ಬಹುಬೆಳೆ ಪದ್ಧತಿಯನ್ನು ಅನುಸರಿಸದಲ್ಲಿ ಮಾತ್ರ ಸ್ಥಿರತೆ
ತಾಳೆ ಬೆಳೆ ಮೆಗಾ ಡ್ರೈವ್ ನಾಟಿ ಹಾಗೂ ತರಬೇತಿ
ಕಾರ್ಕಳ : ರೈತರು ಬಹುಬೆಳೆ ಪದ್ಧತಿಯನ್ನು ಅನುಸರಿಸದಲ್ಲಿ ಮಾತ್ರ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ವಾತಾವರಣಕ್ಕೆ ತಾಳೆ ಬೆಳೆ ಒಂದು ಸೂಕ್ತವಾದ ಬೆಳೆ ಎಂದು ಭಾರತಿ ಎಣ್ಣೆ ತಾಳೆ ಬೆಳೆಗಾರರ ಸಹಕಾರಿ ಸಂಘ ಕಾರ್ಕಳದ
ಅಧ್ಯಕ್ಷ ದಯಾನಂದ ಹೆಗ್ಡೆ ಅಭಿಮತ ವ್ಯಕ್ತಪಡಿಸಿದರು.

ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೋಟಗಾರಿಕೆ ಇಲಾಖೆ ಕಾರ್ಕಳ, 3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಹಾಗೂ ಭಾರತಿ ಎಣ್ಣೆ ತಾಳೆ ಬೆಳಗಾರರ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಳೆ ಬೆಳೆ ನಾಟಿ ಮೆಗಾ ಡ್ರೈವ್ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡ್ತಲ ಗ್ರಾಮ ಪಂಚಾಯತಿಯ ಅಧ್ಯಕ್ಷ ಸುಕೇಶ್ ಹೆಗ್ಡೆ ವಹಿಸಿದ್ದರು.
ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮಿ ಪೂಜಾರಿ, 3F ಕಂಪೆನಿಯ ಕೃಷ್ಣೇಗೌಡ ಹಾಗೂ
ಪ್ರಗತಿ ಪರ ತಾಳೆ ಕೃಷಿಕ ದೇವಿದಾಸ ಶೆಟ್ಟಿ ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನಲ್ಲಿ ತಾಳೆ ಬೆಳೆ ನಾಟಿ ಕುರಿತಂತೆ ಮೆಗಾ ಡ್ರೈವ್ ಗೆ ವಿನೋದರಾಜ್ ಎಳ್ಳಾರೆಯವರು ಚಾಲನೆ ನೀಡಲಾಯಿತು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ್ ಬಿ.ವಿ ನಿರ್ವಹಿಸಿದರು.

































