ಪೊಲೀಸ್ ಎನ್ಕೌಂಟರ್ ವಿಕ್ರಂ ಬಲಿ
ಕಾರ್ಕಳ: ಹೆಬ್ರಿ ಸಮೀಪದ ತೆಂಗುಮಾರು ಪೀತ್ ಬೈಲ್ನಲ್ಲಿ ಮಂಗಳವಾರ ನಸುಕಿನ ಜಾವದಲ್ಲಿ ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್ಕೌಂಟರ್ ಗೆ ನಕ್ಸಲ್ ಹೋರಾಟಗಾರ ವಿಕ್ರಂ ಗೌಡ ಬಲಿಯಾಗಿದೆ.
ಸೋಮಾವಾರ ರಾತ್ರಿಯಿಂದ ಈ ಕಾರ್ಯಚರಣೆ ನಡೆದಿದ್ದು, ಮಂಗಳವಾರ ನಸುಕಿನ ಜಾವದಲ್ಲಿ ನಕ್ಸಲ್ ನಿಗ್ರಹ ದಳವು ಖಚಿತ ಮಾಹಿತಿ ಪಡೆದು ಈ ಎನ್ಕೌಂಟರ್ ನಡೆಸಿದೆ. ಆ ಸಂದಭದಲ್ಲಿ ವಿಕ್ರಂ ಬಲಿಯಾದರೆ ಇತರ ಇಬ್ಬರು ಪರಾರಿಯಾಗಿದ್ದಾರೆ ಎಂಬ ಮಾಹಿತಇ ಲಭಿಸಿದೆ.
ನವಂಬರ್ ಮೊದಲವಾರದಂದು ನಕ್ಸಲ್ ತಂಡ ಈದು ಗ್ರಾಮದ ಮುಸ್ಲಿಂ ಎರಿಯಾದಲ್ಲಿ ಕಾಣ ಸಿಕ್ಕಿತು. ಈ ಹಿನ್ನಲ್ಲೆಯಲ್ಲಿ ಆರ್ .ಬಿ.ನ್ಯೂಸ್ ಸಮಗ್ರ ವರದಿಯನ್ನು ಪ್ರಕಟಿಸಿದನ್ನು ಸ್ಮರಿಸಿಕೊಳ್ಳಬಹುದು.
ಮಾಹಿತಿ ಹೊರಬೀಳುತ್ತಿದ್ದಂತೆ ಧರ್ಮಸ್ಥಳ ಬಳಿಯಲ್ಲಿ ಶಂಕಿತ ನಕ್ಸಲ್ ಬಂಧನವಾಗಿದ್ದು, ಮುಂದುವರಿದ ಭಾಗವಾಗಿ ಶೃಂಗೇರಿಯ ಮನೆಯೊಂದರಲ್ಲಿ ಕಾರ್ಯಚರಣೆ ನಡೆಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.


ಈದು ಗ್ರಾಮದ ಬೊಲ್ಲೊಟ್ಟು ರಾಮಪ್ಪ ಪೂಜಾರಿಯ ಮನೆಯಲ್ಲಿ ಅಂದು ಎನ್ ಕೌಂಟರ್ ನಡೆದಿತ್ತು. ಆ ಮನೆ ಇಂದು ಸಂಪೂರ್ಣ ಬದಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ನೀಡಿದ ಭರವಸೆಗಳು ಹುಸಿಯಾಗಿದೆ.
ನವಂಬರ್ ೧೭ರಂದು ಈದು ಎನ್ಕೌಂಟರ್ ಗೆ ೨೧ ವರ್ಷ ಸಂದಾಯವಾಗಿದ್ದು ಈ ಹಿನ್ನಲ್ಲೆಯಲ್ಲಿ ಎಎನ್ಎಫ್ ತಂಡವು ಕಾರ್ಯಚರಣೆ ತೀವ್ರ ಗೊಳಿಸಿತು.
ಈದುವಿನಲ್ಲಿ ಕಾಣಿಸಿಕೊಂಡ ಘಟನೆಯಿಂದ… ಹೆಬ್ರಿಯ ತೆಂಗುಮಾರು ಪೀತ್ ಬೈಲ್ ಎನ್ ಕೌಂಟರ್ ಆಗುವ ತನಕ ….

ವಿಕ್ರಂ ಗೌಡ ಕಳೆದ 20 ವರ್ಷಗಳಲ್ಲಿ ಪಶ್ಚಿಮ ಘಟ್ಟದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯಾನಾಗಿ ತೊಡಗಿಸಿಕೊಂಡಿದ್ದನು. ನಕ್ಸಲ್ ಪ್ರಮುಖರಾದ ಕೆಲವರು ಪತ್ರಕರ್ತೆ ಗೌರಿ ಲಂಕೇಶ್ ಮಧ್ಯಸ್ಥಿಕೆಯಲ್ಲಿ ಚಿಕ್ಕಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಮ್ಮಖದಲ್ಲಿ ಶರಣಾಗತಿಯಾದ ಬಳಿಕ ಪಶ್ಚಿಮಘಟ್ಟದ ನಕ್ಸಲ್ ತಂಡಕ್ಕೆ ಈತನೇ ನಾಯಕತ್ವ ವಹಿಸಿದ.
2012 ರಲ್ಲಿ ಸುಬ್ರಹ್ಮಣ್ಯ ಹಳೆಗುಂಡಿ ಪರಿಸರದಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿದ ಬಳಿಕ ಕಾರ್ಕಳ ಭಾಗದಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸಿಕೊಂಡಿತು.
ಕೇರಳದ ವಯನಾಡು ದಟ್ಟ ಅರಣ್ಯ ಪ್ರದೇಶವನ್ನು ನಕ್ಸಲೀಯರು ತಮ್ಮ ಅಡ್ಡೆಯಾಗಿ ಪರಿವರ್ತಿಸಿಕೊಂಡಿದ್ದರು.
ಕೇರಳದಲ್ಲಿ ನಕ್ಸಲ್ ವಿರುದ್ಧ ಎನ್ ಕೌಂಟರ್ ಜೋರಾಗಿದ್ದು ಮತ್ತೊಂದೆಡೆ ವಯನಾಯ ಲೋಕಸಭಾ ಉಪಚುನಾವಣೆಯಲ್ಲಿ ರಾಷ್ಟ್ರಮಟ್ಟದ ನಾಯಕರುಗಳು ಸ್ವರ್ಧಾಕಣದಲ್ಲಿ ಇದ್ದುದರಿಂದ ಭದ್ರತಾ ವ್ಯವಸ್ಥೆ ತೀವ್ರ ಬಿಗುಗೊಳಿಸಲಾಗಿತ್ತು.
ಮಾಹಿತಿಯ ಪ್ರಕಾರ ಕುದುರೆಮುಖ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 6ರಿಂದ 7 ಶಂಕಿತ ನಕ್ಸಲೀಯರ ತಂಡಗಳಿವೆ ಎಂದು ತಿಳಿದುಬಂದಿದೆ.
ದೈನಂದಿನದ ಆಹಾರ ಪದಾರ್ಥ ಸಂಗ್ರಹಣೆಗಾಗಿ ವಿಕ್ರಮ ಗೌಡ ಹಾಗೂ ಇತರರು ಹೆಬ್ರಿಯ ತೆಂಗುಮಾರ್ ಪೀತ್ ಬೈಲ್ ಮನೆಯೊಂದಕ್ಕೆ ಬರುತ್ತಾನೆ ಎಂಬ ಖಚಿತ ಮಾಹಿತಿಯನ್ನು ಪೊಲೀಸ್ ಗುಪ್ತಚರ ವಿಭಾಗವು ಸಂಗ್ರಹಿಸಿತು.
ಅದರನ್ವಯ ನಕ್ಸಲ್ ನಿಗ್ರಹ ದಳದ ತಂಡವು ಎಲ್ಲಾ ರೀತಿಯಲ್ಲಿ ಸಜ್ಕಾಗಿ ಸೋಮವಾರ ರಾತ್ರಿ ವೇಳೆಯಲ್ಲಿ ಆ ಪ್ರದೇಶದಲ್ಲಿ ಬಿಟ್ಟು ಬಿಟ್ಟಿತ್ತು. ಮಂಗಳವಾರ ನಸುಕಿನ ಜಾವ ರಾತ್ರಿ 1 ಗಂಟೆಯ ಬಳಿಕ ನಕ್ಸಲ್ ಹೋರಾಟಗಾರ ವಿಕ್ರಂ ಗೌಡ ಹಾಗೂ ಇತರರು ಹಜ್ಜೆ ಹಾಕಿ ಆ ಮನೆಯತ್ತ ಬರುತ್ತಿದ್ದರು. ಕಣ್ಗಾವಲು ಇರಿಸಿದ ಪೊಲೀಸರ ಬಂದುಯಕಿನ ಗುಂಡು ವಿಕ್ರಂನ ದೇಹದೊಳಕ್ಕೆ ಸೇರಿತು. ಘಟನಾ ಸ್ಥಳದಲ್ಲಿ ವಿಕ್ರಂ ನ ಪ್ರಾಣ ಪಕ್ಷಿ ಹಾರಿತು. ಇತರರು ಓಡಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಈ ಎಲ್ಲಾ ಬೆಳವಣಿಗೆಯ ನಂತರ ನಕ್ಸಲೀಯರು ತಮ್ಮ ಅಡ್ಡೆಯನ್ನು ಕಾರ್ಕಳಕ್ಕೆ ಬದಲಾಯಿಸಿಕೊಂಡಿದ್ದರು. ಅದು ಈದುವಿನಲ್ಲಿ ಕಾಣಿಸಿಕೊಂಡ ಘಟನೆಯಿಂದ… ಹೆಬ್ರಿಯ ತೆಂಗುಮಾರ್ ಪೀತ್ ಬೈಲ್ ಎನ್ ಕೌಂಟರ್ ಆಗುವ ತನಕ ….































