ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಾಳ ತಾಲೂಕಿನ ವಗ್ಗ ವಲಯದ ಪ್ರೇರಣ ಜ್ಞಾನ ವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣ ಶಿಬಿರವು ವಾಮದಪದವು ಅಂಬೇಡ್ಕರ್ ಭವನದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟ ಅಧ್ಯಕ್ಷೆ ಅನಿತಾ ಪ್ರಭು ವಹಿಸಿದ್ದರು .
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಕಾರ್ಯಕ್ರಮ ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ರುಡ್ ಸೆಟ್ ಸಂಸ್ಥೆಯ ಕರುಣಾಕರ ಜೈನ್ ಮಾತನಾಡಿ, ಸ್ವ ಉದ್ಯೋಗವು ಮನೆಯಲ್ಲಿ ಇದ್ದು ಕೂಡಾ ಮಾಡಿಕೊಳ್ಳಬಹುದಾಗಿದೆ. ಅದರಲ್ಲಿ ಲಾಭಗಳಿಕೆಯ ಲೆಕ್ಕಾಚಾರ ನಡೆಸಬೇಕು. ವ್ಯವಹಾರದಲ್ಲಿ ಲೆಕ್ಕಚಾರಕ್ಕೆ ಮೊದಲ ಅಧ್ಯತೆ ಇದ್ದರೂ ಲಾಭಂಶ ಲೆಕ್ಮಾಚಾರಕ್ಕೆ ಹೆಚ್ಚಿನ ರೀತಿಯಲ್ಲಿ ಒತ್ತು ನೀಡಬೇಕು ಎಂದ ಅವರು ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಜನಜಾಗೃತಿ ಸದಸ್ಯರು ನವೀನ್ ಚಂದ್ರ ಶೆಟ್ಟಿ ಪಂಚಾಯತ್ ಸದಸ್ಯ ಸುನಂದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.































