ಪ್ರೀತಿ, ಸಹೋದರತೆ, ಸಹಬಾಳ್ವೆಯ ಗೌರವಯುತ ಬದುಕನ್ನು ಕಲಿಸುವುದೇ ಎನ್ ಎಸ್ ಎಸ್ – ವೈ.ಎಂ.ಉಪ್ಪಿನ್
ಮೂಡುಬಿದಿರೆ: ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದವರು ಅಂತರ ರಾಜ್ಯ , ಅಂತರ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಒಂದು ವಾರ ಕಾಲ ಆಯೋಜಿಸಿದ್ದರು.
ದೇಶದೆಲ್ಲೆಡೆಯ 12 ವಿಶ್ವವಿದ್ಯಾಲಯಗಳ ಸುಮಾರು 110 ಮಂದಿ ಶಿಬಿರಾರ್ಥಿಗಳು ಐದು ರಾಜ್ಯಗಳಿಂದ ಹಾಜರಿದ್ದರು.
ಭಾರತ ಸರಕಾರದ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ಯುವ ರೀಜನಲ್ ಡೈರೆಕ್ಟರ್ ಅಧಿಕಾರಿ ವೈ ಎಂ ಉಪ್ಪಿನ್ ಅವರು ಸಮಾರೋಪ ಭಾಷಣವನ್ನು ಮಾಡಿ ಹಲವಾರು ರಾಜ್ಯದ ವಿವಿಧ ಯುವಕರು ಒಟ್ಟಾಗಿ ಸೇರಿ ಏಕತೆಯಿಂದ ಗ್ರಾಮೀಣ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಕಲಿತು ಜನರ ಬದುಕನ್ನು ಅರ್ಥೈಸಿಕೊಂಡು ಸ್ವತಹ ಅಭಿವೃದ್ಧಿಯಾಗುವುದರೊಂದಿಗೆ ದೇಶದ ಅಭಿವೃದ್ಧಿಯನ್ನು ಯೋಚಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಹಿಂದೆ ಹತ್ತು ದಿನಗಳ ಶಿಬಿರ ನಡೆಯುತ್ತಿದ್ದು ಈಗ ಒಂದು ವಾರಕ್ಕೆ ಸೀಮಿ ತಗೊಂಡಿದೆ. ಮಾಜಿ ಮಂತ್ರಿ ಅಭಯ ಚಂದ್ರ ಜೈನ ಅವರು ಸಚಿವರಾಗಿದ್ದ ಕಾಲದಲ್ಲಿ ಎನ್ ಎಸ್ ಎಸ್ ಗೆ ಹೆಚ್ಚಿನ ಅನುದಾನವನ್ನು ಕೊಡಿಸಿದ ಕಾರಣದಿಂದಾಗಿ ಶಿಬಿರಗಳು ಅಲ್ಲಲ್ಲಿ ರಾಜ್ಯದಾದ್ಯಂತ ನಡೆಯುತ್ತಿದೆ ಎಂದು ನೆನಪಿಸಿಕೊಂಡರು. ಶಿಬಿರದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೀತಿ, ರಾಷ್ಟ್ರ ಗೌರವ ಇತ್ಯಾದಿಗಳನ್ನು ಹೆಚ್ಚಿಸುವ ಪ್ರಯತ್ನದೊಂದಿಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆಯ ಮಟ್ಟ, ಪ್ರಾಯೋಗಿಕ ಕಲಿಕೆ, ಶೈಕ್ಷಣಿಕ ಗುಣಮಟ್ಟ, ಕ್ರೀಡಾ ಮನೋಭಾವ ಇತ್ಯಾದಿ ಎಲ್ಲವನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ವಿವಿಧ ರಾಜ್ಯಗಳಿಂದ ಆಗಮಿಸಿದ ಎನ್ ಎಸ್ ಎಸ್ ಅಧಿಕಾರಿಗಳಾದ ಕೇರಳದ ಉಣ್ಯಿ ಕೃಷ್ಣನ್, ಆಂಧ್ರದ ಶಿವಪ್ರಸಾದ್, ಬೀದರ್ ನ ಡಾ ದಿಲೀಪ್, ತಮಿಳುನಾಡಿನ ದಿನೇಶ್, ಗುಜರಾತ್ ನ ತನ್ವಿ, ಹಾಗೂ ಹಲವಾರು ರಾಜ್ಯದ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರು ತಿಳಿಸಿದಂತೆ ಶಿಬಿರದಲ್ಲಿ ಪ್ರತಿಯೊಬ್ಬರಿಗೂ ಅವರವರಿಗೆ ಬೇಕಾದ ರೀತಿಯ ಎಲ್ಲ ವ್ಯವಸ್ಥೆಗಳನ್ನು, ಊಟ ತಿಂಡಿ ಇತ್ಯಾದಿ ಎಲ್ಲವನ್ನು ಮಾಡಿಕೊಟ್ಟುದಕ್ಕೆ ಕಾಲೇಜಿನ ಎಲ್ಲರನ್ನೂ ಹಾಡಿ ಹೊಗಳಿದರು.
ವೇದಿಕೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿ ಕಾಡ್, ಮಹಾವೀರ ಕಾಲೇಜಿನ ಆಡಳಿತ ಸಮಿತಿ ಚೇರ್ಮನ್ ಕೆ ಅಭಯ ಚಂದ್ರ ಜೈನ್, ಮೊಡಂ ಕಾಪು ಕಾಲೇಜಿನ ಸಿಸ್ಟರ್ ಲತಾ ಫರ್ನಾಂಡಿಸ್, ಡಾ.ಶೇಷಪ್ಪಾಜಿ, ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಉಪ ಪ್ರಾಂಶುಪಾಲ ರಮೇಶ್ ಭಟ್, ಹಾಜರಿದ್ದರು.
ಶಿಬಿರದ ಮುಖ್ಯ ವ್ಯವಸ್ಥೆ ಯ ಎನ್ಎಸ್ಎಸ್ ಅಧಿಕಾರಿ ಶಾರದಾ ಸ್ವಾಗತಿಸಿದರು. ಸೌರವ್ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಕಾರ್ಡಿನೇಟರ್ ಡಾ. ನಾಗರತ್ನ ಕೆ ಎ ವಂದಿಸಿದರು.
ಫೋಟೋ ವರದಿ ; ರಾಯಿ ರಾಜ ಕುಮಾರ ಮೂಡುಬಿದಿರೆ





































