
ಪ್ರಕೃತಿ ವಿದ್ಯಾಸಂಸ್ಥೆಯ ಪರಿಸರವ ನೋಡಿ ನಲಿ ಕಲಿ

ಕಾರ್ಕಳ : ಮಾನವ ನಿಸರ್ಗದ ವರರೂಪ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ. ಎಳೆವೆಯಲ್ಲಿ ಈ ಕುರಿತು ಜನಜಾಗೃತಿ ಮೂಡಿಸಿದಾಗ ಹೆಚ್ಚಿನ ರೀತ್ಯಾದಲ್ಲಿ ಪ್ರಯೋಜನವಾಗುತ್ತದೆ. ಜಗದ ಬೆಳಕನ್ನು ಕಂಡ ಮಗು ಪರಿಸರವನ್ನು ನೋಡಿ ನಲಿಯುತ್ತಾ ಕಲಿಯುತ್ತಾ ಬೆಳೆಯುತ್ತದೆ ಎಂದು ಕಾಂತಾವರ ಪ್ರಕೃತಿ ಸಂಸ್ಥೆಯ ಆಡಳಿತ ನಿರ್ದೇಶಕ ಪಿಲಿಫ್. ಎನ್. ಡಿ ' ಸಿಲ್ವ ಹೇಳಿದರು.


ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ಪರಿಸರವ ನೋಡಿ ನಲಿ- ಕಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಪಿಲಿಫ್. ಎನ್. ಡಿ ‘ ಸಿಲ್ವ ಅವರು ಸಂಸ್ಥೆಯ ಆವರಣದಲ್ಲಿ ಪುಟಾಣಿಗಳಿಗೆ ಪರಿಸರದಲ್ಲಿನ ವಿವಿಧ ಪಕ್ಷಿಗಳ ಪರಿಚಯ, ಪಕ್ಷಿಗಳ ಕಲರವ ಹಾಗೂ ವಿವಿಧ ಸಸ್ಯಗಳ ಮಾಹಿತಿಯನ್ನು ನೀಡುವುದರ ಮೂಲಕ ಸಂಸ್ಥೆಯ ಹೆಮ್ಮೆಯ ಪುಟಾಣಿಗಳಲ್ಲಿ ಪರಿಸರ ಪ್ರೇಮ, ಪರಿಸರ ಪ್ರಜ್ಞೆಯನ್ನು ಮೂಡಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಾಪಕಿಯರಾದ ದೀಕ್ಷಿತ, ಪೂರ್ಣಿಮಾ, ಮೊಂತಿ ವಿಲಿಯಂ ಡಿಸೋಜಾ ಉಪಸ್ಥಿತರಿದ್ದರು.


























