ಪ್ರತಿಪಕ್ಷನಾಯಕನಿಗೆ ಕುಂಕುಮ ಅಲರ್ಜಿ!

Picture of RB NEWS

RB NEWS

Bureau Report

ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ ಅವರು ಕುಂಕುಮ ಹಚ್ಚಿಕೊಳ್ಳಲು ನಿರಾಕರಿಸಿದರು.

ಕಾರ್ಯಕರ್ತರು ಜೈಕಾರದೊಂದಿಗೆ ಆರ್. ಅಶೋಕ ಅವರನ್ನು ಸ್ವಾಗತಿಸಿದರು. ಶಾಲು ಹಾಕಿ ಬರಮಾಡಿಕೊಂಡು, ಕಾರ್ಯಕರ್ತರೊಬ್ಬರು ಅಶೋಕ ಅವರಿಗೆ ಹಾರ ಹಾಕಲು ಮುಂದಾದರು. ಆ ಹಾರ ತಮ್ಮ ಕೈಯಲ್ಲಿ ತೆಗೆದುಕೊಂಡು ಹಿರಿಯ ಮುಖಂಡ ಡಾ. ವಿಶ್ವನಾಥ್‌ ಪವಾ‌ರ್ ಅವರಿಗೆ ಹಾಕಿದರು. ಈ ವೇಳೆ ವಿಶ್ವನಾಥ ಅವರು ಅಶೋಕ ಅವರಿಗೆ ಕುಂಕುಮದ ತಿಲಕ ಹಚ್ಚಲು ಮುಂದಾದರು. ತಲೆಯನ್ನು ಹಿಂದಕ್ಕೆ ತೆಗೆದುಕೊಂಡ ಅಶೋಕ, ಬೇಡವೆಂದು ಕೈಯಿಂದ ತಡೆದು ತಿಲಕ ಹಚ್ಚಿಕೊಳ್ಳಲು ನಿರಾಕರಿಸಿದ್ದು ಕಂಡುಬಂತು.

ಈ ವೇಳೆ ಶಾಸಕ ಡಾ.ಅವಿನಾಶ ಜಾಧವ, ಮುಖಂಡರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top