



ಪೌರಕಾರ್ಮಿಕರ ಆಶೋತ್ತರ ಈಡೇರಿಕೆ ಗುರಿ -ಯೋಗೀಶ್ ದೇವಾಡಿಗ ಅಧ್ಯಕ್ಷರು, ಕಾರ್ಕಳ ಪುರಸಭೆ
ಕಾರ್ಕಳ: ಪೌರಕಾರ್ಮಿಕರ ಆಶೋತ್ತರಗಳನ್ನು ಈಡೇರಿಸುವುದೇ ಗುರಿಯಾಗಿದೆ. ಅವರ ಕುಂದು ಕೊರತೆ ಆಲಿಸುವ ನಿಟ್ಟಿನಲ್ಲಿ ಸಭೆಯನ್ನು ಆಯೋಜಿಸಿ ಅವರ ಬೇಡಿಕೆ ಪಟ್ಟಿಯನ್ನು ಸ್ವೀಕರಿಸಿದ್ದೇನೆ. ಸರಕಾರದಿಂದ ಸಿಗುವಂತಹ ಸವಲತ್ತುಗಳನ್ನು ನೇರವಾಗಿ ಅವರ ಪಾಲಿಗೆ ಸಿಗುವ ಜವಾಬ್ದಾರಿ ಅಧಿಕಾರಿ ವರ್ಗದಾಗಿದೆ. ಪೌರಕಾರ್ಮಿಕರ ಕುರಿತು ತಾರಮತ್ಯೆ ಎಂದಿಗೂ ಸಹಿಸಲಾರೆ ಎಂದು ಕಾರ್ಕಳ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ ತಿಳಿಸಿದರು.
ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಪೌರಕಾರ್ಮಿಕರ ಗಣನೀಯ ಸೇವೆ ಕಾರಣವಾಗಿದೆ. ವರ್ಷದ ಸರ್ವ ಋತು ಕಾಲದಲ್ಲೂ ತಮ್ಮ ಸೇವೆಯನ್ನು ಚಾಚುತಪ್ಪದೇ ಪರಿಪಾಲನೆ ಮಾಡುತ್ತಾ ಬಂದಿದ್ದಾರೆ. ಅವರನ್ನು ಗೌರವ ಭಾವನೆಯಲ್ಲಿ ನಾವೆಲ್ಲರೂ ಕಾಣಬೇಕು ಎಂಬ ಸಲಹೆ ನೀಡಿದರು.
ಸ್ವಚ್ಚತೆಗೆ ಇನ್ನಷ್ಟು ವೇಗ…
ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ನಾಗರಿಕರ ಸಹಕಾರ ಕೋರಲಾಗಿದೆ.
ಪುರಸಭಾ ವ್ಯಾಪ್ತಿಯಲ್ಲಿ ಪ್ರತಿಯೊಂದು ವ್ಯಾಪಾರ ಕೇಂದ್ರದ ಮುಂದೆ ಕಸದ ಬುಟ್ಟಿಯನ್ನು ಇಡುವಂತೆ ಸೂಚನೆ ನೀಡಲಾಗಿದೆ. ಗ್ರಾಹಕರು ಖರೀದಿಸುವ ಯಾವುದೇ ಯಾವುದೇ ಪರಿಕರಗಳ ತ್ಯಾಜ್ಯ ವನ್ನು ಆ ಕಸದ ಬುಟ್ಟಿಗೆ ಹಾಕಿಸುವ ಹೊಣೆಗಾರಿಕೆ ವ್ಯಾಪಾರ ಕೇಂದ್ರ ಪರವಾನಿಗೆ ದಾರದಾಗಿರುತ್ತದೆ. ಅಂತಹ ಕಾರ್ಯ ಯಶಸ್ಸು ಆದಾಗ ಪೌರ ಕಾರ್ಮಿಕರಿಗೂ ಸಹಕಾರಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.


ಗೃಹಭಾಗ್ಯ ಯೋಜನೆ, ಆರೋಗ್ಯ ಕಾರ್ಡ್, ವಿದ್ಯಾನಿಧಿ ಸೇರಿದಂತೆ ಎಲ್ಲ ಸವಲತ್ತುಗಳು ಅವರ ಮನೆಯ ಬಾಗಿಲಿಗೆ ತಲುಪಿಸುವ ಹೊಣೆಗಾರಿಕೆ ಇಲಾಖಾಧಿಕಾರಿಗಳ ಮೇಲಿದೆ. ಜೊತೆಗೆ ಅವರ ನಿತ್ಯ ಕಾಯಕಕ್ಕೆ ಅಗತ್ಯ ಇರುವ ಪರಿಕರಗಳನ್ನು ಒದಗಿಸಿಬೇಕು. ಕಾರ್ಕಳ ಪುರಸಭೆಯಲ್ಲಿ ಒಟ್ಟು ೩೪ ಮಂದಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಸೇವಾ ನಿಗದಿಗಿಂತ ಅವರ ಪ್ರಮಾಣಿಕ ಕರ್ತವ್ಯ ಗಮನಿಸಲೇ ಬೇಕೆಂದರು.
ಪರಿಸರ ಕಾಳಜಿಯೊಂದಿಗೆ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರ ಆರೋಗ್ಯದ ಕುರಿತು ಮುನ್ನೆಚ್ಚರಿಕೆ ವಹಿಸಿಕೊಳ್ಳಲೇ ಬೇಕು ಎಂಧರು.
ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಉಪಾಧ್ಯಕ್ಷ, ಕೆ.ಪಿ ಪ್ರಶಾಂತ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಪಕ್ಷ , ಆಡಳಿತ ಪಕ್ಷದ ಸದಸ್ಯರೆಂಬ ಭೇದಭಾವ ತೋರದೇ ಪ್ರತಿಯೊಬ್ಬ ಸದಸ್ಯರ ಬಗ್ಗೆ ಗೌರವದಿಂದ ಕಾಣುತ್ತೇನೆ. ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ಟೀಕೆ,ಟಿಪ್ಪಣಿಯ ಜೊತೆ ಉತ್ತಮ ಸಲಹೆ ಸೂಚನೆಗಳು ಬಂದಾಗ ಆಡಳಿತಕ್ಕೆ ಪೂರಕವಾಗುತ್ತದೆ.
-ಯೋಗೀಶ್ ದೇವಾಡಿಗ, ಅಧ್ಯಕ್ಷರು ಪುರಸಭೆ ಕಾರ್ಕಳ




































