ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಹೇಳಿಕೆ : ದೂರು ದಾಖಲು


ಕಾರ್ಕಳ : ಫೇಸ್ ಬುಕ್ ನಲ್ಲಿ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದ ಕಾರ್ಕಳದ ನೀಲಕಂಠ ಭಟ್ ಎಂಬಾತನ ಮೇಲೆ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.
ಕಾರ್ಕಳದಲ್ಲಿ ಹಲವಾರು ಸಮಯಗಳಿಂದ ಫೇಸ್ ಬುಕ್ ಖಾತೆಯಲ್ಲಿ ಸಮಾಜದ ಸೌಹಾರ್ದತೆ ಕಡಡುವ ಕಾರ್ಯವನ್ನು ಈತ ಮಾಡುತ್ತಿದ್ದ.
ಕಳೆದ ಕೆಲವು ದಿನಗಳ ಹಿಂದೆ ಈತ ಬೇರೆ ಬೇರೆ ಸಮುದಾಯಗಳ ಮಧ್ಯೆ ಸೌಹಾರ್ದತೆ ಕದಡುವ ಕಾರ್ಯವನ್ನು ಈತ ಮಾಡಿದಾಗ ಈತನ ಮೇಲೆ ಕಾರ್ಕಳ ಬ್ಲಾಕ್ ಕಾಂಗ್ರೇಸ್ ನ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ಶೇಕ್ ಶಬೀರ್ ರವರು ಈತನ ಮೇಲೆ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು.
ಪೊಲೀಸರು ಈತನನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ






























