ಪುತ್ತಿಗೆ ಸಂಪರ್ಕ ಸೇತುವೆ ಹಾಗೂ ಸಂಪಿಗೆಯ ಪ್ರವೇಶ ದ್ವಾರ ಉದ್ಘಾಟನೆ

Picture of RB NEWS

RB NEWS

Bureau Report

ಮೂಡುಬಿದಿರೆ : ಕರ್ನಾಟಕ ಸರಕಾರದಿಂದ ಬಿಡುಗಡೆಗೊಂಡ 2 ಕೋಟಿ ರೂಪಾಯಿ ಅನುದಾನದಲ್ಲಿ ಪುತ್ತಿಗೆ ದೇವಾಲಯದ ಎದುರು ನಾಗು ನದಿಗೆ ಅಡ್ಡಲಾಗಿ ನೂತನವಾಗಿ ನಿರ್ಮಿಸಿರುವ ಸೇತುವೆಯನ್ನು ಮಾರ್ಚ್ 1 ರಂದು ಶಾಸಕ ಉಮಾನಾಥ ಕೋಟ್ಯಾನ್ ಲೋಕಾರ್ಪಣೆಗೈದರು.


ಅದೇ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ಸಂಪಿಗೆಯಲ್ಲಿ ನಿರ್ಮಿಸಿದ ಸುಂದರ ಪ್ರವೇಶ ದ್ವಾರದ ಉದ್ಘಾಟನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿದರು.

ಪುತ್ತಿಗೆ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ, ಕೆ.ಎಂ.ಎಫ್.ನ ಸುಚರಿತ ಶೆಟ್ಟಿ, ಹಾಗೂ ಇತರ ಮುಂದಾಳುಗಳು ಹಾಜರಿದ್ದರು.

ಮುಗ್ರೋಡಿ ನಿರ್ಮಾತ್ರಗಳ ಸಂಮಾನ ಈ ಸಂದರ್ಭದಲ್ಲಿ ನಡೆಯಿತು.
ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ದೇವರ ಬಿಂಬ ಶಯ್ಯಾಧಿವಾಸ, ಪ್ರಾಸಾದಾಧಿವಾಸ, ಹೋಮ ಹವನಾದಿಗಳು ನಡೆದವು.

ಸಮಿತಿಯ ವೇ.ಮೂ.ಅನಂತಕೃಷ್ಣ ಭಟ್, ಶಿವಪ್ರಸಾದ್ ಆಚಾರ್, ಧನ ಕೀರ್ತಿ ಬಲಿಪ, ಡಾ.ಮೋಹನ ಆಳ್ವ, ಶ್ರೀಪತಿ ಭಟ್, ವಿದ್ಯಾ ರಮೇಶ್ ಭಟ್, ನೀಲೇಶ್ ಶೆಟ್ಟಿ, ಸಂದೀಪ್ ಶೆಟ್ಟಿ, ದಯಾನಂದ ದೇವಾಡಿಗ ಹಾಗೂ ಇತರರು ಹಾಜರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top