ಪ್ರಕೃತಿ ಉಳಿಸುವುದು ಮಾನವನ ಜವಾಬ್ದಾರಿ

Picture of RB NEWS

RB NEWS

Bureau Report

ಮೂಡುಬಿದಿರೆ: ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಕ್ಕಳ ದೃಷ್ಟಿಯಿಂದ ಬಹಳ ಉಪಯುಕ್ತವಾದುದು. ಪರಿಸರ ಉಳಿಸುವ ನಮ್ಮ ಪೂರ್ವಜರು ನಮಗೆ ಕಲಿಸಿದ ಪಾಠವನ್ನು ಉತ್ತಮ ರೀತಿಯ ಹಣ್ಣು ಹಂಪಲು ತಳಿಯ ಗಿಡವನ್ನು ಬೆಳೆಸುವ ಮೂಲಕ ಮಕ್ಕಳಿಗೂ ನಾವು ತಿಳಿಸಿ, ಕಲಿಸಬೇಕು ಎಂದು ಪ್ರಗತಿಪರ ಕೃಷಿಕ ಡಾ. ನಾಗರಾಜ ಶೆಟ್ಟಿ ಹೇಳಿದರು.

ಮೂಡುಬಿದರೆ ಸ್ಥಳೀಯ ರೋಟರಿ ಕೇಂದ್ರೀಯ ಶಾಲೆಯಲ್ಲಿ ಆಗಸ್ಟ್ 7 ರಂದು ವನಮಹೋತ್ಸವ ಮತ್ತು ಆಟಿ ಆಚರಣೆಯನ್ನು ದೀಪ ಬೆಳಗಿ, ಅಡಿಕೆ ತೆನೆಯನ್ನು ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿವಿಧ ತಳಿಯ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು.

ಆಟಿ ಆಧಾರಿತ ನಾಟಕ, ನೃತ್ಯದ ವಿವಿಧ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲೆ ರೂಪ ಮಸ್ಕರೇನಸ್, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ರವಿಕುಮಾರ್ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top