








ಪುತ್ತಿಗೆ ಬ್ರಹ್ಮಕಲಶೋತ್ಸವ ವಿವಿಧ ಸಮಿತಿಗಳ ರಚನೆ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿ ತಲುಪಿದೆ.
ಇದೇ ಸಂದರ್ಭದಲ್ಲಿ ರವಿವಾರದಂದು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಬಂಧ ವಿವಿಧ ಸಮಿತಿಗಳ ರಚನೆ ಮಾಡಲಾಯಿತು.


ಊರ ಪರವೂರ ಭಕ್ತಾದಿಗಳು ಪ್ರತೀ ದಿನವೂ ಕರಸೇವೆ ಮಾಡುವ ಮೂಲಕ ಸಹಕರಿಸುತ್ತಿದ್ದಾರೆ.
ದೇವಾಲಯದ ಅಡಿಗಳ್ ಅನಂತ ಕೃಷ್ಣ ಭಟ್, ಶ್ರೀಪತಿ ಭಟ್, ವಿದ್ಯಾ ರಮೇಶ್ ಭಟ್, ಹಾಗೂ ಅನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ , ದೇವಾಲಯದ ಅರ್ಚಕರು , ಪುರೋಹಿತರು, ನಾಗರಿಕರು ಹಾಜರಿದ್ದರು.






































