ಪ್ರಗತಿ ಕಂಡ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿ.
ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘವು 68 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 69ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.
ಮೂಡುಬಿದಿರೆ ತಾಲೂಕಿನ ಬೆಳುವಾಯಿ, ಪಡುಮಾರ್ನಾಡು, ಮೂಡುಮಾರ್ನಾಡು, ಕೆಲ್ಲ ಪುತ್ತಿಗೆ ಮತ್ತು ದರೆಗುಡ್ಡೆ ಗ್ರಾಮಗಳಿಗೆ ಸೀಮಿತವಾಗಿರುತ್ತದೆ.


ಕೇಂದ್ರ ಕಛೇರಿ ಹಾಗೂ ಶಾಖೆಗಳು:- ಸಂಘವು ಕೇಂದ್ರ ಕಛೇರಿಯೊಂದಿಗೆ 5 ಶಾಖೆಗಳನ್ನು ಹೊಂದಿದ್ದು ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರ, ರೈತರಿಗೆ ಬೇಕಾಗುವ ಕೃಷಿ ಸವಲತ್ತು ಹಾಗೂ ರೇಶನ್, ರಾಸಾಯನಿಕ ಗೊಬ್ಬರಗಳನ್ನು ಮಿತದರದಲ್ಲಿ ಒದಗಿಸಲಾಗುತ್ತಿದೆ. ಶಾಖೆಗಳ ಸುಭದ್ರತೆಗಾಗಿ ಎಲ್ಲಾ ಶಾಖೆಗಳಿಗೆ ಭದ್ರತಾ ಕೊಠಡಿ, ಸಿ,ಸಿ.ಕ್ಯಾಮರಾ, ಅಲರಾಂ ಸಿಸ್ಟಮ್ ಅಳವಡಿಸಲಾಗಿದೆ.
ಸದಸ್ಯರು ಮತ್ತು ಪಾಲು ಬಂಡವಾಳ:- ದಿನಾಂಕ 31-03-2024ರ ಅಂತ್ಯಕ್ಕೆ ಇದ್ದಂತೆ ಒಟ್ಟು
7,477 ಮಂದಿ ಆ ತರಗತಿಯ ಸದಸ್ಯರಿದ್ದು, 8,150 ಮಂದಿ ಕ ತರಗತಿಯ ಸದಸ್ಯರಿರುತ್ತಾರೆ. ಸದಸ್ಯರ ಒಟ್ಟು ಪಾಲು ಬಂಡವಾಳ ರೂ. 1,85,37,480.00 ಇರುವುದು, ಕಳೆದ ಸಾಲಿಗಿಂತ ರೂ. 15,36,625.00 ಪಾಲುಬಂಡವಾಳ ವೃದ್ಧಿಯಾಗಿದೆ. ಈ ಪೈಕಿ ರಾಜ್ಯ ಸರ್ಕಾರದ ಯಾವುದೇ ಪಾಲು ಬಂಡವಾಳವಿರುವುದಿಲ್ಲ.
ದುಡಿಯುವ ಬಂಡವಾಳ:- 2023-2024ನೇ ಸಾಲಿಗೆ ಸಂಘದ ಒಟ್ಟು ದುಡಿಯುವ ಬಂಡವಾಳ ರೂ.123 ಕೋಟಿ ಆಗಿರುತ್ತದೆ.
ಕ್ಷೇಮ ನಿಧಿ ಮತ್ತು ಇತರ ನಿಧಿಗಳು:- ಪ್ರಕೃತ ಸಂಘದಲ್ಲಿ ರೂಪಾಯಿ 17,98,61,858.37 ವಿವಿಧ ನಿಧಿಗಳು ಇರುವುದು, ಕಳೆದ ಸಾಲಿಗಿಂತ ರೂ 2,22,74,641.11 ಸಂಘದ ನಿಧಿಯು ವೃದ್ಧಿಯಾಗಿರುತ್ತದೆ.
ಪರಿವೀಕ್ಷಣೆ:- ಕೃಷಿ ಪತ್ತಿನ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ವರದಿಯ ಮಾರ್ಗಸೂಚಿ ಸಂಖ್ಯೆ 9ರಲ್ಲಿ ತಿಳಿಸಿದಂತೆ ಎಲ್ಲಾ ಶಾಖೆಗಳಲ್ಲಿ ಆಂತರಿಕ ಲೆಕ್ಕ ಪರಿಶೋಧನೆಯನ್ನು ನಡೆಸಿರುತ್ತದೆ. ಸಂಘದಲ್ಲಿ ಅಡವಿಟ್ಟಿರುವ ಚಿನ್ನಾಭರಣ ಸಾಲಗಳ ಚಿನ್ನಾಭರಣಗಳನ್ನು ಸಂಘದ ನಿಯಮಕ್ಕನುಗುಣವಾಗಿ ಹೊರಗಿನ ಮೌಲ್ಯಮಾಪಕರಿಂದ ಪರಿವೀಕ್ಷಣೆ ಮಾಡಲಾಗಿದೆ.
ಸಿಬ್ಬಂದಿ ವರ್ಗ:- ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡಾ ಒಟ್ಟು 19 ಮಂದಿ ಖಾಯಂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತರಬೇತಿಯ ಬಗ್ಗೆ ಆಟೋಮೇಶನ್ ಕೌಡ್ ಸೊಲ್ಯೂಷನ್ಸ್ ಲಿ. ಮಂಗಳೂರು ಇವರಿಂದ ಆಗಿಂದಾಗೆ ಸಂಘದ ಸಾಫ್ಟ್ವೇರ್ ಸ್ಮಾರ್ಟ್ ಓಗಲ್ ಬಗ್ಗೆ ತರಬೇತಿ ಹಾಗೂ ಪ್ರತಿ ತಿಂಗಳ ಸಭೆಯಲ್ಲಿ ಸಾಲ ವಸೂಲಾತಿಯ ಪ್ರಮಾಣ ಹಾಗೂ ಠೇವಣಿಗಳ ಗುರಿ ಗೊತ್ತು ಪಡಿಸುವುದು. ಸರ್ವ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯು ಸಂಘದ ಪ್ರಗತಿಗೆ ಸಹಕಾರಿಯಾಗಿದೆ.
ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ:- 2022-2023ನೇ ಸಾಲಿನಲ್ಲಿ ಸಂಘವು ಮಾಡಿದ ಸಾಧನೆಗೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನೀಡುವ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಪರಿಗಣಿಸಿ 7ನೇ ಬಾರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2023-2024ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಹಾಗೂ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘವೆಂದು ಗುರುತಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದೆ.
ಬೆಳೆ ವಿಮೆ:- 2023-2024ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭಿಮಾ ಬೆಳೆ ವಿಮಾ ಯೋಜನೆಯಡಿಯಲ್ಲಿ 121 ಮಂದಿ ಸದಸ್ಯರನ್ನು ನೋಂದಾಯಿಸಿ ರೂ. 4,28,247/- ವಿಮಾ ಮೊಬಲಗನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೂಲಕ ವಿಮಾ ಕಂಪೆನಿಗೆ ಪಾವತಿಸಲಾಗಿದೆ. ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು 2024ನೇ ಸಾಲಿನ ಜೂನ್ ತಿಂಗಳ ನಂತರ ಆಗಸ್ಟ್ ತಿಂಗಳ ಒಳಗೆ ಮುಂಗಾರು ಹಂಗಾಮಿಗೆ ಅನ್ವಯಿಸಿ ಅಡಿಕೆ 1 ಎಕ್ರೆಗೆ ವಿಮಾ ಕಂತು 2590/- ಬೆಳೆ ಹಾನಿಯ ಪ್ರಮಾಣದ ಮೇಲೆ ಗರಿಷ್ಟ ಪರಿಹಾರದ ಮೊತ್ತ 51,800/- ಮತ್ತು ಕರಿಮೆಣಸು 1 ಎಕ್ರೆಗೆ ವಿಮಾ ಕಂತು 951/- ಬೆಳೆ ಹಾನಿಯ ಪ್ರಮಾಣದ ಮೇಲೆ ಗರಿಷ್ಟ ಪರಿಹಾರ ಮೊತ್ತ 19021/-
ಸೇವಾ ಸೌಲಭ್ಯ:- ಕರ್ನಾಟಕ ಸರಕಾರದ ಯಶಸ್ವಿನಿ ರೈತರ ಆರೋಗ್ಯ ವಿಮಾ ಯೋಜನೆಯಲ್ಲಿ ಸುಮಾರು 652 ಕುಟುಂಬದ ಸದಸ್ಯರು ಒಟ್ಟು 2482 ಮಂದಿ ಹೆಸರು ನೋಂದಾಯಿಸಿದ್ದು ಈ ಪೈಕಿ ಸುಮಾರು 27 ಕ್ಕೂ ಹೆಚ್ಚು ಮಂದಿ ಸದಸ್ಯರು ಈ ಯೋಜನೆಯಡಿಯಲ್ಲಿ ಬೇರೆ ಬೇರೆ ರೀತಿಯ ಶಸ್ತ್ರ ಚಿಕಿತ್ಸೆಯ ಪ್ರಯೋಜನವನ್ನು ಪಡೆದಿರುತ್ತಾರೆ. ಯಶಸ್ವಿನಿ ರೈತರ ಆರೋಗ್ಯ ವಿಮಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 162 ಕುಟುಂದ ಸದಸ್ಯರ ಒಟ್ಟು 645 ಮಂದಿಯ ಹೆಸರು ಉಚಿತವಾಗಿ ನೋಂದಾಯಿಸಿದೆ.
ಇತರ ಸೇವಾ ಸೌಲಭ್ಯಗಳು:
ಸಂಘದ ಸದಸ್ಯರ ಹಾಗೂ ಗ್ರಾಹಕರ ಅನುಕೂಲತೆಗಾಗಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯವನ್ನು ಮಿತದರದ ಬಾಡಿಗೆಯಲ್ಲಿ ಒದಗಿಸಲಾಗುತ್ತಿದೆ.
ಸದಸ್ಯರ ಅನುಕೂಲಕ್ಕಾಗಿ ಶೀಘ್ರ ಹಣ ವರ್ಗಾವಣೆಗೆ Neft/Rtgs ಸೇವಾ ಸೌಲಭ್ಯ,
- ಪಾನ್ ಕಾರ್ಡ್ ಸೌಲಭ್ಯ, ಝರೆಕ್ಸ್ ಇತ್ಯಾದಿ ಸೇವಾ ಸೌಲಭ್ಯವನ್ನು ಕಲ್ಪಿಸಲಾಗಿದೆ.
- ಮಳೆಕೊಯ್ದು ಯೋಜನೆಯಡಿ 15 ಮಂದಿ ಸದಸ್ಯರು ಸೌಲಭ್ಯವನ್ನು ಪಡೆದಿರುತ್ತಾರೆ.
- ಕೃಷಿ ಸಾಲ ಪಡೆದುಕೊಂಡಿರುವ ಸದಸ್ಯರಿಗೆ ರೂಪಾಯಿ 50,000/-ಗಳ ವೈಯಕ್ತಿಕ ಅಪಘಾತ ವಿಮಾ ಯೋಜನೆ ಯನ್ನು ನ್ಯಾಶನಲ್ ಇನ್ಸೂರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ಮಾಡಲಾಗಿದೆ
- ಕೃಷಿಸಾಲ ಪಡೆದ ಸದಸ್ಯರು ಸಾಲ ಮರುಪಾವತಿ ಮಾಡುವ ಮೊದಲೇ ಮೃತಪಟ್ಟಲ್ಲಿ ಸಂಘದ ಕ್ಷೇಮಾಭಿವೃದ್ಧಿ ನಿಧಿಯಿಂದ ರೂ.10,000/- ನೀಡುವ ಯೋಜನೆಯನ್ನು ಜಾರಿಗೊಳಿಸಿದೆ.
- ರೈತ ಸದಸ್ಯರಿಗೆ ಒಂದು ತಿಂಗಳ ಅವಧಿಗೆ ಬಡ್ಡಿ ರಹಿತ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಖರೀದಿ ಮಾಡಲು ಸಾಲದ ನೆಲೆಯಲ್ಲಿ ನೀಡಲಾಗುತ್ತಿದೆ. ಒಟ್ಟು 68 ಮಂದಿ ಸದಸ್ಯರು ಇದರ ಪ್ರಯೋಜನವನ್ನು ಪಡೆದಿರುತ್ತಾರೆ.
- ರಸಗೊಬ್ಬರ ಹಾಗೂ ಇತರ ಸರಕು ಸಾಗಾಟಕ್ಕಾಗಿ ಕಡಿಮೆ ಬಾಡಿಗೆ ದರದಲ್ಲಿ ಸಂಘದ ಟಾಟಾ ಯೋಧ ವಾಹನವು ಲಭ್ಯವಿದ್ದು ಅಫಘಾತ ಹಾಗೂ ಶವ ಸಾಗಾಟಕ್ಕೂ ಸದಸ್ಯರು ಇದರ ಉಪಯೋಗವನ್ನು ಪಡೆಯಬಹುದಾಗಿದೆ. 2023-2024ನೇ ಸಾಲಿನಲ್ಲಿ ಒಟ್ಟು 129 ಮಂದಿ ಸದಸ್ಯರು ಇದರ ಪ್ರಯೋಜನವನ್ನು ಪಡೆದಿರುತ್ತಾರೆ ಹಾಗೂ ರಸಗೊಬ್ಬರಗಳನ್ನು ಸಂಘದ ಶಾಖೆಗಳಿಗೆ ಸಾಗಾಟ ಮಾಡಲು ಈ ವಾಹನ ಅನುಕೂಲಕರವಾಗಿದೆ.
- ಕ್ಯಾನ್ಸರ್, ಹೃದ್ರೋಗ, ಮೆದುಳಿನ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸದಸ್ಯರಿಗೆ ಈ ಬಗ್ಗೆ ಚಿಕಿತ್ಸೆಗಾಗಿ ಸಂಘದ ಸದಸ್ಯರ ಕ್ಷೇಮನಿಧಿಯಿಂದ ಆರ್ಥಿಕ ನೆರವನ್ನು ನೀಡಲಾಗುತ್ತದೆ. ವರದಿ ಸಾಲಿನಲ್ಲಿ 24 ಸದಸ್ಯರಿಗೆ ಒಟ್ಟು ರೂಪಾಯಿ 4,20,000/- ಆರ್ಥಿಕ ನೆರವನ್ನು ನೀಡಲಾಗಿದೆ.
- ಸಂಘದ ಕೇಂದ್ರ ಕಛೇರಿ ಹಾಗೂ ಐದು ಶಾಖೆಗಳಲ್ಲಿ ನೂತನ ಸಾಫ್ಟ್ವೇರ್ ‘ಸ್ಮಾರ್ಟ್ ಬ್ಯಾಂಕ್ ಅಳವಡಿಸಿ ಗಣಕೀಕೃತ ಪಾಸ್ ಪುಸ್ತಕ ಮತ್ತು 100% ಗಣಕೀಕರಣ ಮಾಡಲಾಗಿದೆ.
- ಸದಸ್ಯರ ಖಾತೆಗಳ ವಿವರಗಳನ್ನು ಮೊಬೈಲ್ ಮೂಲಕ ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಆನ್ಲೈನ್ ಪಾವತಿಗೆ ಸಂಘದ ಬ್ಯಾಂಕ್ ಖಾತೆಗಳ ಬಗ್ಗೆ ಯುಪಿಐ ಪಾವತಿ ಸೌಲಭ್ಯವನ್ನು ಅನುಷ್ಟಾನಿಸಲಾಗಿದೆ.
ಉತ್ತಮ ರೈತರ ಸನ್ಮಾನ:- ಕಳೆದ 16-09-2023ರಂದು ಜರುಗಿದ ವಾರ್ಷಿಕ ಮಹಾಸಭೆಯಲ್ಲಿ ಈ ಸಂಘದ ಕಾರ್ಯವ್ಯಾಪ್ತಿಯಲ್ಲಿನ 5 ಗ್ರಾಮಗಳಿಂದ 10 ಮಂದಿ ಉತ್ತಮ ರೈತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
1) ಪ್ರಭಾಕರ ಶೆಟ್ಟಿ – ಹೆನಬೆಟ್ಟು, ಬೆಳುವಾಯಿ
2) ಸದಾನಂದ ನಾಯ್ಕ ಕುಕ್ಕುಡೇಲು, ಬೆಳುವಾಯಿ
3) ಮೊಹಮ್ಮದ್ ಹಾರೀಸ್- ಅಮನೊಟ್ಟು, ಪಡುಮಾರ್ನಾಡು
4) ಪಣಿರಾಜ್ ಜೈನ್- ಹಳೆಮನೆ, ಪಡುಮಾರ್ನಾಡು
5) ಚಂಪ ಕೆ ಪೂಜಾರಿ- ಬ್ರಹ್ಮಂದಡ್ಡ, ಮೂಡುಮಾರ್ನಾಡು
6) ಸರ್ವೋತ್ತಮ ಮೂಲ್ಯ-ಹುಳಜಾಲು, ಮೂಡುಮಾರ್ನಾಡು
7) ರಾಮಯ್ಯ- ದರೆಗುಡ್ಡೆ
8) ದುಜಪಿನ್ ಜೊಸ್ಪಿನ್ ಮಿನೇಜಸ್- ದಡ್ಡುಮನೆ, ದರೆಗುಡ್ಡೆ
9) ವೀರೇಂದ್ರ ಕೋಟ್ಯಾನ್- ಜಗಿದೊಟ್ಟು, ಕೆಲ್ಲಪುತ್ತಿಗೆ
10) ಪ್ರೇಮ ಪೂಜಾರಿ- ಪೊಲ್ಲೆದೊಟ್ಟು, ಕೆಲ್ಲಪುತ್ತಿಗೆ
ಗಣ್ಯರ ಭೇಟಿ:- ವರದಿ ಸಾಲಿನಲ್ಲಿ ನಮ್ಮ ಸಂಘಕ್ಕೆ ದ.ಕ. ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರಾದ ಮಾನ್ಯ ಎಚ್.ಎನ್. ರಮೇಶ್ ಹಾಗೂ ಮಂಗಳೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಮಾನ್ಯ ಸುಧೀರ್ ಕುಮಾರ್ ಜಿ. ಮತ್ತು ಮೂಡುಬಿದಿರೆ ತಾಲೂಕಿನ ಸಹಕಾರಿ ಸಂಘಗಳ ಸಿ ಡಿ ಓ ಶ್ರೀ ವಿಲಾಸ್ ಇವರು ಭೇಟಿ ನೀಡಿ ಸಂಘದ ಅಭಿವೃದ್ಧಿ ಬಗ್ಗೆ ಉತ್ತಮ ಸಲಹೆಗಳನ್ನು ನೀಡಿರುತ್ತಾರೆ.
ಮುಂದಿನ ಯೋಜನೆಗಳ ವಿವರ
- ಸಂಘದ ಸಂಪನ್ಮೂಲವನ್ನು ಹೆಚ್ಚಿಸುವರೇ ವಿವಿಧ ಠೇವಣಿ ಯೋಜನೆಗಳ ಮೂಲಕ ರೂ.108 ಕೋಟಿ ಠೇವಣಿ ಹೊಂದುವ ಗುರಿ ನಿಗದಿಪಡಿಸಲಾಗಿದೆ.
- ಸಂಘದ ಕೇಂದ್ರ ಕಛೇರಿ ಕಟ್ಟಡದ ಹಿಂಭಾಗದಲ್ಲಿ ನಬಾರ್ಡಿನ ಬಹು ಸೇವಾ ಕೇಂದ್ರ ಯೋಜನೆಯಡಿ ಸುಮಾರು 1.45 ಕೋಟಿ ವೆಚ್ಚದಲ್ಲಿ ನೂತನ ರೈತಸಿರಿ ಗೋದಾಮು ಕಟ್ಟಡ ಉದ್ಘಾಟನೆಗೊಂಡಿದ್ದು ಇದರ ಅಂಗಡಿ ಕೋಣೆಗಳನ್ನು ರೈತರ ಕೃಷಿ ಉತ್ಪನ್ನಗಳ ದಾಸ್ತಾನು ಇಟ್ಟು ಅದರ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು, ಹೆಚ್ಚುವರಿ ಕೋಣೆಗಳನ್ನು
- ಸಂಘದ ಸದಸ್ಯರುಗಳಿಗೆ ವ್ಯಾಪಾರ ವಹಿವಾಟು ಮಾಡಲು ಕಡಿಮೆ ಬಾಡಿಗೆ ದರದಲ್ಲಿ ನೀಡಲಾಗುವುದು. ರೈತರಿಗೆ ಬೇಕಾಗುವ ಕೃಷಿ ಸವಲತ್ತು ಹಾಗೂ ರೇಶನ್, ರಾಸಾಯನಿಕ .ಗೊಬ್ಬರಗಳನ್ನು ಇದರ ಅಂಗಡಿ ಕೋಣೆಗಳಲ್ಲಿ ವಿತರಿಸಲಾಗುವುದು.
- ಸಂಘದ ಕೇಂದ್ರ ಕಛೇರಿಯಲ್ಲಿ ಉದ್ಘಾಟನೆಗೊಂಡ ವಜ್ರಸಿರಿ ಸಭಾಂಗಣವನ್ನು ಬಾಡಿಗೆಗೆ ಸಮಾರಂಭ ನಡೆಸಲು ನೀಡಲಾಗುವುದು.
- ಕಾರ್ಯಕ್ಷೇತ್ರದಲ್ಲಿರುವ ಎಲ್ಲಾ ಸಣ್ಣ ಮತ್ತು ಅತೀ ಸಣ್ಣ ರೈತರನ್ನು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಸಂಘದ ಸದಸ್ಯರನ್ನಾಗಿ ಸೇರಿಸಿಕೊಳ್ಳುವುದು.
28-02-2025ರಲ್ಲಿ ಇದ್ದಂತೆ....
*4.45 ಕೋಟಿ ಮಿಕ್ಕಿ ವ್ಯವಹಾರ *108 ಕೋಟಿ ಠೇವಣೆ *ಶೇ.25ರಷ್ಟು ಲಾಭಾಂಶ *101 ಕೋಟಿ ಸಾಲಗಳು *ದಿನವಹಿ ಭಾಗ್ಯನಿಧಿ, *ಠೇವಣೆಯಲ್ಲಿ ನಿಮ್ಮ ದಿನನಿತ್ಯದ ಉಳಿತಾಯವನ್ನು ಉಳಿಸಿ *7,275ಕ್ಕೂ ಮಿಕ್ಕಿ “ಆ”ತರಗತಿಯ ಸದಸ್ಯರುಗಳು *ಕೃಷಿ ಉಪಕರಣ,ರಸಗೊಬ್ಬರ,ಕೀಟನಾಶಕ ನಮ್ಮ ಸಂಘದ ಎಲ್ಲಾ ಶಾಖೆಗಳಲ್ಲಿ ಲಭ್ಯವಿರುತ್ತದೆ. * SAFE LOCKER, NEFT, RTGS,PAN CARD ಸೌಲಭ್ಯವಿರುತ್ತದೆ. *ಭೂ ಅಡಮಾನ ಸಾಲ *ಚಿನ್ನಾಭರಣ ಈಡಿನ ಮೇಲೆ ಮಾಸಿಕ 8.50 % ಬಡ್ಡಿದರದಲ್ಲಿ ಕ್ಷಿಪ್ರ ಸಾಲ ಸೌಲಭ್ಯ( ಷರತ್ತುಗಳು ಅನ್ವಯವಾಗುತ್ತದೆ. *ವ್ಯವಹಾರ ಸಾಲ *ವಾಹನ ಸಾಲ *ಸೇಫ್ ಲಾಕರ್ *ಕೃಷಿ ಮತ್ತು ಕೃಷಿಯೇತರ ಎಲ್ಲಾ ಉದ್ದೇಶಗಳ ಸಾಲ ನಮ್ಮಲ್ಲಿ ಲಭ್ಯ.*ನಮ್ಮ ಸಂಘದ ಎಲ್ಲಾ ಶಾಖೆಗಳಲ್ಲಿ ಮೋದಿ ಕೇರ್ ಉತ್ಪನ್ನಗಳು ಲಭ್ಯವಿದೆ.





































