ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
ಕಾರ್ಕಳ: ಕಾರ್ಕಳ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ (ಲ್ಯಾಂಪ್ಸ್) ಕಾರ್ಕಳ ಇದರ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಸಂಘದ ಸಭಾಭವನದಲ್ಲಿ ಜರುಗಿತು.
ಸಂಘದ ಉಪಾಧ್ಯಕ್ಷ ಬಾಲಗಂಗಾಧರ ಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಪಿ.ಯು.ಸಿ ಯಲ್ಲಿ ಅಧಿಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ದಿವಾಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಯನ್ನು ಮಾಡಿ, ಕಾರ್ಯಕ್ರಮ ನಿರೂಪಿಸಿದರು.
ಸಂಘದ ಸದಸ್ಸೆ ಜ್ಯೋತಿ ಪ್ರಾರ್ಥನೆಗೈದರು. ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ರಾಘವ ನಾಯ್ಕ, ಉದಯ ಕುಮಾರ್, ಬಾಬು ನಾಯ್ಕ, ಸುರೇಶ ನಾಯ್ಕ, ಸುರೇಶ ಗೌಡ, ರಮೇಶ ನಾಯ್ಕ, ರಾಘವೇಂದ್ರ, ಸುಲೋಚನಾ, ವೀಣಾ ನಾಯ್ಕ ಉಪಸ್ಥಿತರಿದ್ದು
ನಿರ್ದೇಶಕ ಸುರೇಶ ನಾಯ್ಕ ಧನ್ಯವಾದವಿತ್ತರು.






































