ಪ್ರವಾಸೋದ್ಯಮದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಅವಕಾಶವಿಟ್ಟುಕೊಂಡಿದೆ ಕಾರ್ಕಳ

ಶತಮಾನಗಳ ಹಿಂದಿನ ಪಾಂಡ್ಯರಸರ ಕಾಲದ ರಾಜವಂಶಜರ ಆಡಳಿತಕ್ಕೊಳಗಾಗಿದ್ದ ಕಾರ್ಕಳಕ್ಕೆ ಮೂಲ ಹೆಸರು ಪಾಂಡ್ಯ ನಗರ ಎಂದೇ ಆಗಿತ್ತು. ಕಾಲ ಕ್ರಮೇಣ ಅದು ಕಾರ್ಕಳವಾಗಿ ಬದಲಾಯಿತು.( ಕರಿ+ಕಲ್ಲು)
ಕಾರ್ಕಳದ ಪ್ರವಾಸೋದ್ಯಮ ಆಕರ್ಷಣೆಯಲ್ಲಿ ಪ್ರಮುಖವಾಗಿರುವುದು ಜೈನ ಯಾತ್ರಾ ಸ್ಥಳಗಳು, ದೇವಾಲಯಗಳು . ಗೋಮಟೇಶ್ವರ ಏಕ ಶಿಲಾಮೂರ್ತಿಯು ವಿಶ್ವಗಮನ ಸೆಳೆಯುವಲ್ಲಿ ಪ್ರಧಾನವಾಗಿದೆ. ಕಾರ್ಕಳದ ಎಲ್ಲ ಪ್ರವಾಸಿ ತಾಣಗಳು ಮಲೆನಾಡ ತಪ್ಪಲಿನ ಸುಂದರವಾದ ನೈಸರ್ಗಿಕ ಮಡಿಲಿನಲ್ಲಿ ಇದೆ. ವಾರ್ಷಿಕವಾಗಿ 10-15 ಲಕ್ಷ ಪ್ರವಾಸಿಗರನ್ನು ಆಕರ್ಷಿಸಲು ಸಂಯೋಜಿತ ಸರ್ಕ್ಯೂಟ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಕಾರ್ಕಳದಲ್ಲಿನ ಬೆಟ್ಟದ ಮೇಲಿರುವ 42 ಅಡಿ ಎತ್ತರದ ಏಕಶಿಲೆಯ ಪ್ರತಿಮೆ (1432 CE); ಯು ಕರ್ನಾಟಕದ ನಾಲ್ಕು ಗೋಮಟೇಶ್ವರ ಮೂರ್ತಿಗಳಲ್ಲಿ ಒಂದು. ಆ ಬಾಹುಬಲಿ ಮೂರ್ತಿಗಳು ಜಾಗತಿಕವಾಗಿ ಜೈನರನ್ನು ಆಕರ್ಷಿಸುತ್ತದೆ.
ಚತುರ್ಮುಖ ಬಸದಿಯು ಒಂದು ಅತ್ಯಾಕರ್ಷಕವಾದ ನಿರ್ಮಾಣ. 1567 CE ಕಾಲಯುಗದ ನಾಲ್ಕು ಮುಖದ (ಚತುರ್ಮುಖ ಬಸದಿ)ಜೈನ ದೇವಾಲಯವು ಹೊಯ್ಸಳ ಶಿಲ್ಪಕಲೆಯದ್ದಾಗಿದೆ. ಆನೆಕೆರೆ ಮಧ್ಯೆ ಇರುವ ಬಸದಿ ಕೂಡಾ ಚತುರ್ಮಖಗಳ ಬಸದಿಯೇ ಆಗಿರುತ್ತದೆ. ಅದು ಗಾತ್ರದಲ್ಲಿ ಕಿರಿದಾಗಿದ್ದು ಆನೆಕೆರೆ ಬಸದಿ ಎಂದೇ ಕರೆಯಲ್ಪಡುತ್ತಿದೆ.
ಕಾರ್ಕಳ ಹಿರಿಯಂಗಡಿ ಬಸದಿಯು ಅಲ್ಲಿನ 56 ಅಡಗಳಷ್ಟು ಅತಿ ಎತ್ತರದ ಮಾನಸ್ತಂಭದ ಕಾರಣಕ್ಕಾಗಿಯೂ ,ಒಂದೇ ಪ್ರಾಂಗಣದ ಸುತ್ತಲೂ ಒಂಬತ್ತು ಜಿನಾಲಯಗಳಿರುವುದು ಅದರ ಮತ್ತೊಂದು ವಿಶೇಷತೆಯಾಗಿದೆ. ಹಿರಿಯಂಗಡಿ ಬಸದಿಯು ಅತೀ ಆಕರ್ಷಣೆಯ ಕ್ಷೇತ್ರವಾಗಿದೆ.
ಕಾರ್ಕಳ-ಆಗುಂಬೆ ರಸ್ತೆಯ ಮಧ್ಯೆ ಕಾಣಸಿಗುವ ವರಂಗ ಬಸದಿಯು ಅಲ್ಲಿನ ಕೆರೆ ಹಾಗೂ ಬೆಟ್ಟಗಳ ಸಂಗಮದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಆಕರ್ಷಣೆಯನ್ನು ಪಡೆದುಕೊಂಡಿರುತ್ತದೆ.

ಕಾರ್ಕಳ ಪೇಟೆಯಲ್ಲಿಯೇ ಇರುವ ಅನಂತಪದ್ಮನಾಭ ದೇವಸ್ಥಾನವು ಹಿಂದೂ ಧಾರ್ಮಿಕ ದೇವಸ್ಥಾನವಾಗಿದೆ .ಅದು ಪ್ರಾಚೀನ ವಿಷ್ಣು ದೇವಸ್ಥಾನ. ಕಪ್ಪು ಶಿಲೆಯ ಹತ್ತು ಅಡಿಗಳ ಶೇಷಶಯನ ಮೂರ್ತಿಯನ್ನು ಅಲ್ಲಿ ಪ್ರತಿಷ್ಠಾಪಿಸಲಾಗಿದೆ
ಇನ್ನೊಂದು ಪ್ರಸಿದ್ಧ ಕೇಂದ್ರ ವೆಂಕಟರಮಣ ದೇವಸ್ಥಾನ. ಕಾರ್ಕಳ ಪೇಟೆ ರಸ್ತೆಯ ಬದಿಯಲ್ಲೇ ಇರುವ ದೇವಸ್ಥಾನಕ್ಕೆ ಭಾರೀ ಆಕರ್ಷಣೆಯಿದೆ, ವರ್ಷದ ದೀಪೋತ್ಸವಕ್ಕೆ ಭಕ್ತ ಜನಸಾಗರವೇ ಅಲ್ಲಿಗೆ ಆಗಮಿಸುತ್ತದೆ.
ಕಾರ್ಕಳದ ಪ್ರವಾಸೀ ಆಕರ್ಷಣೆಯಲ್ಲಿ ಇನ್ನೊಂದು ಗುರುತು ಸೇಂಟ್ ಲಾರೆನ್ಸ್ ಚರ್ಚ್ ಅತ್ತೂರು. ಗೋಥಿಕ್ ಶೈಲಿಯ 18 ನೇ ಶತಮಾನದ ಚರ್ಚ್ ಆಗಿರುತ್ತದೆ. ಅದರ ವಾರ್ಷಿಕ ಹಬ್ಬವು ಭಕ್ತರ ಭಾರೀ ಜನಸಂದಣಿಯನ್ನು ಪಡೆದುಕೊಳ್ಳುತ್ತದೆ. ಕ್ರೈಸ್ತರಲ್ಲದೆ ಅನ್ಯ ಮತೀಯರೂ ಕೂಡಾ ಅತ್ತೂರು ಸಂತ ಲಾರೆನ್ಸ್ ದೇವಾಲಯದ ವಾರ್ಷಿಕ ಪೂಜಾ ನಿಯಮಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಅದರ ವಿಶೇಷವಾಗಿದೆ.
ಕಟ್ಟಡಗಳು,ಸ್ಮಾರಕಗಳ ಹೊರತಾಗಿ ಪರಿಸರ ಹಾಗೂ ಪ್ರಕೃತಿ ನಿರ್ಮಿತ ಪ್ರವಾಸಿ ತಾಣಗಳಲ್ಲಿ ಕಾರ್ಕಳದ ರಾಮಸಮುದ್ರ ಸರೋವರ ಇನ್ನೊಂದು, ಆನೆಕೆರೆ.
ಪ್ರಕೃತಿ ನೀರಾವರಿಗಾಗಿ ಮಾನವ ನಿರ್ಮಿತ ರಾಮಸಮುದ್ರ ಸರೋವರ, ಆನೆಕೆರೆ ಪಕ್ಷಿವೀಕ್ಷಣಾ ತಾಣವೂ ಆಗಿದೆ. ರಾಮಸಮುದ್ರ ಸರೋವರದಲ್ಲಿ ದೋಣಿ ವಿಹಾರ, ನಡಿಗೆ ಮಾರ್ಗಗಳನ್ನು ಅಭಿವೃದ್ಧಿಪಡಿಸಿ ಅದು “ಸೂರ್ಯಾಸ್ತ ಪ್ರಶಾಂತ ತಾಣ”ವಾಗಿದೆ.
ಕಾರ್ಕಳ ಕೋಟೆಯೂ ಕೂಡ ಐತಿಹಾಸಿಕ, ಸಾಹಸ ಪ್ರದರ್ಶನದ ಭೈರರಸ ಯುಗದ ಅವಶೇಷಗಳು;ವಿಹಂಗಮ ನೋಟಗಳು. ಚಾರಣ ಹಾದಿಗಳು, ಫಲಕಗಳು; ಜಿಪ್-ಲೈನಿಂಗ್ನಂತಹ ಸಾಹಸ ಸೇರ್ಪಡೆಗಳು.
ಕರ್ನಾಟಕದ ಗಮ್ಯಸ್ಥಾನ ಅಭಿವೃದ್ಧಿ ಸಮಿತಿಗಳ (DDCs) ಅಡಿಯಲ್ಲಿ, ಕಾರ್ಕಳವನ್ನು ಉಡುಪಿ ಕೃಷ್ಣ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ಮತ್ತು ಶೃಂಗೇರಿ ಶಾರದಾ ಪೀಠಕ್ಕೆ ಸಂಪರ್ಕಿಸುವ “ಕರಾವಳಿ ಜೈನ-ಪರಿಸರ ಸರ್ಕ್ಯೂಟ್” ಅನ್ನು ಪ್ರಸ್ತಾಪಿಸಲಾಗಿದೆ. ಇದು ಥೀಮ್ ಆಧಾರಿತ ಪ್ರವಾಸೋದ್ಯಮಕ್ಕಾಗಿ ಸ್ವದೇಶ್ ದರ್ಶನ್ 2.0 ನೊಂದಿಗೆ ಹೊಂದಿಕೆಯಾಗುತ್ತದೆ.
ಸ್ಮಾರಕ ನಿರ್ವಹಣೆಗಾಗಿ ಪರಂಪರೆಯನ್ನು ಅಳವಡಿಸಿಕೊಳ್ಳುವ ಯೋಜನೆಯ ಮೂಲಕ ₹10-15 ಕೋಟಿ ಹಂಚಿಕೆ ಮಾಡಿ; ಪುನಃಸ್ಥಾಪನೆಯಲ್ಲಿ ಸ್ಥಳೀಯರನ್ನು ತೊಡಗಿಸಿಕೊಳ್ಳಬೇಕಾಗಿದೆ.
ಸಾರಿಗೆ ಸಂಪರ್ಕವು ಬಹಳವಾಗಿ ಬೆಳೆಯುತ್ತಿದ್ದು ಪ್ರವಾಸಿಗರಿಗೆ ಅನುಕೂಲತೆಯನ್ನು ನೀಡುತ್ತಿದೆ.
ಇದೇ ರೀತಿಯ ಆಕರ್ಷಣೆಯ ಹೊರತಾಗಿಯೂ ಕಾರ್ಕಳವು ಉಡುಪಿಯ ಕೇವಲ 20-30% ಜನರನ್ನು ಮಾತ್ರ ನೋಡುತ್ತದೆ. “ಕೊನೆಯ ಮೈಲು” ಸುಧಾರಣೆಗಳತ್ತ ಗಮನಹರಿಸಬೇಕಾದ ಅಗತ್ಯವಿದೆ.
ಕಳೆದ ಮೇ 2025 ರಲ್ಲಿ, ಸೈಕಲ್ ಟ್ರ್ಯಾಕ್ಗಳು ಮತ್ತು ವಾಕಿಂಗ್ ಪಥಗಳು ಸೇರಿದಂತೆ ರಾಮಸಮುದ್ರ ಸರೋವರದ ಪುನರುಜ್ಜೀವನಕ್ಕಾಗಿ ಸ್ವದೇಶ್ ದರ್ಶನದ ಅಡಿಯಲ್ಲಿ ₹116 ಕೋಟಿ ಮಂಜೂರು ಮಾಡಲಾಗಿದೆ – ಪರಿಸರ ಪ್ರವಾಸೋದ್ಯಮವನ್ನು 30% ಹೆಚ್ಚಿಸುವ ನಿರೀಕ್ಷೆಯಿದೆ. ಆ ಪ್ರಯತ್ನದಲ್ಲಿ ಕಾರ್ಕಳದ ಶಾಸಕ,ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರ ಹಠ ಸಾಧನೆ ಮೆಚ್ಚುಗೆಯ ಸಂಗತಿಯಾಗುತ್ತದೆ.

ಸುಸ್ಥಿರ ಮತ್ತು ಸ್ಥಾಪಿತ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ
ಕರ್ನಾಟಕದ ಪರಿಸರ ಪ್ರವಾಸೋದ್ಯಮ ಮುಂಚೂಣಿಯಲ್ಲಿ ಮತ್ತು ವಿಷನ್ 2025 ರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು.
ಪ್ರವಾಸೋದ್ಯಮ ಆರ್ಥಿಕತೆಗಾಗಿ ಕೆಲವೊಂದು ಸವಾಲುಗಳು ಮತ್ತು ಪರಿಹಾರ ನಿಧಿ ವಿಳಂಬ ಕೂಡಾ ಪ್ರವಾಸೋದ್ಯಮ ಅಭಿವೃದ್ದಿಗೆ ಮಾರಕವಾಗುತ್ತದೆ ಸತ್ಯ.
ಹಿಂದಿನ ಅನುದಾನಗಳಲ್ಲಿ ₹75 ಕೋಟಿ ತಡೆಹಿಡಿಯಲಾಗಿದೆ ,ಶಾಸಕ ವಿ. ಸುನೀಲ್ ಕುಮಾರ್ ಮೂಲಕ ತ್ವರಿತ ಬಿಡುಗಡೆಗಾಗಿ ಪರ್ಯತ್ನಗಳೇ ಆಗುತ್ತಿದೆ.
ಎಲ್ಲದರ ಜೊತೆಗೆ ಪರಿಸರ ಕಾಳಜಿಯನ್ನು ತೋರಿಸುವ ಜವಾಬ್ದಾರಿಯಾಗಿ ಪ್ರವಾಸೀ ತಾಣಗಳು ಮತ್ತು ಕಟ್ಟಡ,ಶಿಖರಗಳ ತಪ್ಪಲಲ್ಲಿ ಹಸಿರು ಗಿಡ ನೆಟ್ಟು ಬೆಳೆಸಬೇಕಾದುದು ಅಗತ್ಯ.ಬರೇ ಜನದಟ್ಟಣೆಯನ್ನಷ್ಟೇ ಹೆಚ್ಚಿಸುವ ಉದ್ದೇಶ ಪ್ರವಾಸೋದ್ಯದ್ದಾಗಿರದೆ ಪ್ರಕೃತಿ ಪರಿಸರ ಪ್ರೇಮ ಮತ್ತದನ್ನು ಬೆಳೆಸಿ ಉಳಿಸಿದಾಗಲೂ ರಮಣೀಯತೆಯು ಹೆಚ್ಚಾಗುತ್ತದೆ. ಎಲ್ಲ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಸಸ್ಯ ಸಂಪತ್ತಿನ ಪರಿಚಯ ಮಾಡಿಕೊಳ್ಳುವುದೂ ಕೂಡ ಪ್ರವಾಸಿಗರಿಗೆ ಪ್ರಯೋಜನವಾಗುತ್ತದೆ.






































