ಪ್ರೈಮ್ ಸಿಟಿ ಸೆಂಟರ್ ಲೋಕಾರ್ಪಣೆ
ಫೋಟೋ: ದ್ವಾರಕ ನಿರಂಜನ್

ಕಾರ್ಕಳ: ವಾಣಿಜ್ಯ ಸಂಕೀರ್ಣವು ಎಲ್ಲಾ ಆರ್ಥಿಕ ವ್ಯವಹಾರಕ್ಕೆ ಮುಕ್ತ ಬಾಗಿಲು ತೆರೆದುಕೊಳ್ಳಬೇಕು. ಆ ಮೂಲಕ ಉದ್ಯೋಗ ಅವಕಾಶಗಳು, ಸವಲತ್ತುಗಳು ಜೊತೆಗೆ ಸ್ಥಳೀಯವಾಗಿ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಇಂತಹ ವ್ಯವಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಸ್ಥಷ್ಠಿಯಾದಾಗ ಸ್ಥಳೀಯ ಯುವಜನತೆಯಲ್ಲಿ ಸ್ವ-ಉದ್ಯೋಗದ ಅವಕಾಶಗಳು ಜಾಸ್ತಿಯಾಗತ್ತದೆ. ಪ್ರತಿಭಾನಿತ್ವ ಯುವಸಮುದಾಯವು ನಗರಕ್ಕೆ ವಲಸೆ ಹೋಗುವುದನ್ನು ತಡೆಗಟ್ಟಬಹುದೆಂದು ಶಾಸಕ ವಿ.ಸುನೀಲ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

ನಗರದ ಹೃದಯಭಾಗದಲ್ಲಿ ನಿರ್ಮಾಣಗೊಂಡ ಪ್ರೈಮ್ ಸಿಟಿ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮೂವರು ಯುವಕ ಹೊಸ ಕಲ್ಪನೆಯಲ್ಲಿ ಹುಟ್ಟ ಹಾಕಿದ ಪ್ರೆöÊಮ್ ಸಮೂಹ ಸಂಸ್ಥೆಯು ನೂರಾರು ಉದ್ಯೋಗ ಸೃಷ್ಠಿಗೆ ಕಾರಣವಾಗಿದೆ. ಕಾರ್ಕಳದ ಅಭಿವೃದ್ಧಿಗೆ ಇದು ಪೂರಕವಾಗಿರುತ್ತದೆ ಎಂದರು.
ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇAದ್ರ ಕುಮಾರ್ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಆರಂಭಿಸಿ ಯಶಸ್ಸು ಕಂಡ ಈ ಉದ್ಯಮವು ಮುಂದೆ ರಾಜ್ಯ ಮತ್ತು ರಾಷ್ಟçದ ರಾಜಧಾನಿಗಳಲ್ಲಿ ಆರಂಭವಾಗಲಿ ಎಂದು ಹಾರೈಸಿದರು.
ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಹಿರಿಯ ವಕೀಲ ಎಂ.ಕೆ ವಿಜಯಕುಮಾರ್ ಮಾತನಾಡಿ, ಯಾವುದೇ ಉದ್ಯಮ ಆರಂಭಿಸುವ ಮುನ್ನ ಹೊಸ ಚಂತನೆಗಳು ಇರಬೇಕು. ಅದು ಜನತೆಗೆ ತಲುಪುವಂತಾಗಬೇಕು. ಯುವ ಸಮುದಾಯವು ಉದ್ಯೋಗ ರಂಗದಲ್ಲಿ ತೊಡಗಿಸು ಮೂಲಕ ಹೊಸ ಚೈತನ್ಯ ಮೂಡುತ್ತದೆ ಎಂದರು.
ಪುರಸಭಾ ಅಧ್ಯಕ್ಷ ಯೋಗಿಶ್ ದೇವಾಡಿಗ, ಪುರಸಭಾ ಸದಸ್ಯೆ ಸುಮಾ ಕೇಶವ, ವಕೀಲ ಐ.ಆರ್. ಬಳ್ಳಾಲ್, ಪ್ರೆöÊಮ್ ಸಮೂಹ ಸಂಸ್ಥೆಯ ಮಹಾವೀರ್ ಹೆಗ್ಡೆ, ಎಂ.ಕೆ.ಸುವೃತ್ ಕುಮಾರ್, ಸಂಪತ್ ಜೈನ್ ಉಸ್ಥಿತರಿದ್ದರು.































