ಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಕೃತಿ ಸಂಭ್ರಮೋತ್ಸವ-2025 :ವಿದ್ಯಾರ್ಥಿಗಳಿಗೆ ಶಿಸ್ತಿನ ಜೊತೆ ಸಂಸ್ಕಾರ ಅವಶ್ಯಕ: ಶಾಸಕ ಉಮಾನಾಥ ಕೋಟ್ಯಾನ್

Picture of RB NEWS

RB NEWS

Bureau Report

ಕಾಂತಾವರ(ಕಾರ್ಕಳ) : ಕಾಂತಾವರದ ಶಾರದಾ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪ್ರಕೃತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 2024-25 ನೆಯ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ಪ್ರಕೃತಿ ಸಂಭ್ರಮೋತ್ಸವವು ಸಂಸ್ಥೆಯ ಸಂಸ್ಥಾಪಕ ಕ್ರಿಸ್ಪಿನ್ ಜೆರಾಲ್ಡ್ ಕ್ರಾಸ್ತಾ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದ ಗೌರವ ಅತಿಥಿ ವಕೀಲೆ ಶ್ವೇತಾ ಜೈನ್ ಮಾತನಾಡಿ, ” ಪ್ರಕೃತಿ ಸಂಭ್ರಮೋತ್ಸವವು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಉತ್ತಮ ವೇದಿಕೆಯಾಗಿದೆ. ಇದು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸಮಾಜದ ಮುನ್ನಳೆಯಲ್ಲಿ ಗುರುತಿಸಿಕೊಳ್ಳಲು ಅನುಕೂಲವಾಗಲಿದೆ” ಎಂದು ಹೇಳಿದರು.

ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್. ಟಿ ಮಾತನಾಡಿ ” ಶಿಕ್ಷಣದಲ್ಲಿ ಗುಣಾತ್ಮಕ ಅಂಶಗಳು ಅತಿ ಅವಶ್ಯಕ ಮತ್ತು ಗುಣಾತ್ಮಕ ಶಿಕ್ಷಣಕ್ಕೆ ಪ್ರಕೃತಿ ಶಿಕ್ಷಣ ಸಂಸ್ಥೆಯು ಮಾದರಿಯಾಗಿದೆ” ಎಂದು ಹೇಳಿದರು.

ಪ್ರಕೃತಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಪ್ರೊ. ಪದ್ಮನಾಭ ಗೌಡ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಸೂಕ್ತ ವಾತಾವರಣದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಕೃತಿ ಶಿಕ್ಷಣ ಸಂಸ್ಥೆಯು ಮಾದರಿಯಾಗಿದೆ. ಇಂತಹ ಸಂಸ್ಥೆಯನ್ನು ಸಮಾಜಕ್ಕೆ ನೀಡಿದ ಸಂಸ್ಥೆಯ ಅಧ್ಯಕ್ಷ ಕ್ರಿಶ್ಪಿನ್ ಜೆರಾಲ್ಡ್ ಕ್ರಾಸ್ತಾ ಅವರ ಕೊಡುಗೆ ಸ್ಮರಣೀಯವಾದುದು ಎಂದರು.

ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ 2024-25 ನೆಯ ಸಾಲಿನಲ್ಲಿ ಪಠ್ಯ- ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ, ಬಹುಮಾನಗಳನ್ನು ನೀಡಲಾಯಿತು.

   ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಅಭ್ಯಾಗತರನ್ನು ಸಂಸ್ಥೆಯ ಅಧ್ಯಾಪಕಿ  ರೌನಕ್ ಆರ ಸ್ವಾಗತಿಸಿದರು.  ಸಂಸ್ಥೆಯ ಅಧ್ಯಾಪಕಿಯರಾದ  ಮಮತಾ ಮತ್ತು ಜೂಲಿಯಾನ ಇವರುಗಳು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. 

ವಾರ್ಷಿಕ ವರದಿಯನ್ನು ಸಂಸ್ಥೆಯ ಆಡಳಿತಾಧಿಕಾರಿ ಮಧುಸೂಧನ್ ಶಿಂಧೆ ವಾಚಿಸಿದರು. ಸಂಸ್ಥೆಯ ಅಧ್ಯಾಪಕಿ ಜಯ ಶೆಣೈ ವಂದನಾರ್ಪಣೆ ಗೈದರು. ಸಂಸ್ಥೆಯ ಅಧ್ಯಾಪಕಿ ಶುಭಾಷಿಣಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top