

ಬಸ್ಸು ತಡೆದು ಲಾಂಗ್ ಬೀಸಿ ಅಟ್ಟಹಾಸ ಮೆರೆದ ರೌಡಿ




ಹಾಸನ: ಖಾಸಗಿ ಬಸ್ ತಡೆದು ರೌಡಿಯೊಬ್ಬ ಅಟ್ಟಹಾಸ ಮೆರೆದು ಲಾಂಗ್ನಿಂದ ಹಲ್ಲೆಗೆ ಯತ್ನಿಸಿದ ಘಟನೆ ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಬುಧವಾರ ನಸುಕಿನ ಜಾವ 2 ಗಂಟೆಗೆ ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಬಸ್ ಸಂಚರಿಸುತ್ತಿತ್ತು.
ಅದೇ ಸಂದರ್ಭದಲ್ಲಿ ಕೆಎ 51 ಎಂವಿ 8912 ನಂಬರ್ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡ ಹಾಕಿ ನಿಲ್ಲಿಸಿದ್ದಾನೆ. ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಬಸ್ಸಿನ ಗ್ಲಾಸನ್ನು
ಲಾಂಗ್ ಬಡಿದು(ಕಡಿದು) ಒಡೆದು ಹಾಕಿದ್ದಾನೆ.
ರೌಡಿಯ ಅಟಹಾಸವನ್ನು ಬಸ್ಸಿನ ಪ್ರಯಾಣಿಕರೊಬ್ಬರು ತನ್ನ ಮೊಬೈಲಿನಲ್ಲಿ ಸೆರೆಹಿಡಿದು ವಿಡಿಯೋವನ್ನು ಸಾಮಾಜಿಕ ಜಾಲತಾಣ ಹರಿಬಿಟ್ಟಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಸ್ಸು ಪ್ರಯಾಣಿಕರ ಸ್ಥಿತಿ ಹೀಗಾದರೆ, ದೂರ ಪ್ರಯಾಣಿಸುವ ಕಾರು, ಬೈಕಿ ಸವಾರರ ಸ್ಥಿತಿ ಏನಾದಿತ್ತೆಂಬ ಯಕ್ಷ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.



















