
ಕಾರ್ಕಳ: ತನ್ನಲ್ಲಿ ಇರುವಂತಹ ಪ್ರತಿಭೆ ಹಾಗೂ ಕೌಶಲ್ಯತೆಯನ್ನು ಸದುಪಯೋಗ ಪಡಿಸಿಕೊಂಡಾಗ ಸಮಾಜಕ್ಕೆ ಮೌಲ್ಯಯುತ ಕೊಡುಗೆಗಳನ್ನು ನೀಡಲು ಸಾಧ್ಯ. ಪ್ರತಿಯೊಬ್ಬರು ಅವರವರ ವೃತ್ತಿ ಶೇಷ್ಠತೆ ಅರಿತುಕೊಳ್ಳುಬೇಕು. ಸಮಾಜದ ಏಳಿಗೆಗಾಗಿ ಸರಕಾರ ಹೊಸ ಯೋಜನೆಗಳು ಜಾರಿಗೆ ತಂದಿದೆ. ಮಹಾತ್ಮರ ಜನ್ಮದಿನಾಚರಣೆ ಆಚರಿಸಿಕೊಂಡು ಬಂದಿದೆ.ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಧಕ ಬದುಕು ಕಾಣಲು ಸಾಧ್ಯವೆಂದು ಕಾರ್ಕಳ ತಹಶೀಲ್ದಾರ್ ಪ್ರತಿಭಾ ಆರ್ ಅಭಿಮತ ವ್ಯಕ್ತಪಡಿಸಿದರು.

ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ವಿಶೇಷ ಉಪನ್ಯಾಸಕ ದಾಮೋದರ್ ಶರ್ಮ ಬಾರ್ಕೂರ್ ಮಾತನಾಡಿ, ವಿಶ್ವಕರ್ಮ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಮಾನವ ಜನಾಂಗದ ಎಲ್ಲರಿಗೂ ವಿಶ್ವಕರ್ಮದವರ ಕೊಡುಗೆ ಅಮೂಲ್ಯವಾಗಿದೆ. ಪುರಾತನ ಪರಂಪರೆಗಳಾದ ಧಾರ್ಮಿಕ,ಸಾಮಾಜಿಕ, ಕಲೆ ಕ್ಷೇತ್ರಗಳ ಉಳಿವಿನಲ್ಲಿ ಹಿಡಿದು ಪ್ರಸ್ತುತ ಕಾಲಘಟ್ಟ ಮಾತ್ರವಲ್ಲ ಉಪಯುಕ್ತ ಮೌಲ್ಯಗಳನ್ನು ನೀಡುತ್ತಾ ಬಂದಿದೆ. ಕಲೆಗಾಗಿ ತನ್ನ ಜೀವವನ್ನೇ ತೆತ್ತು ದೈವಸಂಭೂತರಾಗಿ ಎಲ್ಲರ ಮನಗಳಲ್ಲಿ ಸ್ಥಿರಸ್ಥಾಯಿಯಾದ ಶಕ್ತಿಸ್ವರೂಪಿಗಳಾದವರು ವಿಶ್ವಕರ್ಮದವರೆಂದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಜನ್ಮದಿನಾಚರಣೆಗಳು ಸಮುದಾಯಗಳಿಗೆ ಪ್ರೇರಣೆಯಾಗಬೇಕೆ ಹೊರತು, ದೂಷಣೆಯಾಗಬಾರದು ಎಂದರು.
ಕಾರ್ಕಳ ಪೆರ್ವಾಜೆ , ವಿ.ಬಿ.ಎಸ್ ಸಭಾ (ರಿ) ಅಧ್ಯಕ್ಷ ಬಿ. ಪ್ರಕಾಶ್ ಆಚಾರ್ಯ ಮಾತನಾಡಿ ವಿಶ್ವಕರ್ಮ ಸಮಾಜದ ಶ್ರೇಯೋಭಿವೃದ್ಧಿಗೆ ಸರಕಾರದಿಂದ ಅನುಷ್ಠಾನಗೊಂಡಿರುವ ಯೋಜನೆಗಳು ಸದುಪಯೋಗ ಪಡಿಸಬೇಕು ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಾನಂದ, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ರಿಯಾಜ್ ನಿರೂಪಿಸಿದರು.
ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನ ಆಡಳಿತ ಮೊಕ್ತಸರ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಧನ್ಯವಾದವಿತ್ತರು.





















