನ್ನು ಅವರ ಗಮನಕ್ಕೆ ಮನನ ಮಾಡುತ್ತಿದೆ. ಪಕ್ಷ ಮಾತ್ರ ಹಾಗೆ ಮಾಡಿಯೇ ಇಲ್ಲ.‌

ಮಾಜಿಶಾಸಕನಾಗಿದ್ದ ನನ್ನಲ್ಲಿ ಯಾವುದೇ ಹುದ್ದೆಗಳು ಇರಲಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದೆ. ಹಾಗಿರುವಾಗ ಇತರ ಹುದ್ದೆಗಳಿಂದ ವಜಾಗೊಳಿಸುವುದಾದರೂ ಹೇಗೆ ಎಂಬುವುದೇ ಕೌತುಕವಾಗಿದೆ. ಚುನಾವಣೆಯಲ್ಲಿ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿದ್ದೇನೆ.‌

ಕರಾವಳಿಯಲ್ಲಿ ಮಾತ್ರ ಹೊಸ ಪ್ರಯೋಗಗಳು ಯಾಕೆ?
ಬಿಜೆಪಿ ಕರಾವಳಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಾ ಬಂದಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹೊಸ ಪ್ರಯೋಗ ನಡೆಸಿ ಐದು ವಿಧಾನಸಭಾ ಕ್ಷೇತ್ರ ಪೈಕಿ ನಾಲ್ಕು ಸ್ಥಾನಗಳಿಗೂ ಹೊಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು. ಉಳಿದ ಭಾಗಗಳಲ್ಲಿ ಅಂತಹ‌ ಪ್ರಯೋಗ ತೋರ್ಪಡಿಸುವುದಕ್ಕೆ ಧೈರ್ಯ ತೋರುವುದಿಲ್ಲ. ಇಂತಹ ಹೊಸ ಹೊಸ ಪ್ರಯೋಗಗಳಿಂದ ಅದೆಷ್ಟೋ ಕಾರ್ಯಕರ್ತರ ಭಾವನೆಗಳಿಗೆ ನೋವು ಉಂಟು ಮಾಡಿರುವುದಂತು ಸತ್ಯ.‌ಅದರಲ್ಲಿ ನಾನು ಒಬ್ಬನಾಗಿದ್ದೇನೆ.

ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಮ್ಮ ನಿರ್ಧಾರವನ್ನು ಋಜು ಪಡಿಸುವ ಮೂಲಕ ನನ್ನನ್ನೇ ಆಯ್ಕೆ ಮಾಡುತ್ತಾರೆ. ಆ ನಂತರದಲ್ಲಿ ಯಾವುದೇ ಗೊಂದಲ, ವಿವಾದಗಳ, ಉಚ್ಚಾಟನೆಯ ಪ್ರಶ್ನೆಗಳು ಎದುರಾಗದು. ಮತ್ತೇ ನಾನು ಬಿಜೆಪಿಯಲ್ಲಿಯೇ ಮುಂದುವರಿಯುವ ವಿಶ್ವಾಸವನ್ನು ರಘುಪತಿ ಭಟ್ ವ್ಯಕ್ತಪಡಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top