ಪ್ರಕರಣ ಐಟಿ ಸೆಕ್ಷನ್ ಅಡಿ ಸೆನ್ ಠಾಣೆಯಲ್ಲಿ ದಾಖಲಿಸಿದ್ದು ಸರಿಯಲ್ಲ : ಮುನೀರ್ ಕಾಟಿಪಳ್ಳ

Picture of RB NEWS

RB NEWS

Bureau Report

ಮಂಗಳೂರು : “ಕ್ರೈಸ್ತ ಹಾಗೂ ಮುಸ್ಲಿಮರ ಮದುವೆ ಹಾಲ್ ಗಳು, ಶಿಕ್ಷಣ ಸಂಸ್ಥೆಗಳನ್ನು ಹಿಂದುಗಳು ಬಹಿಷ್ಕರಿಸಬೇಕು…” ಎಂದು ಜನಾಂಗೀಯ ದ್ವೇಷ, ಧಾರ್ಮಿಕ ತಾರತಮ್ಯ, ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿದ ಡಾ. ಅರುಣ್ ಉಳ್ಳಾಲ್ ಮೇಲೆ ಮಂಗಳೂರು ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ, ಪ್ರಕರಣ ಐಟಿ ಸೆಕ್ಷನ್ ಅಡಿ ಸೆನ್ ಠಾಣೆಯಲ್ಲಿ ದಾಖಲಿಸಿದ್ದು ಸರಿಯಲ್ಲ. ಘಟನೆ ನಡೆದದ್ದು ಸಾಮಾಜಿಕ ಜಾಲತಾಣದಲ್ಲಿ ಅಲ್ಲ, ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ ಗ್ರಾಮದ ಕೇಶವ ಶಿಶು ಮಂದಿರದಲ್ಲಿ ಅದರ ಆಡಳಿತ ಸಮಿತಿ ಆಯೋಜಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಘಟನೆ ನಡೆದಿದೆ. ಆದುದರಿಂದ ಪ್ರಕರಣ ದಾಖಲಾಗಬೇಕಿರುವುದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ.

ಕಾರ್ಯಕ್ರಮದ ಆಯೋಜಕರು, ಇಂತಹ ಭಾಷಣಕ್ಕೆ ಅರುಣ್ ಉಳ್ಳಾಲ ಅವರಿಗೆ ಪ್ರೇರಣೆ ಒದಗಿಸಿದ ವೇದಿಕೆಯಲ್ಲಿದ್ದ ಕಲ್ಲಡ್ಕ ಪ್ರಭಾಕರ ಭಟ್ ಮುಂತಾದವರನ್ನು ಆರೋಪಿಯಾಗಿಸಿ ಪ್ರಕರಣ ದಾಖಲಿಸಬೇಕಿತ್ತು.

ಅದರ ಬದಲಿಗೆ ಐಟಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿರುವುದರಿಂದ ಪ್ರಕರಣ ದುರ್ಬಲಗೊಳ್ಳುವ, ಆರೋಪಿ ಬಚಾವಾಗುವ ಸಾಧ್ಯತೆಗಳಿವೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top