
ಬನ್ನಡ್ಕ: ಗುರು ರಾಘವೇಂದ್ರ ಆರಾಧನೆ
ಮೂಡುಬಿದಿರೆ: ಇಲ್ಲಿಗೆ ಸಮೀಪದ ಬನ್ನಡ್ಕ ಗುರು ರಾಘವೇಂದ್ರ ಮಠದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಆರಾಧನಾ ಮಹೋತ್ಸವ ನಡೆಯುತ್ತದೆ.ಪ್ರತೀ ದಿನ ಬೆಳಿಗ್ಗೆ ವಿಶೇಷ ಅಭಿಷೇಕ ಅಲಂಕಾರ ಪೂಜೆ, ಮಧ್ಯಾಹ್ನ ಗಂ.12ಕ್ಕೆ ಮಹಾ ಪೂಜೆ, ಪ್ರಸಾದ ವಿತರಣೆ, ಸಂಜೆ ಗಂ.7ರಿಂದ ರಾತ್ರಿ ಪೂಜೆ, ರಂಗ ಪೂಜೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಸರ್ವ ಸೇವೆ ನಡೆಯುತ್ತದೆ.
ನಾಳೆ ಗಂ. 11ಕ್ಕೆ ಕಟೀಲು ಸುಧಾ ಬಳಗದವರ ಭಜನೆ, ಸಂಜೆ ಗಂ.5ಕ್ಕೆ ನಂದಳಿಕೆ ವಿಶಾಲ ಬಳಗದ ಮಾಯಾ ಮಂಥರೆ, ಸಂಜೆ ಗಂ.6ಕ್ಕೆ ಕೊಡ್ಯಡ್ಕ ಶಶಿಧರ ಬಳಗದ ಭಜನೆ.
ನಾಡಿದ್ದು ಬುಧವಾರ ಗಂ.11ಕ್ಕೆ ಕಾರ್ಕಳ ಅನಂತ ಪದ್ಮನಾಭ ಭಟ್ ಬಳಗದ ಭಜನೆ. ಸಂಜೆ ಗಂ.6ಕ್ಕೆ ಕೆರೆಕಾಡು ವಿನಾಯಕ ಮಂಡಳಿಯ ಸತ್ವ ಶೈಥಿಲ್ಯ ಯಕ್ಷಗಾನ.
ದಿ.22 ಗುರುವಾರ ಸಂಜೆ ಗಂ.5.30ರಿಂದ ಬನ್ನಡ್ಕ ಭಜನಾ ಮಂಡಳಿಯ ಕುಣಿತ ಭಜನೆ, ಗಂ.6ರಿಂದ ಮೂಡುಬಿದಿರೆ ವೆಂಕಟರಮಣ ಮಂಡಳಿಯ ಭಜನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.




































