ಪ್ರಯಾಣಿಕರನ್ನು ನಡುರಸ್ತೆಯನ್ನು ಇಳಿಸಿ ಹೋಗುವ ಬಸ್ಸು ಸಿಬ್ಬಂದಿಗಳು!

Picture of RB NEWS

RB NEWS

Bureau Report

ಕಾರ್ಕಳ : ಹುಬ್ಬಳ್ಳಿ ಧಾರವಾಡ ಬಾಗಲಕೋಟೆ ಬಾದಾಮಿ ಸೇರಿದಂತೆ ಉತ್ತರ ಕರ್ನಾಟಕದ ಭಾಗದಿಂದ ಉಡುಪಿಗೆ ಬಂದು ಕಾರ್ಕಳ ಮೂಡಬಿದ್ರೆ ಮೂಲಕವಾಗಿ ಧರ್ಮಸ್ಥಳಕ್ಕೆ ಹೋಗುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳು ಕಾರ್ಕಳದ ಬಂಡೀಮಠ‌ ಬಸ್ ನಿಲ್ದಾಣಕ್ಕೆ ಅಗಮಿಸದೇ ತಾಲೂಕು ಕಚೇರಿ ಸಮೀಪದಲ್ಲಿ ಇರುವ ಸರ್ವಜ್ಞನ ವೃತ್ತದ ಬಳಿಯಿಂದಲೇ ಬೈಪಾಸ್ ಮೂಲಕ ಹಾದು ಹೋಗುತ್ತವೆ. ಇದರಿಂದ ಪ್ರಯಾಣಿಕರಿಗೆ ತ್ರಾಸವಾಗುತ್ತಿವೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿವೆ.

ದೂರದ ಊರಿಗೆ ಹೋಗಿದ್ದ ಕಾರ್ಕಳದ ಪ್ರಯಾಣಿಕರು ರಾತ್ರಿಯ ಹೊತ್ತು ಕಾರ್ಕಳಕ್ಕೆ ಬಂದರೆ ಸರ್ವಜ್ಞ ವೃತ್ತದ ಬಳಿಯಲ್ಲಿ ಪ್ರಯಾಣಿಕರು ಇಳಿಯ ಬೇಕಾಗುವ ಪ್ರಮೇದ ಎದುರಾಗುತ್ತದೆ. ಇದರಿಂದ ಬಹಳ ಸಮಸ್ಯೆ ಅನುಭವಿಸಬೇಕಾಗುತ್ತದೆ.

ಸರ್ವಜ್ಞ ವೃತದ ಹತ್ತಿರ ಪ್ರಯಾಣಿಕರನ್ನು ಕೆ ಎಸ್ ಎರ್ ಟಿ ಸಿಯ ಸಿಬ್ಬಂದಿಗಳು ಇಳಿಸುವುದರಿಂದ ಅಲ್ಲಿ ಇಳಿಯುವ ಪ್ರಯಾಣಿಕರು ತ್ರಿಶಂಕು ಸ್ಥಿತಿ ಎದುರಿಸಲೇ ಬೇಕಾಗುತ್ತದೆ. ರಾತ್ರಿ ಹೊತ್ತು ಆದ ಕಾರಣದಿಂದಾಗಿ ಇತರ ವಾಹನಗಳಲ್ಲಿ ಮನೆಗೆ ಹೋಗುವುದಕ್ಕೆ ಯಾವುದೇ ವ್ಯವಸ್ಥೆಯು ಇರುವುದಿಲ್ಲ.

ಕೆ ಎಸ್ ಆರ್ ಟಿ ಸಿ ಎಲ್ಲಾ ಬಸ್ಸುಗಳು ಬಂಡಿ ಮಠದ ಬಸ್ ನಿಲ್ದಾಣಕ್ಕೆ ಬಂದು ಹೋದರೆ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕುಳಿತು ಇತರ ವಾಹನಗಳಿಗೆ ಹೋಗುವುಕ್ಕೂ ಅವಕಾಶ ದೊರಕುತ್ತದೆ.‌ ವಾಹನ ಸಿಗುವುದಕ್ಕೆ ತಡವಾದಲ್ಲಿ ಬಂಡೀಮಠದಲ್ಲಿ ಕುಳಿತುಕೊಳ್ಳುವುದಕ್ಕೂ ಆಸನದ ವ್ಯವಸ್ಥೆ ಇದೆ.

ಪ್ರಯಾಣಿಕರನ್ನು ಬಸ್ಸಿಗೆ ಬಿಡಲು ಹಾಗೂ ಕರೆದುಕೊಂಡು ಹೋಗಲು ತಡರಾತ್ರಿಯ ವರೆಗೆ ಹಾಗೂ ನಸುಕಿನ ಜಾವದಲ್ಲಿ ಕೆಲ ರಿಕ್ಷಾಗಳು ಬಂಡೀಮಠದಲ್ಲಿ ತಂಗುತ್ತಿದ್ದು, ಇದರಿಂದ ಅದೆಷ್ಟೋ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ.

ಕೆಎಸ್ ಆರ್ ಟಿ ಸಿ ಬಸ್ ಗಳು ಸರ್ವಜ್ಞ ವೃತ್ತದಲ್ಲಿ ಪ್ರಯಾಣಿಕರನ್ನು ಇಳಿಸಿ ಹೋಗುವುದರಿಂದ ಸರ್ವಜ್ಞ ವೃತ್ತದಿಂದ ಬಂಡಿಮಠದವರೆಗೆ ಅಥವಾ ಕಾರ್ಕಳ ಪೇಟೆ ವರೆಗೆ ನಡೆದುಕೊಂಡು ಬರಬೇಕಾಗುತ್ತದೆ.
ಪ್ರಯಾಣಿಕರಲ್ಲಿ ಮಕ್ಕಳು, ಮಹಿಳೆಯರು,ಹಿರಿಯ ನಾಗರಿಕರು ಇದ್ದಲ್ಲಿ ಅಲ್ಲಿಂದ ನಡೆದುಕೊಂಡು ಬರುವುದು ಕಷ್ಟಕರ. ಏಕಾಂಗಿ ಪ್ರಯಾಣಿಕರನ್ನು ಕಾದು ಕುಳಿತು ಹಿಂಬಾಲಿಸಿ ಬಂದು ದೋಚುವ ಮಂದಿಗಳು ಈಗ ಅಲ್ಲಲ್ಲಿ ಸಿಗುತ್ತಾರೆ. ಈ ನಡುವೆ ಬೀದಿ ನಾಯಿಗಳ ಕಾಟವು ಎದುರಾಗಬಹುದು.

ಉಡುಪಿ ಜಿಲ್ಲಾಧಿಕಾರಿಯ ಅದೇಶದಂತೆ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಕಡ್ಡಾಯವಾಗಿ ಬಂಡೀಮಠ ಬಸ್ ನಿಲ್ದಾಣಕ್ಕೆ ಅಗಮಿಸಿ. ಪ್ರಯಾಣಿಕರನ್ನು ಇಳಿಸಿ, ಹತ್ತಿಸಿ ಬಸ್ಸು ಸಂಚಾರಕ್ಕೆ ನಿರ್ದೇಶಿಸಿದ್ದಾರೆ.

ಸಿಬ್ಬಂದಿಗಳು ಮಾತ್ರ ಇದನ್ನೆಲ್ಲ ಉಲ್ಲಂಘಿಸುತ್ತಿರುವುದರಿಂದ ಪ್ರಯಾಣಿಕರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸಬೇಕಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಬಂಧಿಕರು ಅಧಿಕಾರಿಗಳು ಇದರತ್ತ ಗಮನ ಹರಿಸಲೇ ಬೇಕು.

ಎಲ್ಲಾ ಬಸ್ಸುಗಳು ರಾತ್ರಿ ಹೊತ್ತು ಬಂಡೀಮಠ ಬಸ್ ನಿಲ್ದಾಣಕ್ಕೆ ಬಂದು ಹೋಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top