ಬಜರಂಗಿಗಳ ಕಾರ್ಯಚರಣೆ : ವಾಹನ ಬಿಟ್ಟು‌ ಓಡಿದ ಅಕ್ರಮ ಗೋ ಸಾಗಾಟಗಾರರು!

Picture of RB NEWS

RB NEWS

Bureau Report

ಮಂಗಳೂರು : ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಗೂಡ್ಸ್ ವಾಹನದಲ್ಲಿ ಕಾಲುಗಳನ್ನು ಕಟ್ಟಿ ಅಮಾನುಷವಾಗಿ 25 ಗೋವುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.



ಘಟನೆ ವೇಳೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಕೂಡಲೇ ವಾಹನದಲ್ಲಿದ್ದ ಗೋವುಗಳನ್ನು ರಕ್ಷಣೆ ಮಾಡಿದ ಕಾರ್ಯಕರ್ತರು ವಾಹನವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಗೋ ಸಾಗಾಟ ಮಟ್ಟ ಹಾಕಲು ಮುಂದಾಗಿರುವ ಬಜರಂಗ ದಳ ಅದಕ್ಕಾಗಿ ತಂಡಗಳನ್ನೇ ಸಿದ್ಧ ಪಡಿಸಿ ಕಾರ್ಯಚರಣೆ ನಡೆಸುವುದಕ್ಕೆ ಸರ್ವ ರೀತಿಯಲ್ಲಿ ಸನ್ನದ್ಧವಾಗಿದೆ.
ಕಾರ್ಯಚರಣೆ ನಡೆಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೃಶ್ಯಾವಳಿಯಲ್ಲಿ ಕಂಡು ಬಂದಿರುವಂತೆ ಅಕ್ರಮ ಗೋ ಸಾಗಾಟ ಮಾಡಲಾಗುತ್ತಿದ್ದ ಜೀಪನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿಲಾಗಿದೆ. ಅದೇ ಸಂದರ್ಭದಲ್ಲಿ ಗೋ ಸಾಗಾಟಗಾರರು ವಾಹನ ತೊರೆದು ಓಡಿ ಪರಾರಿಯಾಗಿದ್ದಾರೆ.
ಇಷ್ಟೆಲ್ಲಾ ಘಟನೆಗಳು ಅಲ್ಲಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದು ಪೊಲೀಸ್ ಇಲಾಖೆ ಕರ್ತವ್ಯ ನಿಷ್ಠೆ ತೋರುವಲ್ಲಿ ವಿಫಲವಾಗಿದೆಯೇ ಎಂಬ ದೂರು ಕೇಳಿಬರುತ್ತಿದೆ.


ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಂತೆ ವಾಹನದ ಮೂಲ ನೋಂದಣಿ ಸಂಖ್ಯೆ ಕೆಎ 19 ಎಎಫ್ 1399 ಎಂದು ತಿಳಿದು ಬಂದಿದೆ.

ಭಾಗಿಯಾಗಿರುವ ಶಂಕಿತ ವ್ಯಕ್ತಿಗಳನ್ನು ತೌಸೀಫ್ ಪೆರಾಡಿ ಮತ್ತು ಹರಿಣೆ ಪೆರಾಡಿ ಎಂದು ಗುರುತಿಸಲಾಗಿದ್ದು, ಇನ್ನೊಬ್ಬನನ್ನು ಗುರುತಿಸಲಾಗಿಲ್ಲ. ಬಜಪೆ ಪೊಲೀಸ್ ಠಾಣೆಯಲ್ಲಿ ಕಾನೂನಿನ ಸಂಬಂಧಿತ ವಿಭಾಗಗಳ ಅಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top