ಪ್ರತಿಭಟನೆಯ ಸಿದ್ಧತೆಯ ನಡುವೆ ಬೆಳಗಿದ ವಿದ್ಯುತ್ ದೀಪ

Picture of RB NEWS

RB NEWS

Bureau Report

ಕಾರ್ಕಳ : ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಸಿದ್ಧತೆ ಕೈಗೊಂಡ ವಿಚಾರ ಬಯಲಾಗುತ್ತಿದ್ದಂತೆ‌ ದಾರಿ ದೀಪ ಬೆಳಗಿದ ಬೆಳವಣಿಯು ಆನೆಕೆರೆ‌ ವೃತ್ತದಲ್ಲಿ ನಡೆದಿದೆ.

ಆನೆಕೆರೆ ಕೆರೆಬಸದಿಯ ಪಂಚಕಲ್ಯಾಣ ಕಾರ್ಯಕ್ರಮದ ಸಂದರ್ಭದಲ್ಲಿ ಬೆಳಕಬೇಕಾಗಿದ್ದ ವಿದ್ಯುತ್‌ ದೀಪ ಬೆಳಗದೇ ಪರಿಸರದಲ್ಲಿ ಕತ್ತಲು ಆವರಿಸಿಕೊಂಡಿತು. ಈ ನಡುವೆ ನವರಾತ್ರಿಯ ಏಳನೇ ದಿನದಂದು ವಿದ್ಯುತ್ ದೀಪ ಬೆಳಗಿರುವುದು ಸ್ಥಳೀಯ ನಾಗರಿಕರಲ್ಲಿ ಸಂತಸವನ್ನುಂಟು ಮಾಡಿದೆ.‌

ಆನೆಕೆರೆ ವೃತ್ತದಲ್ಲಿ ಕಳೆದ ಒಂದು ವರ್ಷದಿಂದ ವಿದ್ಯುತ್ ದೀಪ ಬೆಳಗದೇ ಇರುವುದನ್ನು ಗಮನಿಸಿದ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಅವರು ಪುರಸಭೆ ಸ್ಪಂದನ ವಿಭಾಗದ ಕಡತದಲ್ಲಿ 7 ಬಾರಿ ದೂರು ದಾಖಲಿಸಿದ್ದರು. ಪುರಸಭಾ ಆಡಳಿತಾಧಿಕಾರಿಗಳಿಗೆ ಮೌಖಿಕವಾಗಿ ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನ ಶೂನ್ಯವಾಗಿತ್ತು.

ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಿ ಇಂದು ವಿದ್ಯುತ್ ಕಂಬಕ್ಕೆ ಬೃಹತ್ ಗಾತ್ರದ ಬ್ಯಾನರ್ ಅಳವಡಿಸಲು ಮುಂದಾಗುತ್ತಿರುವ ವಿಚಾರ ಬಯಲಾಗಿತ್ತಿದ್ದಂತೆ ರಾತ್ರಿ ವೇಳೆಗೆ ಪುರಸಭೆಯಿಂದ ಆನೆಕೆರೆ ವೃತ್ತಕ್ಕೆ ನೂತನ ದಾರಿ ದೀಪ ಹಾಕಿರುವುದು ನಾಗರಿಕರಲ್ಲಿ ಸಂತಸ ತಂದಿರುತ್ತದೆ.

ಹೋರಾಟದ ದಾರಿಯನ್ನು ಹಿಡಿದು ವಿದ್ಯುತ್ ದೀಪವನ್ನು ಬೆಳಗಿಸುವಂತೆ ಕಾರ್ಯ ರೂಪಿಸಿದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾವ್ ರವರಿಗೆ, ಸ್ಪಂದಿಸಿದ ಪುರಸಭೆಯ ಅಧ್ಯಕ್ಷರಿಗೆ, ಮುಖ್ಯಾಧಿಕಾರಿಗಳಿಗೆ, ಇಂಜಿನಿಯರ್ ಗಳಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top