ಬಾವಿಗೆ ಬಿದ್ದ ಹೆಬ್ಬಾವನ್ನು ರಕ್ಷಿಸಿದ ಅಗ್ನಿಶಾಮಕ ದಳ ಹಾಗು ಉರಗ ರಕ್ಷಕ

Picture of RB NEWS

RB NEWS

Bureau Report

ಕಾರ್ಕಳ: ಬಾವಿಗೆ ಬಿದ್ದ ಹೆಬ್ಬಾವನ್ನು ಅಗ್ನಿ ಶಾಮಕ ದಳ ತಂಡ ಹಾಗೂ ಖ್ಯಾತ ಉರಕ ರಕ್ಷಕ ಅಜಯ್ ಗಿರಿ ತಂಡ ಗುರುವಾರ ಅಂಡಾರು ಕೊಂದಲ್ಕೆಯಲ್ಕಿ ರಕ್ಷಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಸುಮಾರು ಏಳು ದಿನಗಳ ಹಿಂದೆ ಹೆಬ್ರಿ ತಾಲೂಕಿನ ಅಂಡಾರು ಗ್ರಾಮ ಪಂಚಾಯತಿ ವ್ಯಾಪ್ತಿಯ  ಕೊಂದಲ್ಕೆಯ  ಸತೀಶ್  ಎಂಬವರ ತೋಟದ 30 ಅಡಿ ಆಳದ  ಬಾವಿಯಲ್ಲಿ ಬಿದ್ದಿತ್ತು. ಆದರೆ ರಕ್ಷಿಸಲು ಪ್ರಯತ್ನಿಸಿದ್ದರು ವಿಫಲವಾಗಿತ್ತು. ಕಡೆಗೆ ಗುರುವಾರ  ಕಾರ್ಕಳ  ಅಗ್ನಿಶಾಮಕ ದಳದ ಠಾಣಾಧಿಕಾರಿ ಅಲ್ಬರ್ಟ್ ಮೋನೀಸ್ ನೇತೃತ್ವದ  ತಂಡ ಹಾಗೂ ಖ್ಯಾತ ಉರಗ ರಕ್ಷಕ ಅಜಯ್ ಗಿರಿ ಬಾವಿಯಿಂದ ಮೇಲೆತ್ತುವ ಲ್ಲಿ ಯಶಸ್ವಿ ಯಾಗಿದ್ದಾರೆ. ಈ ಹೆಬ್ಬಾವು ಹೆಗ್ಗಣವನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ  ಬಾವಿಗೆ ಬಿದ್ದಿರಬಹುದು ಎಂದು ಸಂಶಯಪಟ್ಟಿದ್ದಾರೆ. ಸುಮಾರು 3 ಕಿ. ಭಾರವಿದ್ದು  ಸುರಕ್ಷಿತ ವಾಗಿ ಅರಣ್ಯ ಕ್ಕೆ ಬಿಡಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top