ಕಾರ್ಕಳ : ಭಾರತ ಸರ್ಕಾರದ ದತ್ತೋಪಂಥ ಠೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪ್ರಾದೇಶಿಕ ನಿರ್ದೇಶನಾಲಯ, ಮಂಗಳೂರು ಇದರ ವತಿಯಿಂದ
18 ರಿಂದ 55 ವರ್ಷದ ಒಳಗಿನ ನಮ್ಮ ರಾಮಕ್ಷತ್ರಿಯ ಪುರುಷ ಹಾಗೂ ಮಹಿಳಾ ಸಮಾಜಬಾಂಧವರಿಗಾಗಿ
ಸ್ವ- ಉದ್ಯೋಗಕ್ಕೆ ಸಂಬಂಧಿಸಿದಂತೆ ಕ್ಯಾಂಡಲ್, ಫಿನೈಲ್, ಹಾಗೂ ಸೋಪ್ ಆಯಿಲ್ ತಯಾರಿಸುವ ಕುರಿತ “ಉಚಿತ ತರಬೇತಿ ಕಾರ್ಯಾಗಾರ”ವು ಫೆ. 27ರಂದು ಮಂಗಳವಾರ ಮಧ್ಯಾಹ್ನ 01.30ರಿಂದ ಸಾಯಂಕಾಲ 05.00ರ ತನಕ ಶ್ರೀರಾಮ ಸಭಾಭವನ, ಬಂಡಿಮಠ, ಕಾರ್ಕಳ ಇಲ್ಲಿ ನಡೆಯಲಿದೆ.
ಇದರಲ್ಲಿ ಒಟ್ಟು 100 ಮಂದಿಗೆ ಅವಕಾಶವಿರುತ್ತದೆ.
ಆಸಕ್ತರು ಕೂಡಲೇ ತಮ್ಮ ಹೆಸರು ಸಹಿತ ವಿಳಾಸ, ದೂರವಾಣಿ ಸಂಖ್ಯೆಯನ್ನು ನಮೂದಿಸಿ ಇದೇ ಗ್ರೂಫ್ ನಲ್ಲಿ ಮಾಹಿತಿ ನೀಡಿ ನೋಂದಾಯಿಸಲು ಕೋರಿದೆ.
ಹೆಸರು ನೋಂದಾಯಿಸಿದ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಪ್ರತಿಯನ್ನು ಮುಂದೆ ನೀಡಲಾಗುವ ಶಿಷ್ಯವೇತನಕ್ಕಾಗಿ ಕಡ್ಡಾಯವಾಗಿ ಸಲ್ಲಿಸುವುದು. ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಜೋಡಣೆ ಯಾಗಿರಬೇಕು.
ಹೆಚ್ಚಿನ ವಿವರಗಳಿಗಾಗಿ ಶ್ರೀಮತಿ ಸುಮನಾ ಮಾಧವ ರಾವ್, ಜೋಡುರಸ್ತೆ, ಕಾರ್ಕಳ ದೂ.ಸಂ.9980313005 ನ್ನು ಸಂಪರ್ಕಿಸಲು ವಿನಂತಿಸಿದೆ.






































