ಬಂಧನಕ್ಕೊಳಗಾಗಿದ್ದ ಮುಖಂಡನಿಗೆ ಜಾಮೀನು
ಮೂಡುಬಿದಿರೆ:ಇತ್ತೀಚೆಗೆ ಇಲ್ಲಿನ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹಿಂದೂ ಜಾಗರಣ ವೇದಿಕೆಯ ಜಲ್ಲಾ ಸಹ ಸಂಚಾಲಕ ಸಮಿತ್ರಾಜ್ಗೆ ಮೂಡುಬಿದಿರೆ ಕೋರ್ಟ್ ಶನಿವಾರ ಜಾಮೀನು ನೀಡಿದೆ.
ಕಳೆದ ವರ್ಷ ನವೆಂಬರ್ 11ರಂದು ತೋಡಾರಿನಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ಸಮಿತ್ರಾಜ್ ಅವರು ಖಾಸಗಿ ಬಸ್ ಮಾಲಕ ರಫೀಕ್ರಿಂದ ರೂ 5 ಲಕ್ಷ ಹಣವನ್ನು ಸಂತ್ರಸ್ತರಿಗೆ ಕೊಡಿಸಿದ್ದರೆನ್ನಲಾಗಿದೆ. ಈ ಘಟನೆ ನಡೆದು ಕೆಲವು ದಿನಗಳ ಬಳಿಕ ಮಾಸ್ಟರ್ ಬಸ್ ಮಾಲಕ ರಫೀಕ್ ಮೂಡುಬಿದಿರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಮಿತ್ರಾಜ್ ನನ್ನಿಂದ ಬಲವಂತವಾಗಿ ಹಾಗೂ ಕಾನೂನುಬಾಹಿರವಾಗಿ ರೂ 5 ಲಕ್ಷ ಪರಿಹಾರವನ್ನು ಗಾಯಾಳುಗಳಿಗೆ ಕಕೊಡಿಸಿದ್ದು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದರು. ಎಂದು ಬಸ್ ಮಾಲಕ ಈಚೆಗೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸರು ಸಮಿತ್ರಾಜ್ನನ್ನು ಜೂನ್ 26ರಂದು ಬಂಧಿಸಿ ಇಲ್ಲಿನ ಕೋರ್ಟ್ಗೆ ಹಾಜರುಪಡಿಸಿದ್ದರು. ಕೋರ್ಟ್ ಶನಿವಾರ ಜಾಮೀನು ನೀಡಿದೆ. ಆರೋಪಿ ಪರ ವಕೀಲ ಶರತ್ ಶೆಟ್ಟಿ ವಾದಿಸಿದ್ದರು.






























