ಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ 2024-25 ನೇ ಸಾಲಿನ ಪೋಷಕ-ಶಿಕ್ಷಕ ಸಭೆ
ಕಾರ್ಕಳ : ಕಾಂತಾವರದ ಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಪೋಷಕ ಶಿಕ್ಷಕ ಸಭೆಯು ಶಾಲೆಯ ಸಭಾಂಗಣದಲ್ಲಿ ಆ. 03 ರಂದು ಜರುಗಿತು.
ಶಿಕ್ಷಕ ಪೋಷಕ ಸಂಘದ ಅಧ್ಯಕ್ಷೆ ರೂಪ ಭಂಡಾರಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಗೆ ಬಂದಂತಹ ಅತಿಥಿ ಅಭ್ಯಾಗತರನ್ನು ಸ್ವಾಗತಿಸುವ ಮೂಲಕ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.
ಶಾಲೆಯ ಪ್ರಾಂಶುಪಾಲ ಪ್ರಕಾಶ್ ರಾವ್ ಸಭೆಯ ಉದ್ದೇಶವನ್ನು ತಿಳಿಸಿದರು.
ನಂತರ ಎಲ್ಲ ಪೋಷಕರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಆಡಳಿತ ನಿರ್ದೇಶಕ ಫಿಲಿಪ್ ಡಿಸಿಲ್ವ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಮಧುಸೂದನ್ ಶಿಂಧೆ ಭಾಗವಹಿಸಿದ್ದರು.
ಸಂಸ್ಥೆಯ ಶಿಕ್ಷಕಿ ಶುಭಾಶಿನಿ ಸ್ವಾಗತಿಸಿದರು, ಶಿಕ್ಷಕಿ ರೊನಕ್ ಅರಾ ವಂದಿಸಿದರು, ಶಿಕ್ಷಕ ಜಯಂತ್ ಭಂಡಾರಿ ನಿರೂಪಿಸಿದರು. ಲಘು ಉಪಾಹಾರದ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿರುತ್ತದೆ.































