ಪ್ರಕೃತಿ ವಿದ್ಯಾ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ : ಕನ್ನಡ ನುಡಿ ನಮನ

Picture of RB NEWS

RB NEWS

Bureau Report

ಕಾರ್ಕಳ: ನಗರದ ಪ್ರತಿಷ್ಠಿತ ಪ್ರಕೃತಿ ಶಿಕ್ಶಣ ಸಂಸ್ಥೆಯಲ್ಲಿ ೬೯ ನೆಯ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಸಂಸ್ಥೆಯ ಆಡಳಿತ ನಿರ್ದೇಶಕ ಫಿಲಿಫ್ ಎನ್ ಡಿ’ಸಿಲ್ವ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ,
ಕನ್ನಡ ನಾಡಿನ ಇತಿಹಾಸ, ಭವ್ಯ ಪರಂಪರೆ, ಕನ್ನಡ ಭಾಷೆಯ ವೈವಿಧ್ಯತೆ ಗಳನ್ನು ಕವಿ ವಾಣಿಯ ಮೂಲಕ ಪ್ರಸ್ತಾಪಿಸಿದರು. ವಿದ್ಯಾರ್ಥಿಗಳು ತನ್ನ ನಿತ್ಯ ಜೀವನದಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಬೇಕು. ಅಲ್ಲದೆ ಏಕತೆ , ಸಾಮರಸ್ಯದಿಂದ ಕನ್ನಡ ನಾಡು ನುಡಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯುತ ಕನ್ನಡ ನಾಡಿನ ಪ್ರಜೆಗಳಾಗಬೇಕೆಂದರು.

ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ…” ಎಂಬ ನಾಡಗೀತೆಯನ್ನು ಹಾಡುವುದರ ಮೂಲಕ ಕನ್ನಡ ಧ್ವಜಕ್ಕೆ ನಮನವನ್ನು ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಕನ್ನಡ ಶಿಕ್ಷಕಿ ಜಯ ಶೆಣೈ ಪ್ರಾಸ್ತಾವಿಕ ಮಾತನಾಡಿದರು.

ಅತಿಥಿ ಅಭ್ಯಾಗತರನ್ನು ಸಂಸ್ಥೆಯ ಶಿಕ್ಷಕಿ ಜೂಲಿಯಾನ ಇವರು ಸ್ವಾಗತಿಸಿದರು.

ಶಿಕ್ಷಕಿ ಸ್ನೇಹಲತಾ ವಂದನಾರ್ಪಣೆಗೈದರು. ಸಂಸ್ಥೆಯ ಕನ್ನಡ ಅಧ್ಯಾಪಕ ಜಯಂತ. ಏನ್. ಭಂಡಾರಿ ನಿರ್ವಹಿಸಿದರು.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top