ಮಂಗಳೂರು : ಕರಾವಳಿಯ ರಾಜಕೀಯ ವಲಯದಲ್ಲಿ ತಲ್ಲಣಗೊಳಿಸಿದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಮುಖ ಆರೋಪಿ ಮೊಹಮ್ಮದ್ ಮುಸ್ತಾಫಾ ಅಲಿಯಾಸ್ ಮುಸ್ತಾಫಾ ಪೈಚಾರ್ ನನ್ನು ಹಾಸನದಲ್ಲಿ ಎನ್ ಐ ಎ ಬಂಧಿಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

2022 ರಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು. ಈ ಪ್ರಕರಣದ ಬಳಿಕ ಪರಿಸರದಲ್ಲಿ ಹಲವು ಗೊಂದಲ ವಾತಾವರಣ ನಡೆದಿದ್ದು, ಬಿಜೆಪಿಯ ರಾಜ್ಯ ಮಟ್ಟದ ಮುಖಂಡರ ಕಾರನ್ನು ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಅಲುಗಾಡಿಸಿದ ಬೆಳವಣಿಗೆಯೂ ರಾಷ್ಟ್ರಮಟ್ಟದಲ್ಲಿ ಸುದ್ದಿಗ್ರಾಸ್ತವಾಗಿತ್ತಲ್ಲದೇ ಬಿಜೆಪಿ ಕಾರ್ಯಕರ್ತರ ಆಕ್ರೋಶ ತಣ್ಣಿಸಲು ಬಿಜೆಪಿ ರಾಷ್ಟ್ರಮಟ್ಟದ ನಾಯಕರು ನೆಟ್ಟಾರಿಗೆ ಅಗಮಿಸಬೇಕಾಯಿತು.



ಕೃತ್ಯದಲ್ಲಿ ಭಾಗಿಯಾಗಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದರೆ, ಪ್ರಮುಖ ಆರೋಪಿಗಳ ಪತ್ತೆ ಹಚ್ಚುವಲ್ಲಿ ಇಲಾಖೆಗೆ ಸಾಧ್ಯವಾಗಿರಲಿಲ್ಲ.

ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಮುಸ್ತಾಫಾ ಅಲಿಯಾಸ್ ಮುಸ್ತಾಫಾ ಪೈಚಾರ್ ಪತ್ತೆ ಹಚ್ಚಿದವರಿಗೆ ರೂ. 5 ಲಕ್ಷ ಬಹುಮಾನವನ್ನು ಘೋಷಿಸಿ ಸಾರ್ವಜನಿಕ ಮಾಹಿತಿಯನ್ನು ಎನ್ ಐ ಎ ಬಿಡುಗಡೆಮಾಡಿತು.
ಪ್ರವೀಣ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಳ್ಯದ ಪೈಚಾರ್ ನ ಮುಸ್ತಫಾ ಹಾಗೂ ಸೋಮವಾರ ಪೇಟೆಯ ಇನ್ಯಾಸ್ ಹಾಸನದ ಸಕಲೇಶಪುರದ ಆನೆಮಹಲ್ ನ ಸಿರಾಜ್ ನಲ್ಲಿ ಕೆಲಸಕ್ಕೆ ಸೇರಿದ್ದರು. ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿಯಲ್ಲಿ ಆಶ್ರಯದಾತ ಸಿರಾಜ್‌ನನ್ನು ಎನ್‌ಐಎ ತಂಡ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.



































