ಬಣ್ಣವ ನೋಡಿ- ಕಲಿ ನಲಿ
ಕಾಂತಾವರ: ಕಾರ್ಕಳದ ಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ, LKG ಮತ್ತು UKG ವಿದ್ಯಾರ್ಥಿಗಳಿಗೆ ರೆಡ್ ಡೆ (ಕೆಂಪು ದಿನ) ಎನ್ನುವ ಒಂದು ಸುಂದರ ಕಾರ್ಯಕ್ರಮವನ್ನು ಕೈಗೊಂಡರು. ಸಂಸ್ಥೆಯ ಅಧ್ಯಕ್ಷ ಕ್ರಿಸ್ಪಿನ ಜೆರಾಲ್ಡ ಕ್ರಾಸ್ತರವರು ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಿಹಿ ತಿಂಡಿ ಹಂಚಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಚಾರ್ಲ್ಸ ಕ್ರಾಸ್ತ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಬಣ್ಣದ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೆಂಪು ಬಣ್ಣದ ಸಂಬಂಧಿಸಿದ ಎಲ್ಲ ರೀತಿಯ ಪರಿಕರಗಳನ್ನು, ಹಣ್ಣುಗಳನ್ನು, ತರಕಾರಿಗಳನ್ನು ಪರಿಚಯಿಸಿದರು.
ಅದರ ಜೊತೆಗೆ LKG ಮತ್ತು UKG ವಿದ್ಯಾರ್ಥಿಗಳು ಕೆಂಪು ಬಣ್ಣದ ಉಡುಪುಗಳನ್ನು ಧರಿಸಿ ಆನಂದಿಸಿದರು. ಅಷ್ಟೇ ಅಲ್ಲದೆ ಸ್ಮರಣ ಶಕ್ತಿಗೆ ಸಂಬಂಧಿಸಿದ ಕೆಲವೊಂದು ಆಟೋಟಗಳನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು





















