ಬಿಗ್ ಬಾಸ್ ರಿಯಾಲಿಟಿ ಶೋ ತಾರೆ ಶುಭಾ ಪೂಂಜಾ ಕಟೀಲ್ ಇಂಟರ್ ನ್ಯಾಶನಲ್ ಹೋಟೆಲ್ ಗೆ ಭೇಟಿ

ಕಾರ್ಕಳ : ಬಿಗ್ ಬಾಸ್ ರಿಯಾಲಿಟಿ ಶೋ ಸೇರಿದಂತೆ ಕನ್ನಡ ಚಲನಚಿತ್ರಗಳಲ್ಲಿ ನಟಿಯಾಗಿ ಪ್ರೇಕ್ಷಕರ ಮನಗೆದ್ದ ಶುಭಾ ಪೂಂಜಾ ಮಾ. 1ರಂದು ಕಾರ್ಕಳದ ಕಟೀಲ್ ಇಂಟರ್ ನ್ಯಾಶನಲ್ ಹೊಟೇಲ್ಗೆ ಭೇಟಿ ನೀಡಿದರು.

ಕಟೀಲ್ ಇಂಟರ್ ನ್ಯಾಶನಲ್ ಹೋಟೆಲ್ ನ ಮಾಲಕ ಹಾಗೂ ಚಲನಚಿತ್ರ ನಟ ರೋಹಿತ್ ಕುಮಾರ್ ಕಟೀಲು ಅವರ ಸಂಬಂಧಿಯೂ ಆಗಿದ್ದಾರೆ.
ಚಿತ್ರರಂಗದ ಕುರಿತು ಇದೇ ಸಂದರ್ಭದಲ್ಲಿ ಸಮಾಲೋಚನೆ ನಡೆಸಿದ ಶುಭಾ ಪೂಂಜಾ ಅವರು ಕಟೀಲು ಇಂಟರ್ ನ್ಯಾಶನಲ್ ಹೋಟೆಲ್ ನ ಹೊರಾಂಗಣದಲ್ಲಿ ಇದ್ದ ಕುದುರೆ ಕ್ಯಾಂಚೋದೊಂದಿಗೆ ಪೋಟೋ ಕ್ಲಿಕಿಸಿದರು.





































