



ಬದಿಯಡ್ಕದ ವೃದ್ಧ ನಾಪತ್ತೆ: ತೋರಿಸಿತು ಕಾರ್ಕಳದ ಟವರ್ ಲೋಕೇಶನ್
ಕಾಸರಗೋಡು: ಬದಿಯಡ್ಕ ನಿವಾಸಿ ಸುಕುಮಾರನ್(65) ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದು, ಅವರ ಮೊಬೈಲ್ ಲೋಕೇಶನ್ ಕಾರ್ಕಳದತ್ತ ತೋರಿಸುತ್ತಿದೆ ಎಂಬ ಮಾಹಿತಿ ಲಭಿಸಿದೆ.
ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಇವರ ನಾಪತ್ತೆಯಲ್ಲಿ ನಿಗೂಢತೆ ಉಂಟಾಗಿದೆ.
ನಾಪತ್ತೆಗೆ ಸಂಬಂಧಿಸಿ ಬದಿಯಡ್ಕ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಕಾರ್ಕಳದಲ್ಲಿ ಕೊನೆಯ ಬಾರಿಗೆ ಟವರ್ ಲೊಕೇಷನ್ ತೋರಿಸಿರುವ ವಿವರಗಳನ್ನು ಬದಿಯಡ್ಕ ಪೋಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ನಾಪತ್ತೆಯಾದ ವ್ಯಕ್ತಿಗಾಗಿ ಮನೆಯವರು ಮತ್ತು ಸಂಬಂಧಿಕರು ಹುಡುಕಾಡುತ್ತಿದ್ದು, ಕಾರ್ಕಳ ಅಥವಾ ಕರ್ನಾಟಕದ ಮತ್ತೆಲ್ಲಾದರೂ ಇರುವ ಸಾಧ್ಯತೆ ಇದೆಯೆನ್ನಲಾಗಿದೆ.
ಚಿತ್ರದಲ್ಲಿರುವ ವ್ಯಕ್ತಿ ಯಾರಿಗಾದರೂ ಪತ್ತೆಯಾದಲ್ಲಿ ತಕ್ಷಣ (9496318811) ನಂಬರಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಲಾಗಿದೆ.





















