ಬಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಕಾರ್ಕಳ, 4ನೇವಾರ್ಷಿಕ ಮಹಾಸಭೆ 58.47 ಲಕ್ಷ ನಿವ್ವಳ ಲಾಭ ಮತ್ತು ಶೇ.13.50 ಡಿವಿಡೆಂಟ್ ಘೋಷಣೆ
RB NEWS
Bureau Report
ಬಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಕಾರ್ಕಳ, 4ನೇವಾರ್ಷಿಕ ಮಹಾಸಭೆ 58.47 ಲಕ್ಷ ನಿವ್ವಳ ಲಾಭ ಮತ್ತು ಶೇ.13.50 ಡಿವಿಡೆಂಟ್ ಘೋಷಣೆ
ಕಾರ್ಕಳ : ಬಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., 4ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆ. 13 ರಂದು ಕಾರ್ಕಳದ ಹೋಟೆಲ್ ಸ್ವಾಗತದಲ್ಲಿ ಜರುಗಿತು.
ಸೊಸೈಟಿಯ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 31-03-2025ರ ಅಂತ್ಯಕ್ಕೆ ಸೊಸೈಟಿಯು 18.77 ಕೋಟಿ ಠೇವಣಿ ಸಂಗ್ರಹಿಸಿ, 17.95 ಕೋಟಿ ಸಾಲ ನೀಡಿ, 36.72 ಕೋಟಿ ವ್ಯವಹಾರವನ್ನು ನಡೆಸಿ, 107 ಕೋಟಿ ವಹಿವಾಟನ್ನು ಮಾಡಿ, 58.47 ಲಕ್ಷ ಲಾಭವನ್ನು ಗಳಿಸಿ, 3 ವರ್ಷದಲ್ಲಿಯೇ ಶೇ.13.50 ಡಿವಿಡೆಂಡ್ ನೀಡಿರುವುದು ನಮ್ಮ ಸೊಸೈಟಿಯ ಹೆಮ್ಮೆ ಎಂದು ತಿಳಿಸಿದರು.
ಈ ಅಭಿವೃದ್ಧಿಯಲ್ಲಿ ನಮ್ಮ ಸಂಘದ ಸದಸ್ಯರು, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಸೊಸೈಟಿಯು ಅಲ್ಪಾವಧಿಯಲ್ಲಿ ಹೆಚ್ಚಿನ ಅಭಿವೃದ್ಧಿಯೊಂದಲು ಸಾಧ್ಯವಾಯಿತು ಎಂದು ತಿಳಿಸಿದರು.
ಸೊಸೈಟಿಯ ಉಪಾಧ್ಯಕ್ಷ ಕೆ.ಮಂಜುನಾಥ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕಿ ವಿನಯ ಅರುಣ್ ಶೆಟ್ಟಿ ಮಹಾಸಭೆಯ ನೋಟೀಸನ್ನು ವಾಚಿಸಿದರು. ನಿರ್ದೇಶಕ ಪ್ರಶಾಂತ್ ಶೆಟ್ಟಿ 3ನೇ ವಾರ್ಷಿಕ ಮಹಾಸಭೆಯ ನಡವಳಿಯನ್ನು ಮಂಡಿಸಿದರು,
2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮುಖ್ಯಕಾರ್ಯನಿರ್ವಣಾಧಿಕಾರಿ ಕಿಶೋರ್ ಶೆಟ್ಟಿ ಮಂಡಿಸಿದರು, ನಿರ್ದೇಶಕ ಕೆ.ನವೀನ್ ಚಂದ್ರ ಶೆಟ್ಟಿ 2024-25ನೇ ಸಾಲಿನ ಲೆಕ್ಕಪರಿಶೋಧಿತ ಲೆಕ್ಕಪತ್ರ ಮಂಡನೆ ಮಾಡಿದರು. ನಿರ್ದೆಶಕ ಎಂ.ಪ್ರಸನ್ನ ಶೆಟ್ಟಿ 2024-25ನೇ ಸಾಲಿನ ಆಯ-ವ್ಯಯ ಪರಿಶೀಲನೆಯನ್ನು ಮಂಡಿಸಿದರು.
ನಿರ್ದೇಶಕ ಪ್ರದೀಪ್ ಕುಮಾರ್ ಶೆಟ್ಟಿ 2024-25ನೇ ಸಾಲಿನ ಬಜೆಟಿಗಿಂತ ಜಾಸ್ತಿ ಖರ್ಚಾದ ಐವೇಜಿಗೆ ಮಂಡಿಸಿದರು.
ಪ್ರಧಾನ ವ್ಯವಸ್ಥಾಪಕ ಕೃಷ್ಣ ಎಂ. ಶೆಟ್ಟಿ 2025-26ನೇ ಸಾಲಿನ ಬಜೆಟನ್ನು ಮಂಡನೆ ಮಾಡಿದರು.
ನಿರ್ದೇಶಕ ರಮೇಶ್ ಶೆಟ್ಟಿ ಇವರು ಲೆಕ್ಕ ಪರಿಶೋಧಕರು ವರದಿಯಲ್ಲಿ ಸೂಚಿಸಿರುವ ನ್ಯೂನತೆಗೆ ಅನುಪಾಲನ ವರದಿಯನ್ನು ಮಂಡಿಸಿದರು. ನಿರ್ದೇಶಕ ಸಚ್ಚೇಂದ್ರ ಶೆಟ್ಟಿ 2024-25ನೇ ಸಾಲಿನ ನಿವ್ವಳ ಲಾಭದ ಹಂಚಿಕೆಯನ್ನು ಮಂಡಿಸಿದರು. ನಿರ್ದೇಶಕರಾದ ಎಂ.ಸುಧಾಕರ ಶೆಟ್ಟಿ ಸಾಧಕರ ಸನ್ಮಾನ ಪತ್ರವನ್ನು ವಾಚಿಸಿದರು.
ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ 11 ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು. 12 ಜನ ಆರ್ಥಿಕ ಹಿಂದುಳಿದ ಬಡ ಕುಟುಂಬದವರಿಗೆ ಧನ ಸಹಾಯವನ್ನು ನೀಡಲಾಯಿತು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಮಾಲಿನಿ ಎನ್.ರೈ,, ಸುನಿತಾ ಎಸ್. ಶೆಟ್ಟಿ, ಸುಹಾಸ್ ಹೆಗ್ಡೆ ಉಪಸ್ಥಿತರಿದ್ದರು.
ಸಭೆಯ ಪ್ರಾರಂಭದಲ್ಲಿ ಸೊಸೈಟಿಯ ಸದಸ್ಯರಾ ಲಲಿತಾ ಶೆಟ್ಟಿ ಪ್ರಾರ್ಥನೆಗೈದರು. ಬಾಲಕೃಷ್ಣ ಶೆಟ್ಟಿ ನಿರೂಪಿಸಿ ವಂದನಾರ್ಪನೆಗೈದರು.