[t4b-ticker]

ಬಿಜೆಪಿ(ಹೆಚ್ಡಿಕೆ) ಮಾತ್ರದಿಂದ ರಾಜ್ಯದಲ್ಲಿ ಭವಿಷ್ಯ

Picture of RB NEWS

RB NEWS

Bureau Report

ಜೆಡಿ ಎಸ್ ನಾಯಕ ಹೆಚ್. ಡಿ. ಕುಮಾರ ಸ್ವಾಮಿಯವರಿಗೆ ರಾಜಕೀಯ ಭವಿಷ್ಯದಲ್ಲಿನ ಇನ್ನು ಕಟ್ಟಕಡೆಯ ವೇದಿಕೆ ಯಾವುದೆಂದರೆ #ಬಿಜೆಪಿ ಗೆ ಸೇರುವುದು. ಅದೇ ಪ್ರಕಾರ ಬಿಜೆಪಿಯೂ ಹೆಚ್ ಡಿ ಕೆ ಗೆ ಪಟ್ಟ ಕಟ್ಟಬೇಕಾದುದು.

ಬಿಜೆಪಿಯೊಡನೆ ರಾತೋರಾತ್ರಿ ಸಖ್ಯ ಬೆಳೆಸಿಕೊಂಡು ರಾಜ್ಯದ ಆಡಳಿತಾಗಾರನಾದಾಗ ಪರಮೋಚ್ಚ ನಾಯಕರು ನಿಜವಾಗಿಯೂ ಅತ್ತಿದ್ದರು,ಅದೇನೊ ಪದಗಳನ್ನೆಲ್ಲ ಬಳಸಿದ್ದರು ಕೂಡ. ಮುಂದೊಂದು ದಿನ ಅಪ್ಪನೇ ಮೋದಿಯ ಆಪ್ತನಾಗಿ ಆಡಳಿತ ಹೊಗಳ್ತಾರೆ ಅಂತ ಹೆಚ್ ಡಿ ಕೆ ಎಲ್ಲಾದರೂ ಹೇಳಿಕೊಂಡಿದ್ದಿರಲೂಬಹುದು. ಯಾಕೆಂದರೆ ಹೆಚ್. ಡಿ. ಕೆ. ಹೇಳುವ ಭವಿಷ್ಯದ ಕೆಲವು ಸಂಗತಿಯನ್ನು ಯಾವ ಜ್ಯೋತಿಷ್ಯನೂ ಅಷ್ಟೊಂದು ನಿಖರವಾಗಿ ಹೇಳುವುದಿಲ್ಲ.ಆ ವಿಚಾರದಲ್ಲಂತೂ ಕುಮಾರಣ್ಣನವರ ಆರನೆಯೆ ಸೆನ್ಸ್ ತುಂಬಾ ಗ್ರೇಟ್

ರಾಜ್ಯ ಬಿಜೆಪಿ ಯಲ್ಲಿ ಕಾರ್ಯಕರ್ತರ ಸೇನೆ ಇದೆ. ಕೇಡರ್ ಗಳಿದೆ, ಎಲ್ಲವೂ ಇದೆ . ಆದರೆ, #ನಾಯಕತ್ವ ಎಂಬುದೊಂದೇ ರಾಜ್ಯ ಬಿಜೆಪಿಯಲ್ಲಿಲ್ಲ! ಬಲಿಷ್ಠ ಕುದುರೆಯಿದೆಯಾದರೂ ಅದು ಲಾಯದಲ್ಲೇ ಬೆಳೆಯುತ್ತಿದೆ ವಿನಾ ಹತ್ತುವ ಸಮರ್ಥರನ್ನು ನೇಮಕ ಮಾಡಿಲ್ಲ! ಹೈಕಮಾಂಡ್ ಗೂ ಸಂಶಯ,ಭಯ, ‘ಕುದುರೆಯೇ ಸವಾರನ ಮೇಲೆ ಹತ್ತಿದರೇ?’ ಎಂದು.

ರಾಜ್ಯದ JDS ನಲ್ಲಿ ಸಮರ್ಥ ನಾಯಕನಿದ್ದಾರೆ, ನಾಯಕತ್ವದ ಧಿಮಾಕು ಇದೆ ಆದರೆ ಕಾರ್ಯಕರ್ತ ಸೇನೆ ಇಲ್ಲ. ಸೀಮಿತ ಕ್ಷೇತ್ರಗಳಲ್ಲಿ ಮಾತ್ರವೇ ಶಾಸಕನ ಆಯ್ಕೆಯಾಗುವುದರೊಡನೆ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುತ್ತಿದೆ ಅಷ್ಟೆ. ರಾಜ್ಯ ಹೆಚ್ಚಿನ ಮೂಲೆಯಲ್ಲಿನ ಕಾರ್ಯಕರ್ತರು,ನಾಯಕರುಗಳು ಕಾರಣಾಂತರದಿಂದ ಪಕ್ಷದ ಮೇಲೆ ಜಿಗುಪ್ಸೆ,ನಿರಾಸಕ್ತಿ ಹೊಂದಿದರು ಅನ್ನುವುದಂತೂ ಸತ್ಯ.

ಮೈಸೂರು ಭಾಗದಲ್ಲಿ ಜೆಡಿಎಸ್ ಬಲವಿದ್ದು ಬಿಜೆಪಿಯ ಪರಿಸ್ಥಿತಿ ಗಾಳಿಯಲ್ಲಿ ಹಾರಿ ಹೋಗುವಂತದ್ದಾಗಿರುವಾಗ ಆಸರೆಯಾಗಿ ಸಿಕ್ಕಿದ್ದೇ ಜೆಡಿಎಸ್. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದರ ಸಂಖ್ಯೆ ಹೆಚ್ಚಿಸುವುದಕ್ಕೆ ಜೆಡಿಎಸ್ ಜೊತೆಗಿನ ಸಖ್ಯವೇ ಕಾರಣವಾಗಿತ್ತು ಹೊರತು ರಾಜ್ಯ ಬಿಜೆಪಿಯ ಅಧ್ಯಕ್ಷ ಪದಾಧಿಕಾರಿಗಳ ನಯಾಪೈಸೆಯಷ್ಟಿನ ಪ್ರಭಾವದ ಪ್ರಯೋಜನ ಬೀರಿದ್ದಲ್ಲ.
ಸಧ್ಯದ ಅವಲೋಕನದಲ್ಲಿ ಯಾರ ಮನೆಯ ಅನ್ನ ಹಳಸಿದೆ, ಯಾವ ಮನೆಯವರಿಗೆ ಹಸಿವಾಗಿದೆ ಅನ್ನುವ ವಿಚಾರ ಗೌಣ. ಆದರೆ ಇಲ್ಲಿ ಅನ್ನ ಮತ್ತು ಹಸಿವು ಎರಡೂ ಕೂಡಾ ಸೇರಿಕೊಳ್ಳಲೇಬೇಕಾದ ಅನಿವಾರ್ಯತೆ
ಪ್ರಹ್ಲಾದ ಜೋಶಿ, ವಿ. ಸೋಮಣ್ಣ,ವಿ. ಸುನಿಲ್ ಕುಮಾರ್,ಸಿ. ಟಿ. ರವಿ ಅವರಲ್ಲಿ ಯಾರು ಎಂದು ತೂಗಿ ಒಬ್ಬನನ್ನು ಆರಿಸಿದ ನಂತರವೂ ಉಳಿದವರ ಬೆಂಬಲಿಗರ ಅಸಮಾಧಾನದ ಶೇಷವು ಪಕ್ಷ ಬಹುಮತಕ್ಕೆ ಬರುವ ಹೋರಾಟದ ಕಾಳಗದಲ್ಲಿ ಅಡ್ಡ ಪರಿಣಾಮಗಳು ಬಂದೇ ಬರುತ್ತದೆ.
ಈಗ ಬಿಜೆಪಿ ಬಯಸಬೇಕಾಗಿರುವುದು ಮುಂದಿನ ಚುನಾವಣೆಯಲ್ಲಿ ಅಬ್ಸೊಲ್ಯೂಟ್ ಮೆಜಾರಿಟಿ ಗಳಿಸಬೇಕು ಎಂಬುದು. ಆ ಅಬ್ಸೊಲ್ಯೂಟ್ ಪದ ಅಕ್ಷರಶಃ ಪರಿಪೂರ್ಣವಾಗಿ ಸಾರ್ಥಕಗೊಳ್ಳಬೇಕಾದರೆ ಅದಕ್ಕೆ ಸೂಕ್ತ ನಾಯಕ #HDK !

ಇತ್ತಿಂದ #ಡಿಕೆಶಿ ಯ ಹೆಜ್ಜೆಗಳನ್ನು ನೆಲದಲ್ಲಿ ಪಡಿಯಚ್ಚು ಮೂಡುವ ಮುನ್ನವೇ ಅಳಿಸುವ ಏಕೈಕ ಸಾಮರ್ಥ್ಯಗಾರನೆಂದರೆ ಹೆಚ್ ಡಿ ಕೆ ಒಬ್ಬ ಮಾತ್ರ ಅನ್ನುವುದನ್ನು ಬಿಜೆಪಿಯು ತಿಳಿಯಾದ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾಗಿದೆ.

ಮೊನ್ನೆಯ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯವರಿಂದಲೇ ಅಡ್ಡ ಮತದಾನದಿಂದ ಉಂಟಾದ ಬೇಸರ ಹಾಗೂ ದುಃಖದ ಸಂಗತಿ ಪರಮೋಚ್ಚ ನಾಯಕ ಹೆಚ್. ಡಿ. ದೇವೇಗೌಡರನ್ನು ರಾಜ್ಯ ಸಭೆಗೆ ಶಿಫಾರಸ್ಸು ಮಾಡದ್ದರ ಸಂಕಟಕ್ಕಿಂತಲೂ ಬಹುಪಾಲು ಜಾಸ್ತಿಯದೇ ಆಗಿರುವುದು ಬಿಜೆಪಿಯ ಪಾಲಿಗೆ ಕಾಳಿಂಗನ ಬಾಲ ಮೆಟ್ಟಿದಂತಾಗಿದೆ.

ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಮಾಡುವುದಕ್ಕೆ ಮುಹೂರ್ತ ಹಾಕಿಕೊಟ್ಟದ್ದೇ ಹೆಚ್. ಡಿ. ಕುಮಾರಸ್ವಾಮಿ. ಯೆಡಿಯೂರಪ್ಪನವರು ಮುಂದೆ ಪೂರ್ಣ ಬಹುಮತ ಪಡೆದುಕೊಂಡರೂ ಸರಕಾರದಲ್ಲಿ ಯಾವ ಮುಖ್ಯಮಂತ್ರಿಗೂ ಪೂರ್ಣಾವಧಿ ಮುಗಿಸಲಿಕ್ಕಾಗಿಲ್ಲ.
ಹೆಚ್ ಡಿ ಕೆ ಯ ಆಡಳಿತವನ್ನು,ಆಡಳಿತ ಶೈಲಿಯನ್ನು,ಜನಸಾಮಾನ್ಯರಿಗೂ ಬ್ರದರ್ ಎಂದು ಮಾತನಾಡಿಸುವ ಹೃದಯಶ್ರೀಮಂತಿಕೆಯನ್ನು, ಕರುಣೆಯನ್ನು,ಉದಾರತೆಯನ್ನು ಮೀರಿಸುವುದು ಯಾವ ನಾಯಕನಿಂದಲೂ ಸಾಧ್ಯವಾಗಲಿಲ್ಲ.
ಸಮಾಜದ ಕಟ್ಟಕಡೆಯ ಜನರಿಗೂ ಸರಕಾರದ ಸೇವೆಯ ಪರಿಚಯ ಹಾಗೂ ತಲುಪಿಸುವಿಕೆಯ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಇಡೀ ರಾಜ್ಯದ ಗಮನ ಸೆಳೆದಿದ್ದು ನಂತರದ ದಿನಗಳಲ್ಲಿ ಬೇರೆ ಪಕ್ಷದವರೂ ಅದನ್ನು ಮಾಡುತ್ತ ಬಂದಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿಯ ಮನೆ ಬಾಗಿಲಲ್ಲಿ ನಿತ್ಯ ನೂರಿನ್ನೂರು ಮಂದಿ ಬಂದಿರುತ್ತಾರೆ ಅನ್ನುವಾಗ ಅವರ ಜನಸ್ಪಂದನ ಹೇಗಿದೆ,ತನ್ನ ಆಡಳಿತಾವಧಿಯಲ್ಲಿ ಜನರನ್ನು ಯಾವ ರೀತಿ ತಲುಪಿದ್ದಾರೆ ಅನ್ನುವುದನ್ನು ನೆನಪಿಸುತ್ತದೆ.

ಬಿಜೆಪಿ ಯು ಇನ್ನು ಮುಂದೆ ಕರ್ನಾಟಕದಲ್ಲಿ ಖಾಯಂ ಆಗಿ ನೆಲೆಯೂರುವುದಕ್ಕೆ #HDK ಮತ್ತೊಮ್ಮೆ ರಾಜ್ಯದಲ್ಲಿ #ಬಿಜೆಪಿ ಪಕ್ಷದ ಪೂರ್ಣಾವಧಿ ಮುಖ್ಯಮಂತ್ರಿಯಾದರೆ ಮಾತ್ರ ಸಾಧ್ಯ. ಅದಕ್ಕೆ ಬಿಜೆಪಿ ನಾಯಕರು ಸಮ್ಮತಿಸುವುದಿಲ್ಲವಾದರೆ ಮುಂದಿನ ಹತ್ತು ವರ್ಷಗಳ ವರೆಗೂ ಬಿಜೆಪಿ ಅಧಿಕಾರ ಪಡೆಯುವುದು ಕನಸಾಗಬಹುದು.

ರಾಜ್ಯದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಯಾವ ಕ್ರಮದಲ್ಲಿ ಆಡಳಿತ ಮಾಡುತ್ತಾರೆ, ಜನತೆಗೆ ಏನೇನು ಕೊಡುತ್ತಾರೆ ಎನ್ನುವ ಪ್ರಶ್ನೆಗಿಂತಲೂ ಅವರು ಬಿಜೆಪಿ ಗೆ ಮಾರಕ #ಔಷಧಿ ಅನ್ನುವುದಂತೂ ಸ್ಪಷ್ಟ. ಅವರು ಸೃಷ್ಠಿಸುವ ಟ್ರಬಲನ್ನು ಶೂಟ್ ಮಾಡಬಲ್ಲವರು ಬಿಜೆಪಿಯಲ್ಲಿ ಯಾರೂ ಇಲ್ಲ.

ಸಧ್ಯದ ಪರಿಸ್ಥಿತಿಯಲ್ಲಿ ಹೆಚ್. ಡಿ. ಕುಮಾರ ಸ್ವಾಮಿಯವರಿಗೂ #ಬಿಜೆಪಿ ಕೂಡಾ #Last_resort . ಬಿಜೆಪಿಗೆ ಡಿಕೆಶಿಯವರನ್ನು ಎದುರಿಸಿ ಗೆದ್ದು ಬರುವುದಕ್ಕೆ ಸರಿಯಾದ ಕೃಷ್ಣ ಸಾರಥ್ಯ ಸಿಕ್ಕಿದಂತಾಗುತ್ತದೆ.


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top