ಪೊಲೀಸ್ ವಸತಿಗೃಹದಲ್ಲಿ ಮಗುವಿನ‌ ರಕ್ಷಣೆ !

Picture of RB NEWS

RB NEWS

Bureau Report

ಕಾರ್ಕಳ : ಕಾರ್ಕಳ ಪೊಲೀಸ್ ವಸತಿಗೃಹದಲ್ಲಿ‌ 3 ವರ್ಷದ ಮಗುವೊಂದು ಕೋಣೆಯ ಚಿಲಕ ಹಾಕಿಕೊಂಡ ಬೆಳವಣಿಗೆಯಿಂದ ಹೆತ್ತವರ ಆತಂಕಕ್ಕೂ‌ ಕಾರಣವಾಗಿತ್ತು.‌ ಸ್ಥಳಕ್ಕೆ ಅಗಮಿಸಿದ ಅಗ್ನಿಶಾಮಕದಳ‌ ಕಾರ್ಯಾಚರಣೆ ನಡೆಸಿ ಮಗುವನ್ನು ಸುರಕ್ಷಿತವಾಗಿ ಹೆತ್ತವರ ಮಡಿಲಿಗೆ ಒಪ್ಪಿಸಿದ್ದಾರೆ.

ರವಿವಾರ ಬೆಳಿಗ್ಗೆ 9.45ರ ವೇಳೆ ಈ ಕಾರ್ಯಚರಣೆಯನ್ನು ಕಾರ್ಕಳ ಅಗ್ನಿಶಾಮಕ‌ದಳ ನಡೆಸಿದೆ.

ಪೊಲೀಸ್ ಓರ್ವರ ಮಗು ಹರ್ಷವರ್ಧನ (2) ಆಡುತ್ತಾ ಬಾಗಿಲ ಚಿಲಕ‌ ಹಾಕಿರುವುದರಿಂದ ಹೆತ್ತವರ ಸಂಪರ್ಕಕ್ಕೆ ಸಾಧ್ಯವಾಗಿರಲಿಲ್ಲ.

ಸ್ಥಳಕ್ಕೆ ಅಗಮಿಸಿದ ಅಗ್ನಿಶಾಮಕ‌ದಳದ ಸಿಬ್ಬಂದಿ ಜಯಮೂಲ್ಯ ಅವರ ಕಾರ್ಯದಕ್ಷತೆಯಿಂದಾಗಿ ಕೇವಲ 2 ನಿಮಿಷದ ಅವಧಿಯೊಳಗಾಗಿ ಮಗುವನ್ನು ಹೆತ್ತವರಿಗೆ ಒಪ್ಪಿಸಲು ಸಾಧ್ಯವಾಯಿತು.
ಕಾರ್ಯವರಣೆಯಲ್ಲಿ ಕಾರ್ಕಳ ಅಗ್ನಿಶಾಮಕ‌ದಳದ ಠಾಷಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಅಚ್ಚುತಾ ಕರ್ಕೇರಾ, ಹರಿಪ್ರಸಾದ್, ದಿನೇಶ್, ಬಸವರಾಜ ಪಾಲ್ಗೊಂಡರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top